ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ದಳಪತಿ ವಿಜಯ್ ಕಾಂಬಿನೇಷನ್‌ನ ಲಿಯೋ ಸಿನಿಮಾದಲ್ಲಿ ಡ್ರಗ್ಸ್ ವೈಭವೀಕರಣ ಮಾಡಲಾಗಿದೆ ಎನ್ನುವ ಆರೋಪದ ಮೇರೆಗೆ  ನಟ ವಿಜಯ್ ಮತ್ತು ಸಿನಿಮಾತಂಡದ ವಿರುದ್ಧ ದೂರು ದಾಖಲಾಗಿದೆ.  

ತಮಿಳಿನ ಸ್ಟಾರ್ ನಟ, ದಳಪತಿ ವಿಜಯ್ ಸದ್ಯ ಬಹುನಿರೀಕ್ಷೆಯ ಲಿಯೋ ಸಿನಿಮಾದಲ್ಲಿ ನಿರತರಾಗಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾದಿಂದ ಒಂದು ಹಾಡು ರಿಲೀಸ್ ಮಾಡಲಾಗಿತ್ತು ಆದರೀಗ ಆ ಹಾಡು ವಿವಾದಕ್ಕೆ ಸಿಲುಕಿದೆ. ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಜೂನ್ 22ರಂದು ಲಿಯೋ ಚಿತ್ರದಿಂದ 'ನಾ ರೆಡಿ.... ' ಎನ್ನುವ ಹಾಡನ್ನು ಬಿಡುಗಡೆಯಾಗಿದೆ. ಸದ್ಯ ರಿಲೀಸ್ ಆಗಿರುವ ಲಿಯೋ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೀಗ ಆ ಹಾಡು ಸಿನಿಮಾತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಾಡಿನಲ್ಲಿ ಡ್ರಗ್ಸ್ ಸೇವನೆ ಮತ್ತು ರೌಡಿಸಂ ಅನ್ನು ಅತಿಯಾಗಿ ವೈಭವೀಕರಿಸಲಾಗಿದೆ ಎನ್ನುವ ಆರೋಪದ ಮೇಲೆ ಸಿನಿಮಾತಂಡ ಹಾಗೂ ನಟ ವಿಜಯ್ ವಿರುದ್ಧ ದೂರು ದಾಖಲಾಗಿದೆ. 

ನಟ ವಿಜಯ್ ಇತ್ತೀಚಿಗಷ್ಟೆ 49ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಆಗಿ ಹಾಡನ್ನು ರಿಲೀಸ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದರು. ಇದೀಗ ಆ ಹಾಡು ಸಿನಿಮಾ ನಿರ್ಮಾಪಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಚೆನ್ನೈನ ಕೊರುಕ್ಕುಪ್ಪೆಟ್ಟೈ ಮೂಲದ ಆರ್‌ಟಿಐ ಸೆಲ್ವಂ ಎಂಬುವವರು, ನಾ ರೆಡಿ ಹಾಡಿನಲ್ಲಿ ಡ್ರಗ್ಸ್ ಸೇವನೆ ಮತ್ತು ರೌಡಿಸಂ ಅನ್ನು ವೈಭವೀಕರಿಸಿದ್ದಾರೆ ಎಂದು ವಿಜಯ್ ಮತ್ತು ಲಿಯೋ ತಂಡದ ವಿರುದ್ಧ ದೂರು ದಾಖಲಿಸಿದ್ದಾರೆ.

ಸೆಲ್ವಂ ಎಂಬುವವರು ಜೂನ್ 25 ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದು, ಜೂನ್ 26ರ ಬೆಳಗ್ಗೆ 10 ಗಂಟೆ ಸುಮಾರಿಗೆ ಅರ್ಜಿ ಸಲ್ಲಿಸಿದರು. ಸಿನಿಮಾತಂಡ ಹಾಗೂ ವಿಜಯ್ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ತೆಲಂಗಾಣದಲ್ಲಿ ಡಿಕೆ ‘ಶಿವ’ ತಾಂಡವ; ಕೈಗೊಂಬೆಯಾದ್ರು ಖರ್ಗೆ: ತಮಿಳ್ನಾಡು ರಾಜಕೀಯಕ್ಕೆ ಧುಮುಕಲು ದಳಪತಿ ರೆಡಿ

ಅಂದಹಾಗೆ ಮಾದಕ ವಸ್ತು ಬಳಕೆಯ ವಿರುದ್ಧ ಚೆನ್ನೈ ಪೊಲೀಸರು ನಗರದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ಬಗ್ಗೆ ವಿಜಯ್ ಅಭಿಮಾನಿಗಳಿಗೂ ಗೊತ್ತಿರುವ ವಿಚಾರ. ಈ ಕಾರ್ಯಕ್ರಮದಲ್ಲಿ ನಟ ಕಾರ್ತಿ ಮತ್ತು ವಿಜಯ್ ಸಹೊದರರು ಭಾಗವಹಿಸಿದ್ದರು. ಇದೀಗ ವಿಜಯ್ ವಿರುದ್ಧೆ ಕೇಸ್ ಬಿದ್ದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 

ಲಿಯೋ ಸಿನಿಮಾ ಬಗ್ಗೆ 

ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಲಿಯೋ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಲೋಕೇಶ್ ಕನಗರಾಜ್ ಅವರೇ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ದಳಪತಿ ವಿಜಯ್ ನಾಯಕನಾಗಿ ಕಾಣಿಸಿಕೊಂಡರೆ ಬಾಲಿವುಡ್ ಸ್ಟಾರ್ ಸಂಜಯ್ ದತ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಕೆಜಿಎಫ್-2 ಸಿನಿಮಾ ಬಳಿಕ ಸೌತ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಸಂಜಯ್ ದತ್ ದಳಪತಿ ಜೊತೆ ಕಾದಾಟಕ್ಕೆ ಇಳಿದಿದ್ದಾರೆ. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಪ್ರಭಾಸ್ , ದಳಪತಿ ವಿಜಯ್ ಯಾರೂ ಅಲ್ಲ, ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಈಗ ಇವರೇ ನೋಡಿ

ಈ ಸಿನಿಮಾದಲ್ಲಿ ವಿಜಯ್‌ದೆ ಜೋಡಿಯಾಗಿ ನಟಿ ತ್ರಿಷಾ ಕಾಣಿಸಿಕೊಂಡಿದ್ದಾರೆ. ಅನೇಕ ವರ್ಷಗಳ ಬಳಿಕ ತ್ರಿಷಾ ಮತ್ತು ವಿಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹಿಟ್ ಆನ್‌ಸ್ಕ್ರೀನ್ ಪೇರ್‌ಗಳಲ್ಲಿ ವಿಜಯ್ ಮತ್ತು ತ್ರಿಷಾ ಜೋಡಿ ಕೂಡ ಒಂದು. ಇಬ್ಬರನ್ನು ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಈ ಬಹುನಿರೀಕ್ಷೆಯ ಸಿನಿಮಾ ಅಕ್ಟೋಬರ್ 19ರಂದು ರಿಲೀಸ್ ಆಗುತ್ತಿದೆ.