Complaint Filed Against Vicky Kaushal: ಕತ್ರೀನಾ ಗಂಡನ ವಿರುದ್ಧ ಕೇಸ್ ಮದುವೆಯಾಗಿ ಹೊಸದರಲ್ಲೇ ಕೇಸ್‌ನಲ್ಲಿ ಸಿಕ್ಕಾಕೊಂಡ ನಟ
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ವಿಕ್ಕಿ ಕೌಶಲ್(Vicky Kaushal) ಈಗ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನಟಿ ಕತ್ರೀನಾ ಕೈಫ್(Katrina Kaif) ಅವರನ್ನು ವರಿಸಿದ ನಟ ವಿಕ್ಕಿ ವಿರುದ್ಧ ಇಂದೋರ್‌ನ ನಿವಾಸಿಯೊಬ್ಬರು ಕೇಸು ದಾಖಲಿಸಿದ್ದಾರೆ. ತಮ್ಮ ನಂಬರ್ ಪ್ಲೇಟ್‌ನ್ನು ಸಿನಿಮಾದಲ್ಲಿ ವಿಕ್ಕಿ ಕೌಶಲ್ ಬಳಸಿಕೊಂಡಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಬಾಲಿವುಡ್ (Bollywood) ನಟಿ ಸಾರಾ ಅಲಿ ಖಾನ್(Sara Ali Khan) ಜೊತೆಗೆ ವಿಕ್ಕಿ ಕೌಶಲ್ ಬೈಕ್ ರೈಡ್(Bike Ride) ಮಾಡುತ್ತಿರುವಾಗ ತೆಗೆದಿರುವ ಫೋಟೋ ಪೋಸ್ಟ್ ಮಾಡಿದ ವ್ಯಕ್ತಿ ಅದರಲ್ಲಿರುವ ನಂಬರ್ ಪ್ಲೇಟ್(Number Plate) ತಮ್ಮದು ಎಂದು ಹೇಳಿದ್ದಾರೆ. ಫೋಟೋ ಹಾಗೂ ದಾಖಲೆ ಸಮೇತ ಕೇಸು ದಾಖಲಿಸಲಾಗಿದೆ.
ದೂರು ನೀಡಿದ ಜೈ ಸಿಂಗ್ ಯಾದವ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಸಿನಿಮಾದಲ್ಲಿ ಬಳಸಿರುವ ವಾಹನದ ನಂಬರ್ ನನ್ನದು. ಇದು ಸಿನಿಮಾ ತಂಡಕ್ಕೆ ತಿಳಿದಿದೆಯಾ ಇಲ್ಲವಾ ಎಂಬುದು ಗೊತ್ತಿಲ್ಲ. ಆದರೆ ಇದು ಕಾನೂನು ಪ್ರಕಾರ ತಪ್ಪು. ನನ್ನ ನಂಬರ್ ಪ್ಲೇಟ್ ನಂಬರನ್ನು ನನ್ನ ಅನುಮತಿ ಇಲ್ಲದೆ ಬಳಸಬಾರದು. ನಾನು ಈ ಬಗ್ಗೆ ದೂರು ಕೊಟ್ಟಿದ್ದೇನೆ. ಈ ವಿಚಾರವಾಗಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಹೊಸ ಮನೆಯಲ್ಲಿ ಕ್ರಿಸ್ಮಸ್, ವಿಕ್ಕಿ-ಕತ್ರೀನಾ ಸ್ವೀಟ್ ಹಗ್
ಈ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಇಂದೋರ್‌ನ ಬಂಗಾಂಗದ ಸಬ್ ಇನ್ಸ್‌ಪೆಕ್ಟರ್ ನಾನು ಒಂದು ದೂರು ಸ್ವೀಕರಿಸಿದ್ದೇವೆ. ನಾವು ನಂಬರ್ ಪ್ಲೇಟ್ ಅಕ್ರಮವಾಗಿ ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಮೋಟರ್ ವೆಹಿಕಲ್ಸ್ ಆಕ್ಟ್ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಿನಿಮಾ ಯುನಿಟ್ ಇಂದೋರ್‌ನಲ್ಲಿದ್ದರೆ ನಾವು ಅವರ ವಿಚಾರಣೆ ಮಾಡುತ್ತೇವೆ ಎಂದಿದ್ದಾರೆ.

ಯಾದವ್ ಅವರು ತಮ್ಮ ಲೈಸೆನ್ಸ್ ಪ್ಲೇಟ್ ನಂಬರ್ ಹಾಗೂ ಕಂಪ್ಲೇಂಟ್ ಲೆಟರ್ ಪ್ರತಿಯನ್ನು ಅವರು ಶೇರ್ ಮಾಡಿದ್ದಾರೆ. ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಅವರ ಡಿ ಗ್ಲಾಮ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ ಇಬ್ಬರೂ ಸುದ್ದಿಯಾಗಿದ್ದರು. ಫೋಟೋದಲ್ಲಿ ಇಬ್ಬರು ಬಾಲಿವುಡ್ ಸ್ಟಾರ್‌ಗಳು ಇಂದೋರ್ ಸ್ಟ್ರೀಟ್‌ನಲ್ಲಿ ಸುತ್ತಾಡುವುದನ್ನು ಕಾಣಬಹುದು. ಸ್ಟಾರ್ ನಟ ಹಾಗೂ ನಟಿ ತಮ್ಮ ಮುಂಬರುವ ಸಿನಿಮಾಗಾಗಿ ಶೂಟಿಂಗ್ ಮಾಡುತ್ತಿದ್ದರು.
ಈಗಷ್ಟೇ ಮದ್ವೆಯಾದ ವಿಕ್ಕಿ ಕೌಶಲ್ ಮೇಲೆ ಸಾರಾಗೆ ಸ್ಪೆಷಲ್ ಇಂಟ್ರೆಸ್ಟ್
ನಟರು ವಸತಿ ಪ್ರದೇಶದ ಟೆರೇಸ್‌ನಲ್ಲಿ ದೃಶ್ಯಗಳನ್ನು ಚಿತ್ರೀಕರಿಸುತ್ತಿರುವುದು ಕಂಡುಬಂದಿದೆ. ವಿಕ್ಕಿ ಕ್ಯಾಶುಯಲ್ ಟೀ, ಜೀನ್ಸ್ ಮತ್ತು ಜಾಕೆಟ್ ಧರಿಸಿದ್ದರೆ, ಸಾರಾ ಹಳದಿ ಸೀರೆಯನ್ನು ಧರಿಸಿದ್ದರು. ಇಬ್ಬರೂ ಯಾವ ಚಿತ್ರಕ್ಕಾಗಿ ಚಿತ್ರೀಕರಣ ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಲಕ್ಷ್ಮಣ್ ಉಟೇಕರ್ ನಿರ್ದೇಶನದ ಹೆಸರಿಸದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದು ಎಂದು ಹೇಳಲಾಗುತ್ತಿದೆ.
ಛಾಯಾಗ್ರಾಹಕ-ನಿರ್ದೇಶಕರು ತಮ್ಮ ಹೊಸ ಯೋಜನೆಗಾಗಿ ಹೊಸ ಜೋಡಿಯನ್ನು ಅನ್ವೇಷಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.
ಪಿಟಿಐಗೆ ನೀಡಿದ ಹೇಳಿಕೆಯಲ್ಲಿ, ನಾನು ಯಾವಾಗಲೂ ವಿಕ್ಕಿಯೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ಅವರು ಅಂತಹ ಅದ್ಭುತ ನಟ. ನಾನು ಅವರ ಅಭಿಮಾನಿ. ಸಾರಾ ನಟನೆಯಲ್ಲಿ ವಿಶೇಷವಿದೆ. ಚಿತ್ರಕ್ಕೆ ಅವಳು ಸೂಕ್ತವಾಗಿ ಹೊಂದಿಕೆಯಾಗುತ್ತಾಳೆ ಎಂದಿದ್ದಾರೆ ಎನ್ನಲಾಗಿದೆ.

ಇದು ಬಾಲಿವುಡ್ ಬೆಳ್ಳಿತೆರೆಯಲ್ಲಿ ಹೊಸ ಜೋಡಿಯಾಗಿದೆ. ಈ ಜೋಡಿ ಆನ್‌ಸ್ಕ್ರೀನ್ ಮ್ಯಾಜಿಕ್ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ನವೆಂಬರ್‌ನಲ್ಲಿ ತೆರೆಗೆ ಬರಲಿರುವ ಸಿನಿಮಾ ಈ ವರ್ಷವೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದಿತ್ಯ ಧರ್ ಅವರ 'ದಿ ಇಮ್ಮಾರ್ಟಲ್ ಅಶ್ವತ್ಥಾಮ'ದಲ್ಲಿ ವಿಕ್ಕಿ ಮತ್ತು ಸಾರಾ ಸಹ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಟ್ರೈಲಾಜಿ ಎಂದು ನಿರೀಕ್ಷಿಸಲಾದ ಸಿನಿಮಾ ಹಣಕಾಸಿನ ಸಮಸ್ಯೆಯಿಂದ ಇತ್ತೀಚೆಗೆ ಸ್ಥಗಿತಗೊಂಡಿತ್ತು.
