ಕಿರುತೆರೆ ನಟ ಒಂದು ಕಾಲದಲ್ಲಿ ಮಾವನ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದವರು, ಈಗ ತಮ್ಮ ಬಟ್ಟೆ ಮತ್ತು ಶೂಗಳಿಗಾಗಿ 3BHK ಫ್ಲ್ಯಾಟ್ ಖರೀದಿಸಿದ್ದಾರೆ. ಈ ವಿಷಯವನ್ನು ಯುಟ್ಯೂಬ್ ಚಾನೆಲ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ಮುಂಬೈ: ಸಿನಿಮಾಗಳಿಗಿಂತಲೂ ಕಿರುತೆರೆಯಲ್ಲಿ ಹೆಚ್ಚು ಹಣವಿದೆ ಎಂದು ಹಲವರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಒಂದು ಧಾರಾವಾಹಿ ಒಪ್ಪಿಕೊಂಡ್ರೆ ಅದು ಎರಡ್ಮೂರು ವರ್ಷ ನಮಗೆ ಊಟ ಹಾಕುತ್ತೆ ಎಂದು ಹಿರಿಯ ಕಲಾವಿದರು ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕಿ, ಕೊರಿಯೊಗ್ರಾಫರ್ ಆಗಿರುವ ನಟಿ ಫರ್ಹಾ ಖಾನ್ ಸಹ ಟಿವಿ ಶೋದಿಂದ ಬಂದ ಹಣದಿಂದಲೇ ಮನೆ ಖರೀದಿಸಿದೆ ಎಂದಿದ್ದರು. ಅದೇ ರೀತಿ ಹಾಸ್ಯ ಕಲಾವಿದೆ ಅರ್ಚನಾ ಪೂರಣ್‌ಸಿಂಗ್ ಸಹ ಟಿವಿ ಶೋಗಳಿಂದ ಆರ್ಥಿಕವಾಗಿ ಸ್ಟ್ರಾಂಗ್ ಆದೆ ಎಂದಿದ್ದರು. ಇದೀಗ ನಾವು ಹೇಳುತ್ತಿರುವ ಕಿರುತೆರೆ ನಟ ಒಂದು ಕಾಲದಲ್ಲಿ ಮಾವನ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ. ಆದ್ರೆ ಇಂದು ತನ್ನ ಬಟ್ಟೆ ಮತ್ತು ಶೂಗಳನ್ನು ಇರಿಸಲು ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ 3BHK ಫ್ಲ್ಯಾಟ್ ಖರೀದಿಸಿದ್ದಾರೆ.
ಹಾಸ್ಯ ಕಲಾವಿದ ಕೃಷ್ಣ ಅಭಿಷೇಕ್ ಇಂದು ಕಿರುತೆರೆಯ ಸ್ಟಾರ್ ಆಗಿದ್ದಾರೆ. ಕಪಿಲ್ ಶರ್ಮಾ ಶೋ, ಲಾಫ್ಟರ್ ಶೆಫ್ ಸೇರಿದಂತೆ ಹಲವು ಶೋಗಳಲ್ಲಿ ಕಾಣಿಸಿಕೊಳ್ಳುವ ಕೃಷ್ಣ ಅಭಿಷೇಕ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆದ್ರೆ ಸಿನಿಮಾಗಳಿಗಿಂತ ಕಿರುತೆರೆ ಶೋಗಳಿಂದಲೇ ಮನೆಮಾತಾಗಿದ್ದಾರೆ. ಬಾಲಿವುಡ್ ಸ್ಟಾರ್ ನಟ ಗೋವಿಂದ ಅವರ ಸೋದರಳಿಯನಾಗಿರುವ ಕೃಷ್ಣ ಅಭಿಷೇಕ್ ಸಂದರ್ಶನವೊಂದರಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಟಿ ಅರ್ಚನಾ ಪೂರಣ್‌ಸಿಂಗ್ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕೃಷ್ಣ ಅಭಿಷೇಕ್, ಬಟ್ಟೆ ಮತ್ತು ಶೂಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಬಳಿಯಲ್ಲಿರುವ ಕಲೆಕ್ಷನ್ ಎಷ್ಟಿದೆ ಅಂದ್ರೆ ಅವುಗಳಿಗಾಗಿ ಮೂರು ರೂಮ್‌ಗಳಿರುವ ಫ್ಲ್ಯಾಟ್ ಖರೀದಿ ಮಾಡಿರುವ ವಿಷಯವನ್ನು ಕೃಷ್ಣ ರಿವೀಲ್ ಮಾಡಿದ್ದಾರೆ. ಈ ವಿಷಯ ಕೇಳುತ್ತಲೇ ಅರ್ಚನಾ ಮತ್ತು ಅವರ ಪತಿ ಪರ್ಮಿತ್ ಸಿಂಗ್ ಒಂದು ಕ್ಷಣ ಶಾಕ್ ಆಗಿ, ಅಷ್ಟೊಂದು ಬಟ್ಟೆಗಳು ನಿಮ್ಮ ಬಳಿಯಲ್ಲಿವೆಯಾ ಎಂದು ಪ್ರಶ್ನೆ ಮಾಡಿದರು. ನಿಮ್ಮಷ್ಟೇ ಎತ್ತರವಾಗಿ ನನ್ನ ಮಗನಿದ್ದಾನೆ. ಹಾಗಾಗಿ ನಿಮಗೆ ಬೇಡವಾಗಿರುವ ಬಟ್ಟೆ ಮತ್ತು ಶೂಗಳನ್ನು ನನ್ನ ಮಗ ಆಯುಷ್ಮಾನ್‌ಗೆ ನೀಡಿ ಎಂದು ಅರ್ಚನಾ ತಮಾಷೆ ಮಾಡಿದರು.
ಇದನ್ನೂ ಓದಿ: ಸಿನಿಮಾ ಸೋಲು, ಡಿವೋರ್ಸ್ ಬಳಿಕ ಹಿಮಾಲಯಕ್ಕೆ ಹೋಗಿ ನೆಲೆಸಲು ಮುಂದಾದ ನಟ
ಇದೇ ವೇಳೆ ಬಾಲ್ಯದಲ್ಲಿ ಮಾವ ಗೋವಿಂದ ಅವರ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆ. ಆ ಸಮಯದಲ್ಲಿ, DNG ಫ್ಯಾಶನ್ ಬ್ರ್ಯಾಂಡ್ ವಾಸ್ತವವಾಗಿ ಡೇವಿಡ್ (ಧವನ್) ಮತ್ತು ಗೋವಿಂದ ಅವರ ಹೆಸರಿನಲ್ಲಿದೆ ಎಂದು ಭಾವಿಸಿದ್ದರೆ. ಇಬ್ಬರೂ ಫೇಮಸ್ ಆಗಿರುವ ಕಾರಣ ಅವರದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿರಬೇಕು ಅಂತ ಅಂದುಕೊಂಡಿದ್ದೆ. ಕಾಲೇಜು ದಿನಗಳಲ್ಲಿ ಎಲ್ಲಾ ಬ್ರ್ಯಾಂಡ್ ಬಟ್ಟೆಗಳನ್ನು ಹಾಕುತ್ತಿದ್ದೆ. ಆಗ ನನಗೆ ಬ್ರ್ಯಾಂಡ್ ಬಗ್ಗೆ ಹೆಚ್ಚು ತಿಳುವಳಿಕೆ ಇರಲಿಲ್ಲ ಎಂದು ಕೃಷ್ಣ ಹಳಿಕೊಂಡಿದ್ದಾರೆ.
ಡೇವಿಡ್ ಧವನ್ ಮತ್ತು ಗೋವಿಂದ ಜೊತೆಯಾಗಿ ತುಂಬಾ ವರ್ಷ ಕೆಲಸ ಮಾಡಿದ್ದಾರೆ. 90 ಮತ್ತು 2000ರ ದಶಕದಲ್ಲಿ ಸಾಲು ಸಾಲು ಹಿಟ್‌ಗಳನ್ನು ನೀಡಿರುವ ಜೋಡಿಯಾಗಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ರಾಜಾ ಬಾಬು, ಕೂಲಿ ನಂಬರ್ 1, ಸಜನ್ ಚಲೇ ಸಸುರಾಲ. ಶೋಲಾ ಔರ್ ಶಬನಮ್, ಹೀರೋ ನಂಬರ್ 1, ಕ್ಯೂಂ ಕೀ ಜೂಟ್ ನಹೀ ಬೋಲ್ತಾ, ಪಾರ್ಟನರ್ , ಬಡೇ ಮಿಯಾ ಚೋಡಾ ಮಿಯಾ ಸೇರಿದಂತೆ ಹಲವು ಸಿನಿಮಾಗಳು ಎಂದಿಗೂ ನೋಡುಗರನ್ನು ರಂಜಿಸುತ್ತವೆ ಎಂದು ಹೇಳಿದರು.
ಇದನ್ನೂ ಓದಿ: ಸೈಫ್ ಭೇಟಿ ಬಳಿಕ ಆಟೋ ಚಾಲಕ ಹೇಳಿದ್ದೇನು? ಆ ಮಾತಿನಿಂದ ಖುಷಿಯಾಯ್ತು ಎಂದ ಭಜನ್ ಸಿಂಗ್ ರಾಣಾ
