ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಬಯೋಪಿಕ್ ನರೇಂದ್ರ ಮೋದಿ ಸಿನಿಮಾ ನಿರ್ಮಾಪಕನಿಗೆ ಜೀವ ಬೆದರಿಕೆ ಎದುರಾಗಿದೆ. ಉದ್ಯಮಿ ಅಮಿತ್ ಬಿ ವಾಧ್ವಾನಿ ಮೋದಿ ಸಿನಿಮಾ ಸಹನಿರ್ಮಾಪಕರಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಎದುರಿಸಿದ್ದಾರೆ.

ತನಗೆ ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಬಂದಿದೆ ಎಂದು ನಿರ್ಮಾಪಕ ಮುಂಬೈ ಪೊಲೀಸ್ ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ಆಪ್ಟಿಮಿಸ್ಟಿಕ್ಸ್ ಎಂಬ ಫೇಸ್‌ಬುಕ್‌ ಖಾತೆಯಿಂದ ಬೆದರಿಕೆ ಬಂದಿದೆ ಎಂದಿದ್ದಾರೆ.

ಥಿಯೇಟರ್‌ನಲ್ಲಿ ರಿ-ರಿಲೀಸ್ ಆಗಲಿದೆ ನರೇಂದ್ರ ಮೋದಿ ಸಿನಿಮಾ

ನರೇಂದ್ರ ಮೋದಿ ಸಿನಿಮಾದ ಭಾಗವಾಗಿರುವುದಕ್ಕೆ ನಿರ್ಮಾಪಕನ ವಿರುದ್ಧ ಬೆದರಿಕೆ ಒಡ್ಡಲಾಗಿದೆ. ನಿರ್ಮಾಪಕ ಹಾಗೂ ನಿರ್ಮಾಪಕನ ನವಜಾತ ಶಿಶುವಿನ ಫೋಟೋ ಶೇರ್ ಮಾಡಿದ ಆಪ್ಟಿಮಿಸ್ಟಿಕ್ ಫೇಸ್‌ಬುಕ್ ಖಾತೆ ಜೀವ ಬೆದರಿಕೆ ಒಡ್ಡಿದ್ದು, ನಿರ್ಮಾಪಕನ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವುದಾಗಿಯೂ ಬೆದರಿಸಿದೆ.

ಕೊರೋನಾ ಲಾಕ್‌ಡೌನ್ ನಂತರ ಮೊದಲ ಬಾರಿ ಥಿಯೇಟರ್ ತೆರೆಯುತ್ತಿದ್ದು ಈ ಸಂದರ್ಭ ಮೋದಿ ಸಿನಿಮಾ ಕೂಡಾ ರಿ ರಿಲೀಸ್ ಆಗಲಿದೆ. ಕಳೆದ ವರ್ಷ ಮೋದಿ ಜೀವನಾಧಾರಿತ ಸಿನಿಮಾ ಬಿಡುಗಡೆ ಸಮಯದ ಬಗ್ಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.