Asianet Suvarna News Asianet Suvarna News

ಚಿಯಾನ್ ವಿಕ್ರಮ್ ಈಸ್ ಬ್ಯಾಕ್; 'ಕೋಬ್ರಾ' ಈವೆಂಟ್‌ನಲ್ಲಿ ಭಾಗಿಯಾದ ಸ್ಟಾರ್ ನಟ ಹೇಳಿದ್ದೇನು?

ಕ್ರಮ್ ಕೋಬ್ರಾ ಆಡಿಯೋ ರಿಲೀಸ್ ಕಾರ್ಯಕ್ರಮದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಿನ್ನೆ (ಜುಲೈ 11) ನಡೆದ ಕಾರ್ಯಕ್ರಮದಲ್ಲಿ ಚಿಯಾನ್ ವಿಕ್ರಮ್ ಹಾಜರಾಗುವ ಮೂಲಕ ಹರಿದಾಡುತ್ತಿದ್ದ  ಗಾಪಿಸ್‌ಗಳಿಗೆ ಬ್ರೇಕ್ ಹಾಕಿದರು.

Chiyaan Vikram addresses rumours of heart attack at Cobra audio launch sgk
Author
Bengaluru, First Published Jul 12, 2022, 3:42 PM IST

ಕಾಲಿವುಡ್ ಸ್ಟಾರ್ ನಟ ಚಿಯಾನ್ ವಿಕ್ರಮ್ ಇತ್ತೀಚಿಗಷ್ಟೆ ಅನಾರೋಗ್ಯದ ಕಾರಣ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋಬ್ರಾ ಸ್ಟಾರ್‌ಗೆ ಎದೆ ನೋವು ಕಾಣಿಸಿಕೊಂಡ  ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದರು. ಚಿಯಾನ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಹಾರ್ಟ್ಯಾಕ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಚಿಯಾನ್ ವಿಕ್ರಮ್ ಆಸ್ಪತ್ರೆ ಸೇರುತ್ತಿದ್ದಂತೆ ಅಭಿಮಾನಗಳಲ್ಲಿ ಆತಂಕ ಹೆಚ್ಚಾಯಿತು. ವಿಕ್ರಮ್‌ಗೆ ಏನಾಯಿತು, ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಪ್ರಾರ್ಥನೆ ಮಾಡುತ್ತಿದ್ದರು. ನಂತರ ವಿಕ್ರಮ್ ಪುತ್ರ ಧ್ರುವ ವಿಕ್ರಮ್ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಅಪ್ಪನಿಗೆ ಹಾರ್ಟ್ಯಾಕ್ ಆಗಿಲ್ಲ, ಎದೆ ನೋವು ಕಾಣಿಸಿಕೊಂಡಿದ್ದು ಅಷ್ಟೆ, ಸದ್ಯ ಆರೋಗ್ಯವಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು. ಬಳಿಕ ಅಭಿಮಾನಿಗಳು ಕೊಂಚ ನಿರಾಳರಾದರು. ವಿಕ್ರಮ್ ಅವರಿಗೆ ಎಲ್ಲಾ ರೀತಿಯ ಚಕಪ್ ಕೂಡ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದು ದಿನ ಆಸ್ಪತ್ರೆಯಲ್ಲಿದ್ದ ವಿಕ್ರಮ್ ಆವರನ್ನು ಡಿಶ್ಚಾರ್ಜ್ ಮಾಡಲಾಯಿತು. 

ಚಿಯಾನ್ ವಿಕ್ರಮ್  ಅಂದು (ಜುಲೈ 8) ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. 6 ಗಂಟೆಗೆ ಕಾರ್ಯಕ್ರಮದಲ್ಲಿ ಹಾಜರಾಗಬೇಕಿತ್ತು. ಆದರೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿದ ಕಾರಣ ದೊಡ್ಡ ಈವೆಂಟ್‌ಗೆ ಗೈರಾಗಬೇಕಾಯಿತು. ವಿಕ್ರಮ್ ಅವರನ್ನು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದರು.  ಸದ್ಯ ವಿಕ್ರಮ್ ಕೋಬ್ರಾ ಆಡಿಯೋ ರಿಲೀಸ್ ಕಾರ್ಯಕ್ರಮದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಿನ್ನೆ (ಜುಲೈ 11) ನಡೆದ ಕಾರ್ಯಕ್ರಮದಲ್ಲಿ ಚಿಯಾನ್ ವಿಕ್ರಮ್ ಹಾಜರಾಗುವ ಮೂಲಕ ಹರಿದಾಡುತ್ತಿದ್ದ  ಗಾಪಿಸ್‌ಗಳಿಗೆ ಬ್ರೇಕ್ ಹಾಕಿದರು.

ಚಿಯಾನ್ ವಿಕ್ರಮ್ ಆಡಿಯೋ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿ ಅಭಿಮಾನಿಗಳಿಗೆ, ಫ್ರೆಂಡ್ಸ್ ಮತ್ತು ಕುಟುಂಬಕ್ಕೆ ಧನ್ಯವಾದ ತಿಳಿಸಿದರು. 'ನಾನು ನೋಡಿದೆ. ನಾನು ಎಲ್ಲಾ ಸುದ್ದಿಗಳನ್ನು ನೋಡಿದೆ. ಅನೇಕರು ನನ್ನ ಫೋಟೋವನ್ನು ಮಾರ್ಫ್ ಮಾಡಿ ನನ್ನ ಮುಖಕ್ಕೆ ಅನಾರೋಗ್ಯ ಇರುವ ಮನುಷ್ಯನ ಬಾಡಿ ಸೇರಿಸಿ ಅದಕ್ಕೆ ಥಂಬ್ನೈಲ್ ನೀಡಿ ಸ್ಟೋರಿ ಮಾಡಿದ್ದರು. ಅವರು ಅಂತೂ ತುಂಬಾ ಕ್ರಿಯೇಟಿವ್ ಒಳ್ಳೆಯದು. ಧನ್ಯವಾದಗಳು. ನಾನು ಜೀವನದಲ್ಲಿ ತುಂಬಾ ಅನುಭವಿಸಿದ್ದೇನೆ. ನನ್ನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳು ಬೆಂಬಲ ನೀಡಿದ್ದಾರೆ. ನನಗೆ ಜೀವನದಲ್ಲಿ ಬೇರೇನೂ ಬೇಕಾಗಿಲ್ಲ' ಎಂದು ಹೇಳಿದರು. 

Vikram Heart Attack: ಖ್ಯಾತ ತಮಿಳು ನಟ ವಿಕ್ರಂ ಸಂಪೂರ್ಣ ಚೇತರಿಕೆ, ಶೀಘ್ರದಲ್ಲೇ ಬಿಡುಗಡೆ

ವಿಕ್ರಮ್ ಕಾರ್ಯಕ್ರಕ್ಕೆ ಹಾಜರಾಗಿದ್ದಲ್ಲದೇ ವೇದಿಕೆ ಮೇಲೆ ಮಾತನಾಡುವ ಮೂಲಕ ಅನಾರೋಗ್ಯದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳಿಗೆ ಸ್ಪಷ್ಟನೆ ನೀಡಿದರು. ಅಭಿಮಾನಿಗಳು ವಿಕ್ರಮ್‌ನನ್ನು ನೋಡಿ ಚಿಯಾನ್ ಈಸ್ ಬ್ಯಾಕ್ ಎನ್ನುತ್ತಿದ್ದಾರೆ. ವಿಕ್ರಮ್ ಸದ್ಯ ಎರಡು ಬಹುನಿರೀಕ್ಷೆಯ ಸಿನಿಮಾಗಳ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಕೋಬ್ರಾ ಹಾಗೂ ಪೊನ್ನಿಯಿನ್ ಸೆಲ್ವನ್-1. KGF

2 ಸಕ್ಸಸ್; ತೆಲುಗಿನಲ್ಲಿ ನಟಿಸಲು ಭಾರಿ ಸಂಭಾವನೆ ಬೇಡಿಕೆ ಇಟ್ರಾ ನಟಿ ಶ್ರೀನಿಧಿ?

ಕೋಬ್ರಾ ಸಿನಿಮಾದಲ್ಲಿ ವಿಯಾನ್ ವಿಕ್ರಮ್ ಜೊತೆ ನಾಯಕಿಯಾಗಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಶ್ರೀನಿಧಿ ನಟಿಸಿದ ಮೊದಲ ಸಿನಿಮಾ ಇದಾಗಿದೆ. ಕೆಜಿಎಫ್ ಮೊದಲ ಭಾಗ ಮುಗಿದ ಬಳಿಕ ಶ್ರೀನಿಧಿ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ರಿಲೀಸ್ ಗೆ ರೆಡಿಯಾಗಿದೆ. ಇನ್ನು ಈ ಸಿನಿಮಾದಲ್ಲಿ ಇರ್ಫಾನ್ ಪಠಾಣ್ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.  

Follow Us:
Download App:
  • android
  • ios