'ವಕೀಲ್ ಸಾಬ್‌' ಚಿತ್ರದಲ್ಲಿ ನಟ ಪ್ರಕಾಶ್ ರಾಜ್‌ ಅಭಿನಯವನ್ನು ಮೆಚ್ಚಿದ ಮೆಗಾ ಸ್ಟಾರ್ ಚಿರಂಜೀವಿ. ಅಭಿನಂದನೆ ಹೇಳಿರುವ ಟ್ಟೀಟ್ ವೈರಲ್... 

ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾ ಯಶಸ್ವಿ ಪ್ರದರ್ಶನ ಕಂಡು ಸಿನಿ ಪ್ರೇಮಿಗಳ ಮೆಚ್ಚುಗೆ ಪಡೆದು ಕೊಳ್ಳುತ್ತಿದೆ. ಪವನ್‌ ಪಾತ್ರಕ್ಕೆ ನೀಡಲಾಗಿರುವಷ್ಟೇ ಪ್ರಾಮುಖ್ಯತೆಯನ್ನು ಪ್ರಕಾಶ್ ರಾಜ್‌ಗೆ ನೀಡಲಾಗಿದೆ. ಸಿನಿಮಾ ವೀಕ್ಷಿಸಿದ ಮೆಗಾ ಸ್ಟಾರ್ ಚಿರಂಜೀವಿ ಪ್ರಕಾಶ್‌ಗೆ ಅಭಿನಂದನೆ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಮೆಗಾ ಸ್ಟಾರ್‌ ಚಿರಂಜೀವಿಗೆ ಸಿನಿಮಾ ನೋಡುವ ಕ್ರೇಜ್ ಜಾಸ್ತಿ. ಒಂದು ಒಳ್ಳೆ ಸಿನಿಮಾ ಬಂದಿದೆ ಅಂದರೆ ಇಡೀ ಕುಟುಂಬ ಹೋಗಿ ಚಿತ್ರವನ್ನು ವೀಕ್ಷಿಸುತ್ತಾರೆ. ಕೆಲವು ದಿನಗಳ ಹಿಂದೆ ಚಿರಂಜೀವಿ ಸಿನಿಮಾ ವೀಕ್ಷಿಸಿ, ಟ್ಟೀಟ್ ಮಾಡಿದ್ದಾರೆ. 'ಪ್ರಕಾಶ್ ರಾಜ್‌ ಅವರಂಥ ಕಲಾವಿದರಿದ್ದರೆ, ಸಹಜವಾಗಿ ಸಹ ಕಲಾವಿದರ ಪರ್ಫಾಮೆನ್ಸ್‌ ಹೆಚ್ಚಾಗುತ್ತದೆ. ವಕೀಲ್ ಸಾಬ್ ಚಿತ್ರದಲ್ಲಿ ಪ್ರಕಾಶ್ ನಟನೆ ಅದ್ಭುತ ಹಾಗೂ ಪವನ್ ಎದುರು ಅತ್ಯುತ್ತಮವಾಗಿ ನಟಿಸಿದ್ದಾರೆ. ಶುಭವಾಗಲಿ ಪ್ರಕಾಶ್,' ಎಂದು ಟ್ಟೀಟ್ ಮಾಡಿ, ಭೇಟಿ ನೀಡಿದಾಗ ಹೂ ಗುಚ್ಚ ನೀಡಿರುವ ಫೋಟೋ ಹಂಚಿಕೊಂಡಿದ್ದಾರೆ. 'ಎಂದಿಗೂ ಸ್ಫೂರ್ತಿದಾಯಕ. ಎಂದಿಗೂ ಪ್ರೋತ್ಸಾಹಿಸುವ ಅಣ್ಣಾ,' ಎಂದು ಚಿರಂಜೀವಿ ಟ್ವೀಟಿಗೆ ಪ್ರಕಾಶ್ ರಾಜ್‌ ಪ್ರತಿಕ್ರಿಯೆ ನೀಡಿದ್ದಾರೆ.

'ವಕೀಲ್ ಸಾಬ್' ಚಿತ್ರದ ಬಗ್ಗೆ ಟ್ವೀಟ್ಸ್ ಸುರಿಮಳೆ; ಚಿತ್ರ ವಿಮರ್ಶೆ ರೆಡಿ! 

ಏಪ್ರಿಲ್ 9 ಬಿಡುಗಡೆಯಾದ ವಕೀಲ್ ಸಾಬ್ ಈಗಾಗಲೇ ಬಾಕ್ಸ್ ಆಫೀಸ್‌ ಕಲೆಕ್ಷನ್ ಮುಟ್ಟಿದೆ ಎನ್ನಲಾಗಿದೆ. ಹಿಂದಿ ಪಿಂಕ್ ಚಿತ್ರದ ರಿಮೇಕ್ ಇದಾಗಿದ್ದು, ತೆಲುಗು ಭಾಷೆಯಲ್ಲಿ ವೀಕ್ಷಿಸಲು ವಿಭಿನ್ನವಾಗಿದೆ ಎನ್ನುತ್ತಿದ್ದಾರೆ ಸಿನಿ ಪ್ರೇಮಿಗಳು. ಫ್ಲಾಶ್‌ಬ್ಯಾಕ್‌ ಕೊಂಚ ಬೋರಿಂಗ್ ಆಗಿದ್ದರೂ ಸಿನಿಮಾ ನೋಡಬಹುದು ಎಂದಿದ್ದಾರೆ.

Scroll to load tweet…