ತೆಲಗು ಚಿತ್ರರಂಗದ ಸ್ಟಾರ್ ನಟ ಪವನ್ ಕಲ್ಯಾಣ್ ಬಹು ನಿರೀಕ್ಷಿತ ಸಿನಿಮಾ 'ವಕೀಲ್ ಸಾಬ್' ದೇಶಾದ್ಯಂತ ಬಿಡುಗಡೆಯಾಗಿದೆ.  ಮೂರು ವರ್ಷಗಳ ಬಳಿಕ ಪವನ್‌ ಅವರನ್ನು ಬೆಳ್ಳಿ ಪರದೆ ಮೇಲೆ ಕಂಡ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.  ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅಭಿನಯದ 'ಪಿಂಕ್' ಸಿನಿಮಾ ರಿಮೇಕ್ ಇದಾಗಿದ್ದು ವೇಣು ಶ್ರೀರಾಮ್‌ ನಿರ್ದೇಶನ ಮಾಡಿದ್ದಾರೆ. 

'ವಕೀಲ್ ಸಾಬ್‌' ಚಿತ್ರದ ನಟಿ ನಿವೇತಾ ಹಾಗೂ ನಿರ್ಮಾಪಕ ಅಲ್ಲು ಅರವಿಂದ್‌ಗೆ ಕೊರೋನಾ ಪಾಸಿಟಿವ್ 

ಯಾವುದೇ ಸಿನಿಮಾ ಆಗಿರಲಿ ಫಸ್ಟ್ ಡೇ ವೀಕ್ಷಿಸುವವರು ರಿಯಲ್ ಸಿನಿ ಪ್ರೇಮಿಗಳು ಎನ್ನುತ್ತಾರೆ. ಅವರ ಅಭಿಪ್ರಾಯದ ಮೇಲೆ ಸಿನಿಮಾ ವೀಕ್ಷಿಸುವುದರ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಾರೆ. ಕೊರೋನಾ ಆತಂಕದ ನಡುವೆಯೂ ಚಿತ್ರಮಂದಿರಗಳಲ್ಲಿ ವಕೀಲ್ ಸಾಬ್‌ ಅಬ್ಬರ ಜೋರಾಗಿದೆ. 

ಟ್ಟಿಟ್‌ಗಳ ಸುರಿಮಳೆ: 
'ಕೋರ್ಟ್‌ ಸೀನ್ ಹಾಗೂ ಫೈಟ್‌ ಸೀನ್‌ ಸೂಪರ್ ಅಗಿವೆ. ಕಥೆ ಅದ್ಭುತವಾಗಿ ಹೇಳಿದ್ದಾರೆ. ಹಾಡುಗಳು ಹಾಗೂ ಹಿನ್ನಲೆ ಸಂಗೀತ ಚೆನ್ನಾಗಿದೆ. ಆದರೆ ಒಂದೊಂದು ಕಡೆ ಬೋರ್ ಆಗುತ್ತದೆ. ಹೀಗಾಗಿ 5ಕ್ಕೆ 3.75 ನೀಡುವೆ,' ಎಂದು ರಿವ್ಯೂ ಮಾಡಿದ್ದಾರೆ ಒಬ್ಬರು.

ದರ್ಶನ್‌ ಸಿನಿಮಾ ಎತ್ತಂಗಡಿ ಮಾಡಿ ಪವನ್ ಕಲ್ಯಾಣ ತೆಲುಗು ಸಿನಿಮಾ ರಿಲೀಸ್? 

' ನಾನು 5ಕ್ಕೆ  2.75 ಕೊಡುವೆ. ಪವನ್ ಕಲ್ಯಾಣ್ ಹಾಗೂ ನಿವೇತಾ ಥಾಮಸ್‌ ನಟನೆ ಸೂಪರ್. ಮೊದಲ ಭಾಗ ತುಂಬಾ ಎಳೆದಿದ್ದಾರೆ. ಫ್ಲಾಶ್ ಬ್ಯಾಕ್‌ ಸೀನ್ ನೋಡೋಕೇ ಆಗಲ್ಲ. ಆದರೆ ಸ್ಕ್ರೀನ್ ಆಫ್ ಮಾಡಬೇಕು ಅನಿಸುತ್ತದೆ,' ಎನ್ನೋದು ಮತ್ತೊಬ್ಬರ ಅಭಿಪ್ರಾಯ. 

'ಫಸ್ಟ್ ಭಾಗ ನೋಡಬಹುದು. ತುಂಬಾ ಎಳೆದಿದ್ದಾರೆ. ಸಿನಿಮಾದ ಹೈಲೈಟ್ ಪಂಚ್ ಡೈಲಾಗ್‌ಗಳು. ಪವನ್ ಕಲ್ಯಾಣ್ ಎಂಟ್ರಿ ಸೂಪರ್ ಅಗಿದೆ. ಇಂಟರ್ವಲ್‌ನಲ್ಲಿ ಕುತೂಹಲ ಹೆಚ್ಚಾಗುತ್ತದೆ. ಆದರೆ ಎರಡನೇ ಭಾದ ಬೋರ್ ಆಗುತ್ತದೆ,' ಎಂದು ನೆಟ್ಟಿಗರು ಟ್ಟೀಟ್ ಮಾಡಿದ್ದಾರೆ.