ಅಲಿಯಾ-ರಣಬೀರ್ 'ಬ್ರಹ್ಮಾಸ್ತ್ರ'ಗೆ ಚಿರಂಜೀವಿ ಸಾಥ್; ಮೆಗಾಸ್ಟಾರ್ ಕಾಲಿಗೆ ಬಿದ್ದ ನಿರ್ದೇಶಕ, ವಿಡಿಯೋ ವೈರಲ್
ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಅಲಿಯಾ ಮತ್ತು ರಣಬೀರ್ ಸಿನಿಮಾಗೆ ಮತ್ತೋರ್ವ ತೆಲುಗು ಸ್ಟಾರ್ ಸಾಥ್ ನೀಡಿದ್ದಾರೆ. ಹೌದು ಮೆಗಾಸ್ಟಾರ್ ಚಿರಂಜೀವಿ ಬ್ರಹ್ಮಾಸ್ತ್ರ ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್(Alia Bhatt And Ranbir Kapoor) ನಟನೆಯ ಬಹುನಿರೀಕ್ಷೆಯ ಬ್ರಹ್ಮಾಸ್ತ್ರ(Brahmastra) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾ ಸೆಟ್ಟೇರಿ ಅನೇಕ ವರ್ಷಗಳೇ ಆಗಿದ್ದು ಇತ್ತೀಚಿಗಷ್ಟೆ ಸಿನಿಮಾದ ಚಿತ್ರೀಕರಣದ ಚಿತ್ರೀಕರಣ ಮುಕ್ತಾಯವಾಗಿದೆ. ಸುದೀರ್ಘಾವದಿಯ ಚಿತ್ರೀಕರಣದ ಬಳಿಕ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ಸಂತಸವನ್ನು ಸಿನಿಮಾತಂಡ ಹಂಚಿಕೊಂಡಿತ್ತು. ಸಿನಿಮಾ ಪ್ರಾರಂಭವಾದಾಗ ಅಲಿಯಾ ಮತ್ತು ರಣಬೀರ್ ಕಪೂರ್ ಪ್ರೀತಿ ಕೂಡ ಆರಂಭಾಗಿತ್ತು. ಇಬ್ಬರು ಪ್ರೀತಿಸಿ ಮದುವೆ ಸಹ ಆದರೂ. ಆದರೆ ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಸದ್ಯ ಬಿಡುಗಡೆಗೆ ಭರ್ಜರಿ ತಯಾರಿ ನಡೆಯುತ್ತಿದೆ.
ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಅಲಿಯಾ ಮತ್ತು ರಣಬೀರ್ ಸಿನಿಮಾಗೆ ಮತ್ತೋರ್ವ ತೆಲುಗು ಸ್ಟಾರ್ ಸಾಥ್ ನೀಡಿದ್ದಾರೆ. ಹೌದು ಮೆಗಾಸ್ಟಾರ್ ಚಿರಂಜೀವಿ(Chiranjeevi) ಬ್ರಹ್ಮಾಸ್ತ್ರ ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ. ಅಂದಹಾಗೆ ಬ್ರಹ್ಮಾಸ್ತ್ರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಚಿರಂಜೀವಿ ತೆಲುಗು ಭಾಷೆಯ ಟ್ರೈಲರ್‌ಗೆ ಧ್ವನಿ ನೀಡುವ ಮೂಲಕ ಸಿನಿಮಾಗೆ ಬೆಂಬಲ ನೀಡಿದ್ದಾರೆ.
ಅಂದಹಾಗೆ ಬಹುನಿರೀಕ್ಷೆಯ ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ಜೂನ್ 15ರಂದು ರಿಲೀಸ್ ಆಗುತ್ತಿದೆ. ಹಿಂದಿ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ತೆಲುಗು ಭಾಷೆಯ ಟ್ರೈಲರ್‌ಗೆ ಚಿರಂಜೀವಿ ಧ್ವನಿ ನೀಡುವ ಮೂಲಕ ರಣಬೀರ್ ಸಿನಿಮಾಗೆ ಸಾಥ್ ನೀಡಿದ್ದಾರೆ. ಬ್ರಹ್ಮಾಸ್ತ್ರ ಅಯಾನ್ ಮುಖರ್ಜಿ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಚಿರಂಜೀವಿ ಧ್ವನಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿರಂಜೀವಿಯನ್ನು ಅದ್ದೂರಿಯಾಗಿ ಸ್ವಾಗತ ಮಾಡಿರುವ ನಿರ್ದೇಶಕ ಅಯಾನ್ ಮುಖರ್ಜಿ, ಧ್ವನಿ ನೀಡಿದ ಬಳಿಕ ಮೆಗಾಸ್ಟಾರ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ವಿಡಿಯೋ ಅಭಿಮಾನಿಗಳ ಹೃದಯ ಗೆದ್ದಿದೆ.
ಚಿರಂಜೀವಿ ಮನೆಯಲ್ಲಿ ಕಮಲ್ ಹಾಸನ್ 'ವಿಕ್ರಮ್' ಸಕ್ಸಸ್ ಪಾರ್ಟಿ; ಸಲ್ಮಾನ್ ಸೇರಿ ಯಾರೆಲ್ಲಾ ಭಾಗಿಯಾಗಿದ್ದರು?
ಚಿರಂಜೀವಿ, ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರ ಶಿವ ಪಾತ್ರವನ್ನು ತಲುಗಿನಲ್ಲಿ ಪರಿಚಯಿಸಿದ್ದಾರೆ. ಧ್ವನಿ ನೀಡಿದ ಬಳಿಕ ನಿರ್ದೇಶಕ ಅಯಾನ್ ಮುಖರ್ಜಿ, ಚಿರಂಜೀವಿ ಜೊತೆ ನಡೆದುಕೊಂಡ ರೀತಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಫ್ಯಾನ್ಸ್ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಬಾಲಿವುಡ್ ಮತ್ತು ಸೌತ್ ನಿಂದ ನಾವು ಬಯಸೋದು ಇದನ್ನೇ ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಬಾಲಿವುಡ್ ವರ್ಸಸ್ ಸೌತ್ ಅಲ್ಲ ಇಂಡಿಯನ್ ಸಿನಿಮಾ ಎಂದು ಹೇಳಿದ್ದಾರೆ.
ಅಲಿಯಾ ಭಟ್ ಬಳಿಕ Jr.NTR ಸಿನಿಮಾ ರಿಜೆಕ್ಟ್ ಮಾಡಿದ ಮತ್ತೋರ್ವ ಸ್ಟಾರ್ ನಟಿ
ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟಂಬರ್ 9ರಂದು ತೆರೆಗೆ ಬರುತ್ತಿದೆ. ಬ್ರಹ್ಮಾಸ್ತ್ರ ಸೈನ್ಸ್ ಫಿಕ್ಷನ್ ಫ್ಯಾಂಟಸಿ ಅಡ್ವೆಂಚರ್ ಸಿನಿಮಾವಾಗಿದೆ ಎಂದು ನಿರ್ದೇಶಕರು ಬಹಿರಂಗ ಪಡಿಸಿದ್ದಾರೆ. ಈ ಸಿನಿಮಾದಲ್ಲಿ ಅಲಿಯಾ ಭಟ್, ಅಮಿತಾಬ್ ಬಚ್ಚನ್, ಮೌನಿ ರಾಯ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ದಕ್ಷಿಣ ಭಾರತದಲ್ಲಿ ಬ್ರಹ್ಮಾಸ್ತ್ರ ಸಿನಿಮಾವನ್ನು ಖ್ಯಾತ ನಿರ್ದೇಶಕ ರಾಜಮೌಳಿ ಪ್ರೆಸೆಂಟ್ ಮಾಡುತ್ತಿದ್ದಾರೆ.