Asianet Suvarna News Asianet Suvarna News

ಚಿರಂಜೀವಿ ಕಡೆಯಿಂದ ಸಿನಿ ಕಲಾವಿದರು, ಪತ್ರಕರ್ತರಿಗೆ ಉಚಿತ ಕೊರೋನಾ ಲಸಿಕೆ

ಸಿನಿ ಕಲಾವಿದರಿಗೆ ನೆರವು | ಪತ್ರಕರ್ತರಿಗೂ ಉಚಿತ ಕೊರೋನಾ ಲಸಿಕೆ

Chiranjeevi announces free COVID-19 vaccination for Tollywood cine artists journalists dpl
Author
Bangalore, First Published Apr 22, 2021, 10:29 AM IST

ಹಿರಿಯ ಟಾಲಿವುಡ್ ನಟ ಚಿರಂಜೀವಿ ಅವರು ಏಪ್ರಿಲ್ 22 ರ ಗುರುವಾರದಿಂದ ತೆಲುಗು ಚಲನಚಿತ್ರೋದ್ಯಮದ ಎಲ್ಲಾ ಸಿನಿ ಕಲಾವಿದರು ಮತ್ತು ಪತ್ರಕರ್ತರಿಗೆ ಕರೋನಾ ಕ್ರೈಸಿಸ್ ಚಾರಿಟಿ (ಸಿಸಿಸಿ) ಪರವಾಗಿ ಉಚಿತ ವ್ಯಾಕ್ಸಿನೇಷನ್ ಡ್ರೈವ್ ಘೋಷಿಸಿದ್ದಾರೆ.

ಅಪೊಲೊ ಆಸ್ಪತ್ರೆಗಳ ಸಹಯೋಗದೊಂದಿಗೆ ಆಯೋಜಿಸಲಾದ ಈ ಡ್ರೈವ್ 45 ವರ್ಷಕ್ಕಿಂತ ದೊಡ್ಡವರಿಗೆ ಮುಕ್ತವಾಗಿರುತ್ತದೆ. ಕಳೆದ ವರ್ಷ ಲಾಕ್ಡೌನ್ ನಿಂದ ತೀವ್ರವಾಗಿ ಹೊಡೆತ ಅನುಭಿಸಿದ ನಂತರ ಚಿರಂಜೀವಿ ಮತ್ತು ಇತರ ಟಾಲಿವುಡ್ ಸೆಲೆಬ್ರಿಟಿಗಳು ಸಿ.ಸಿ.ಸಿ ಯನ್ನು ಆರಂಭಿಸಿ ತೆಲುಗು ಚಲನಚಿತ್ರೋದ್ಯಮದ ಕಾರ್ಮಿಕರಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದರು.

7 ವರ್ಷದ ಮಗನ ಜೊತೆ ನಟಿಯ ಬೆತ್ತಲೆ ಪೋಸ್: 3 ತಿಂಗಳು ಜೈಲು

ವ್ಯಾಕ್ಸಿನೇಷನ್ ಡ್ರೈವ್‌ಗೆ ಅರ್ಹತೆ ಪಡೆಯಲು, ಕಲಾವಿದರು ಮತ್ತು ವರದಿಗಾರರು ತಮ್ಮನ್ನು, ತಮ್ಮ ಸಂಘಗಳನ್ನುನೋಂದಾಯಿಸಿಕೊಳ್ಳಬೇಕು. ಇದನ್ನು ಅನುಸರಿಸಿ, ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತದೆ. ಒಂದು ತಿಂಗಳವರೆಗೆ ನಡೆಯಲಿರುವ ಈ ಡ್ರೈವ್ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅನ್ವಯಿಸುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ತಿಳಿಸಿದ ಚಿರಂಜೀವಿ ಚಿತ್ರೋದ್ಯಮವನ್ನು COVID-19 ನಿಂದ ರಕ್ಷಿಸಲು ಲಸಿಕೆ ತೆಗೆದುಕೊಳ್ಳಲು ಮುಂದೆ ಬರಬೇಕೆಂದು ಮನವಿ ಮಾಡಿದ್ದಾರೆ. ಲಸಿಕೆ ಪಡೆದವರಿಗೆ ಮುಂದಿನ ಮೂರು ತಿಂಗಳವರೆಗೆ ಅಪೊಲೊ ವೈದ್ಯರೊಂದಿಗೆ ಉಚಿತ 24/7 ಸಮಾಲೋಚನೆ ಸಿಗುತ್ತದೆ ಮತ್ತು ಅಗತ್ಯವಿರುವ ಯಾವುದೇ ಔಷಧಿಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು ಎಂದು ನಟ ಹೇಳಿದ್ದಾರೆ.

5 ರಾಜ್ಯಗಳಲ್ಲಿ 18 ಮೇಲ್ಪಟ್ಟವರಿಗೆ ಉಚಿತ ಲಸಿಕೆ!

COVID-19 ಎರಡನೇ ಅಲೆಯಲ್ಲಿ ದೇಶದಲ್ಲಿ ಪ್ರಕರಣಗಳ ಸಂಖ್ಯೆಯು ಆತಂಕಕಾರಿಯಾಗಿ ಹೆಚ್ಚುತ್ತಿದೆ. ಈ ಕಾರಣದಿಂದಾಗಿ, ಚಿತ್ರಮಂದಿರಗಳು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ರಾತ್ರಿ 8 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶ ನೀಡುವುದಾಗಿ ತೆಲಂಗಾಣ ಸರ್ಕಾರ ಘೋಷಿಸಿದೆ.

ಎರಡು ತೆಲುಗು ರಾಜ್ಯಗಳ ಕೆಲವು ಚಿತ್ರಮಂದಿರಗಳು ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಹೊರತುಪಡಿಸಿ ಯಾವುದೇ ಪ್ರಮುಖ ಚಲನಚಿತ್ರಗಳು ಇಲ್ಲದಿರುವುದರಿಂದ ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಿದೆ. ಲವ್ ಸ್ಟೋರಿ, ವಿರಾಟ ಪರ್ವಂ ಮತ್ತು ಇತರ ಚಲನಚಿತ್ರಗಳ ಬಿಡುಗಡೆಯನ್ನು ಸಹ ಮುಂದೂಡಲಾಗಿದೆ.

ಮತ್ತೊಂದೆಡೆ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ಮುನ್ನೆಚ್ಚರಿಕೆ ಕ್ರಮವಾಗಿ ಸೆಟ್‌ಗಳಲ್ಲಿ ಕೇವಲ 50% ಸಾಮರ್ಥ್ಯದೊಂದಿಗೆ ಸಿನಿಮಾ ಪ್ರದರ್ಶನ ಮುಂದುವರಿಸಲು ನಿರ್ಧರಿಸಿತು. ಏತನ್ಮಧ್ಯೆ ತೆಲಂಗಾಣದಲ್ಲಿ ಮಂಗಳವಾರ 6,542 ಹೊಸ COVID-19 ಪ್ರಕರಣಗಳು ಮತ್ತು 20 ಸಾವುಗಳು ದಾಖಲಾಗಿವೆ.

Follow Us:
Download App:
  • android
  • ios