ಭಾರಿ ನಿರೀಕ್ಷೆ ಮತ್ತು ಕುತೂಹಲದೊಂದಿಗೆ ತೆರೆಗೆ ಬಂದ ಚಿರಂಜೀವಿ(Chiranjeevi) ನಟನೆಯ ಆಚಾರ್ಯ(Acharya) ಸಿನಿಮಾ ಹೀನಾಯ ಸೋಲು ಕಂಡಿದೆ. ಪ್ರೇಕ್ಷಕರ ಮನ ಸೆಳೆಯುವಲ್ಲಿ ಆಚಾರ್ಯ ಸಿನಿಮಾ ವಿಫಲವಾಗಿದೆ. ವಿಮರ್ಶಕರು ಆಚಾರ್ಯ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಅವರ ಸಿನಿಮಾ ಕರಿಯರ್ ನಲ್ಲೇ ಕೆಟ್ಟ ಸಿನಿಮಾ ಎಂದು ಜರಿದಿದ್ದಾರೆ.
ಭಾರಿ ನಿರೀಕ್ಷೆ ಮತ್ತು ಕುತೂಹಲದೊಂದಿಗೆ ತೆರೆಗೆ ಬಂದ ಚಿರಂಜೀವಿ(Chiranjeevi) ನಟನೆಯ ಆಚಾರ್ಯ(Acharya) ಸಿನಿಮಾ ಹೀನಾಯ ಸೋಲು ಕಂಡಿದೆ. ಪ್ರೇಕ್ಷಕರ ಮನ ಸೆಳೆಯುವಲ್ಲಿ ಆಚಾರ್ಯ ಸಿನಿಮಾ ವಿಫಲವಾಗಿದೆ. ವಿಮರ್ಶಕರ ಪ್ರಕಾರ ಆಚಾರ್ಯ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಅವರ ಸಿನಿಮಾ ಕರಿಯರ್ ನಲ್ಲೇ ಕೆಟ್ಟ ಸಿನಿಮಾ ಎಂದು ಜರಿದಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಉತ್ತಮ ಕಮಾಯಿ ಮಾಡಲು ಸೋತಿದೆ.
ಏಪ್ರಿಲ್ 29ರಂದು ತೆರೆಗೆ ಬಂದ ಆಚಾರ್ಯ ಸಿನಿಮಾ ಮೊದಲ ದಿನ 53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮೊದಲ ದಿನದ ಗಳಿಕೆ ಸಿನಿಮಾತಂಡಕ್ಕೆ ಸಂತೋಷ ತಂದಿತ್ತು. ಆದರೆ ನಂತರದ ದಿನಗಳಲ್ಲಿ ಆಚಾರ್ಯ ಗಳಿಕೆ ಸಂಪೂರ್ಣವಾಗಿ ಮುಗ್ಗರಿಸಿದೆ. ಆಚಾರ್ಯ ಸಿನಿಮಾ ದೊಡ್ಡ ನಷ್ಟವಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆಚಾರ್ಯ 100ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗುತ್ತಿದೆ. ಚಿರಂಜೀವಿ ಮತ್ತು ರಾಮ್ ಚರಣ್(Ram Charan) ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದ್ದು ಇಬ್ಬರು ಒಟ್ಟಿಗೆ ತೆರೆಮೇಲೆ ನೋಡಿ ಆನಂದಿಸಲು ಕಾತರರಾಗಿದ್ದರು. ಆದರೆ ಅಭಿಮಾನಿಗಳನ್ನು ಸೆಳೆಯುವಲ್ಲಿ ಆಚಾರ್ಯ ತಂಡ ವಿಫಲವಾಗಿದೆ.
ಚಿರಂಜೀವಿ ಸಿನಿಮಾ ಓವರ್ ಸೀಸ್ ನಲ್ಲೂ ಹೀನಾಯ ಸೋತಿದೆ. ಸಾಮಾನ್ಯವಾಗಿ ತೆಲುಗು ಸಿನಿಮಾಗಳಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. ಅದರಲ್ಲೂ ಚಿರಂಜೀವಿ ಸಿನಿಮಾಗಳನ್ನು ವಿದೇಶಿ ಅಭಿಮಾನಿಗಳು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಆದರೆ ಆಚಾರ್ಯ ಸಿನಿಮಾ ಈ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಯು ಎಸ್ ನಲ್ಲಿ ಚಿರಂಜೀವಿ ಸಿನಿಮಾ ಹೀನಾಯ ಸೋತಿದೆ. ಈ ಮೊದಲು ಬಿಡುಗಡೆಯಾದ ಆರ್ ಆರ್ ಆರ್, ಭೀಮಲಾ ನಾಯಕ್ ಮತ್ತು ಕೆಜಿಎಫ್-2 ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿವೆ. ಆದರೆ ಆಚಾರ್ಯ ಕಲೆಕ್ಷನ್ ಅಷ್ಟೆ ಹೀನಾಯವಾಗಿದೆ ಎನ್ನುವ ವರದಿ ಬಂದಿದೆ.
ಹಣ ಎಸೆದು ಸಂಭ್ರಮಿಸಿದ ಫ್ಯಾನ್ಸ; ಈ ಪ್ರೀತಿಗೆ ಅರ್ಹನಲ್ಲ ಎಂದ ಸೋನು ಸೂದ್
ಸಿನಿಮಾ ವಿಶ್ಲೇಷಕರ ಪ್ರಕಾರ ಯುಸ್ ನಲ್ಲಿ ಆಚಾರ್ಯ ಸಿನಿಮಾ ಮೊದಲ ವೀಕೆಂಡ್ ನಲ್ಲಿ 1 ಲಕ್ಷ ಡಾಲರ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇದು ಟಾಲಿವುಡ್ ಸ್ಟಾರ್ ನಟರ ಸಿನಿಮಾಗಳ ಕಲೆಕ್ಷನ್ ನಲ್ಲೇ ಅತೀ ಕಡಿಮೆ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ. ಆಚಾರ್ಯ ಸಿನಿಮಾ ಶನಿವಾರ 90 ಸಾವಿರ ಡಾಲರ್ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
ಅಂದಹಾಗೆ ಇನ್ನು ಕೆಜಿಎಫ್-2 ಸಿನಿಮಾದ ಹವಾ ಕಡಿಮೆಯಾಗಿಲ್ಲ. ಸಿನಿಮಾ ಬಿಡುಗಡೆಯಾಗಿ 2 ವಾರದ ಮೇಲಾದರೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿ ಮತ್ತು ವಿದೇಶದಲ್ಲೂ ರಾಕಿ ಭಾಯ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೇ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೆಜಿಎಫ್-2 ಎದುರು ಎಲ್ಲಾ ಸಿನಿಮಾಗಳು ಮುಗ್ಗರಿಸಿವೆ. ಇದೀಗ ಆಚಾರ್ಯ ಸಿನಿಮಾ ಕೂಡ ಸೋತಿದೆ.
'ಆಚಾರ್ಯ' ಹಿಂದಿಯಲ್ಲಿ ರಿಲೀಸ್ ಮಾಡಲ್ಲ, ಚಿತ್ರತಂಡದಿಂದ ಸ್ಪಷ್ಟನೆ
ಅಂದಹಾಗೆ ಆಚಾರ್ಯ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಯಾವುದೇ ಬೇಸರವೂ ಇಲ್ಲ ಎಂದು ರಾಮ್ ಚರಣ್ ಹೇಳಿದ್ದರು. ಕೇವಲ ದಕ್ಷಿಣ ಭಾರತದ ಭಾಷೆಗಳಲ್ಲಿ ಮಾತ್ರ ಸಿನಿಮಾ ಬಿಡುಗಡೆ ಮಾಡಿದ್ದರು. ಆದರೆ ಯಾವ ಭಾಷೆಯಲ್ಲೂ ಸಿನಿಮಾ ಪ್ರೇಕ್ಷಕರ ಮನ ಸೆಳೆಯಲು ಯಶಸ್ವಿಯಾಗಿಲ್ಲ.
