ಹಿಂದಿ ಕಿರುತೆರೆಯ ಖ್ಯಾತ ನಟಿ ಮತ್ತು ಬಾಲಿವುಡ್ ನಲ್ಲೂ ಗುರುತಿಸಿಕೊಂಡಿದ್ದ ಛವಿ ಮಿತ್ತಲ್(Chhavi Mittal ) ಇತ್ತೀಚಿಗಷ್ಟೆ ಆಘಾತಕಾರಿ ಸುದ್ದಿ ಹಂಚಿಕೊಂಡಿದ್ದರು. ಸ್ತನ ಕ್ಯಾನ್ಸರ್(breast cancer) ನಿಂದ ಬಳಲುತ್ತಿರುವುದಾಗಿ ಬಹಿರಂಗ ಪಡಿಸಿದ್ದ ಛವಿ ಮಿತ್ತಲ್ ಇದೀಗ ಸರ್ಜರಿ ಮಾಡಿಸಿಕೊಡಿದ್ದಾರೆ.

ಹಿಂದಿ ಕಿರುತೆರೆಯ ಖ್ಯಾತ ನಟಿ ಮತ್ತು ಬಾಲಿವುಡ್ ನಲ್ಲೂ ಗುರುತಿಸಿಕೊಂಡಿದ್ದ ಛವಿ ಮಿತ್ತಲ್(Chhavi Mittal ) ಇತ್ತೀಚಿಗಷ್ಟೆ ಆಘಾತಕಾರಿ ಸುದ್ದಿ ಹಂಚಿಕೊಂಡಿದ್ದರು. ಸ್ತನ ಕ್ಯಾನ್ಸರ್(breast cancer) ನಿಂದ ಬಳಲುತ್ತಿರುವುದಾಗಿ ಬಹಿರಂಗ ಪಡಿಸಿದ್ದ ಛವಿ ಮಿತ್ತಲ್ ಮಕ್ಕಳಿಗೆ ಹಾಲುಣಿಸಿದ ಕ್ಷಣವನ್ನು ಸ್ಮರಿಸಿದ್ದರು. ಇದು ಆಗಬಾರದಿತ್ತು ಹಾಗಂತ ತನ್ನ ಆತ್ಮವಿಶ್ವಾಸ ಕಡಿಮೆಯಾಗಲ್ಲ ಎಂದು ಹೇಳಿದ್ದರು. ಕ್ಯಾನ್ಸರ್ ಇದೆ ಎಂದು ಗೊತ್ತಾದ ತಕ್ಷಣ ಚಿಕಿತ್ಸೆಗೆ ಒಳಗಾಗಿದ್ದ ಛವಿ ಮಿತ್ತಲ್ ಸರ್ಜರಿ ಮಾಡಿಸಿಕೊಡಿದ್ದಾರೆ. ಸರ್ಜರಿ ಬಳಿಕ ಮೊದಲ ಫೋಟೋವನ್ನು ಛವಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.

ಏಪ್ರಿಲ್ 26ರಂದು ಛವಿ ಮಿತ್ತಲ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ನೀಡಿದ್ದಾರೆ. ಈಗ ತಾನು ಕ್ಯಾನ್ಸರ್ ಫ್ರಿ ಎಂದು ಹೇಳಿದ್ದಾರೆ. 6 ಗಂಟೆಗಳ ದೀರ್ಘ ಸರ್ಜರಿ ಬಳಿಕ ಛವಿ ಮಿತ್ತಲ್ ಕ್ಯಾನ್ಸರ್ ಫ್ರಿ ಆಗಿರುವುದಾಗಿ ಹೇಳಿದ್ದಾರೆ. ಸರ್ಜರಿ ಬಳಿಕ ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿರುವ ಛವಿ ಫೋಟೋವನ್ನು ಶೇರ್ ಮಾಡಿದ್ದಾರೆ. ಕ್ಯಾನ್ಸರ್ ಎಂದು ಬಹಿರಂಗ ಮಾಡಿದ ಬಳಿಕ ಅಭಿಮಾನಿಳು, ಸ್ನೇಹಿತರು ಬೇಗ ಗುಣಮುಖರಾಗುವಂತೆ ಹಾರೈಸಿದ್ದರು. ಇದೀಗ ಸರ್ಜರಿ ಬಳಿಕ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಕ್ಯಾನ್ಸರ್ ನಿಂದ ಗುಣಮುಖರಾಗಿರುವುದಾಗಿ ಹೇಳಿದ್ದಾರೆ.

'ಅರವಳಿಕೆ ತಜ್ಞರು ನನ್ನ ಕಣ್ಣಗಳನ್ನು ಮುಚ್ಚಲು ಹೇಳಿ ಒಳ್ಳೆಯನ್ನು ಯೋಚಿಸಿ ಎಂದು ಹೇಳಿದರು. ನಾನು ನನ್ನ ಆರೋಗ್ಯಕರವಾದ ಸ್ತನಗಳನ್ನು ಪಡೆಯುವ ಬಗ್ಗೆ ಯೋಚಿಸಿ ಪ್ರಜ್ಞೆ ತಪ್ಪಿಗೆ. ನಾನಗೆ ಎಚ್ಚರವಾದಾಗ ನಾನು ಕ್ಯಾನ್ಸರ್ ಫ್ರಿ ಆಗಿದ್ದೆ ಎಂದಿದ್ದಾರೆ. 6 ಗಂಟೆಗಳ ದೀರ್ಘ ಸರ್ಜರಿ ನಡೆಯಿತು. ಇದರಿಂದ ಗುಣಮುಖವಾಗಲು ದೀರ್ಘ ಸಮಯ ಹಿಡಿಯುತ್ತದೆ. ಆದರೆ ದೊಡ್ಡ ವಿಷಯವೆಂದರೆ ಕೆಟ್ಟದ್ದು ಮುಗಿದಿದೆ. ನಿಮ್ಮ ಪ್ರಾರ್ಥನೆ ನನ್ನ ಮೇಲಿತ್ತು. ನಾನು ಈಗ ತುಂಬಾ ನೋವಿನಲ್ಲಿ ಇದ್ದೀನಿ. ನಿಮ್ಮ ಪ್ರಾರ್ಥನೆ ನನ್ನ ಕಣ್ಣಲ್ಲಿ ನೀರು ತಂದಿತು. ಪ್ರಾರ್ಥನೆ ನಿಲ್ಲದಿರಲಿ' ಎಂದು ಹೇಳಿದ್ದಾರೆ. ಛವಿ ಪೋಸ್ಟ್ ಗೆ ಅನೇಕರು ಹಾರ್ಟ್ ಇಮೋಜಿ ಹಾಕಿ ಧೈರ್ಯ ತುಂಬಿದ್ದಾರೆ.

View post on Instagram


ಡೆಲಿವರಿ ಬಳಿಕ ಈ ನಟಿಗೆ ಕಿವುಡಾಯ್ತು ಕಿವಿ!

ಈ ಮೊದಲು ಪೋಸ್ಟ್ ಶೇರ್ ಮಾಡಿದ್ದ ಛವಿ ಕ್ಯಾನ್ಸರ್ ಇದೆ ಎಂದು ಬಹಿರಂಗ ಪಡಿಸಿ ಇದರ ವಿರುದ್ಧ ಹೋರಾಡುವುದಾಗಿ ಹೇಳಿದ್ದರು. ಜೊತೆಗೆ ತಮ್ಮ ಮಕ್ಕಳಿಗೆ ಹಾಲುಣಿಸಿದ್ದನ್ನು ಸ್ಮರಿಸಿದ್ದರು. ಇದು ಆಗಬಾರದಿತ್ತು ಆದರೆ ಆಗಿದೆ. ಕಾಯಿಲೆ ನನ್ನ ಛಲವನ್ನು ಕುಗ್ಗಿಸುವುದಿಲ್ಲ. ಇದರಿಂದ ಹೊರಬರುವುದು ಸುಲಭವಲ್ಲ ಹಾಗಂತ ಕಷ್ಟವೂ ಅಲ್ಲ ಎಂದು ಹೇಳಿದ್ದರು. ಈ ಪೋಸ್ಟ್ ಛವಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಇದೀಗ ಕ್ಯಾನ್ಸರ್ ಫ್ರೀ ಆಗುವ ಮೂಲಕ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ.

ಇನ್ನು ಕೆಲಸ ವಿಚಾರಕ್ಕೆ ಬರವುದಾದರೆ ಛವಿ ಅನೇಕ ಟಿವಿ ಶೋಗಳಲ್ಲಿ ಕಾಮಿಸಿಕೊಂಡಿದ್ದಾರೆ. ನಾಗಿನ್, ತುಮಾರಿ ದಿಶಾ, ವಿರಾಸತ್, ಕೃಷ್ಣದಾಸಿ ಮತ್ತು ಏಕ್ ಚುಕ್ತಿ ಆಸ್ಮಾನ್ ನಲ್ಲಿ ನಟಿಸಿದ್ದರು.