ರಶ್ಮಿಕಾ-ವಿಕ್ಕಿ ಜೋಡಿಯ 'ಛಾವಾ' ಚಿತ್ರ 600 ಕೋಟಿ ಗಳಿಸಿ ದಾಖಲೆ ಬರೆದಿದೆ. ವಿಕ್ಕಿಗೆ ಹೊಸ ಯಶಸ್ಸು ತಂದುಕೊಟ್ಟ ಈ ಚಿತ್ರ, ರಶ್ಮಿಕಾಗೆ ಮತ್ತೊಂದು ಸೂಪರ್ ಹಿಟ್. ಸಂಭಾಜಿ ಕಥಾಹಂದರದ ಈ ಚಿತ್ರದಲ್ಲಿ ವಿಕ್ಕಿ ಅಭಿನಯ ಪ್ರೇಕ್ಷಕರ ಮನಗೆದ್ದಿದೆ. ರಶ್ಮಿಕಾ ನಟನೆ ಮೆಚ್ಚುಗೆ ಗಳಿಸಿದೆ. 'ಸಿಕಂದರ್' ಸೋಲಿನ ನಡುವೆಯೂ 'ಛಾವಾ' ಗೆಲುವು ರಶ್ಮಿಕಾ ಬೇಡಿಕೆ ಹೆಚ್ಚಿಸಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಛಾವಾ ಚಿತ್ರವು 14 ಫೆಬ್ರವರಿ 2025ರಂದು ಬಿಡುಗಡೆ ಅಗಿದೆ. ಈ ಚಿತ್ರವು ಸಿನಿಮಾ ಪ್ರೇಕ್ಷಕರು ಹಾಗೂ ವಿಮಿರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ಚಿತ್ರದ ಗಳಿಕೆಯು ಒಂದೇ ವಾರದಲ್ಲಿ ಸಾಕಷ್ಟು ಏರಿತ್ತಾದ್ದರಿಂದ, ಈ ಚಿತ್ರವು 500 ಕೋಟಿ ಗಡಿ ದಾಟುವ ನಿರೀಕ್ಷೆ ಇತ್ತು, ಅದರಂತೆ, ಛಾವಾ ಚಿತ್ರವು ಹಿಂದಿ ಭಾಷೆಯ ಮಾರ್ಕೆಟ್‌ನಲ್ಲಿ 66ನೆಯ ದಿನಕ್ಕೆ ಬರೋಬ್ಬರಿ 600 ಕೋಟಿ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ.

ಈ ಮೊದಲು ಸ್ತ್ರೀ (Stree) ಹಾಗೂ ಪುಷ್ಪ 2 (Pushpa 2) ಚಿತ್ರವು ಈ ಮಟ್ಟದ ಯಶಸ್ಸು ಪಡೆದು 500 ಕೋಟಿಯ ಗಡಿ ದಾಟಿದ್ದವು. ಇದೀಗ ಛಾವಾ ಸರದಿ. ಈ 600 ಕೋಟಿ ಗಳಿಕೆ ಕೇವಲ ಹಿಂದಿ ಬಾಕ್ಸ್ ಆಫೀಸ್‌ನದು ಎಂಬುದು ವಿಶೇಷ. ಹೌದು, ವಿಕ್ಕಿ ಕೌಶಲ್ ವೃತ್ತಿ ಜೀವನದಲ್ಲಿ ಈ ಚಿತ್ರವು ಕಮಾಲ್ ಮಾಡಿದೆ, ಭಾರಿ ದಾಖಲೆ ಗಳಿಕೆ ಮಾಡಿ ಅವರಿಗೆ ಹೊಸ ಇಮೇಜು ತಂದು ಕೊಟ್ಟಿದೆ. ಆದರೆ, ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ 2 ಈಗಾಗಲೇ ಆ ದಾಖಲೆ ಮಾಡಿಯಾಗಿತ್ತು. ಹೀಗಾಗಿ ನಟಿ ರಶ್ಮಿಕಾ ಅವರಿಗೆ ಇದು ಇನ್ನೊಂದು ಸೂಪರ್ ಹಿಟ್ ಚಿತ್ರವಷ್ಟೇ ಆಗಿದೆ.

ಪೋಸ್ಟ್ ಲೈಕ್ ಮಾಡಿ ಹೊಸ ಚರ್ಚೆ ಹುಟ್ಟುಹಾಕಿದ ಸಮಂತಾ; ಪುರುಷರು ಗರಂ ಆದ್ರಾ..!?

ಈ ಮೊದಲೂ ಕೂಡ ನಟಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಸಕ್ಸಸ್ ನೋಡಿದ್ದಾರೆ. ಅದೇನೇ ಇರಲಿ, ಮರಾಠಾ ಸಾಮ್ರಾಜ್ಯದ ಹುಲಿ ಎಂದೇ ಖ್ಯಾತಿ ಪಡೆದಿರುವ ಶಿವಾಜಿ ಅವರ ಮಗ ಸಂಭಾಜಿ ಜೀವನಾಧಾರಿತ ಕಥೆ ಈ ಛಾವಾ ಚಿತ್ರದ್ದಾಗಿದೆ. ನಟ ವಿಕ್ಕಿ ಕೌಶಲ್ ಈ ಚಿತ್ರದಲ್ಲಿ ಕೇವಲ ನಟನೆ ಮಾಡಿಲ್ಲ, ಜೀವಿಸಿದ್ದಾರೆ ಎಂಬ ಅಭಿಪ್ರಾಯ ಹೊಗಳಿಕೆ ಪ್ರೇಕ್ಷಕರ ಕಡೆಯಿಂದ ವ್ಯಕ್ತವಾಗಿದೆ. ಅಷ್ಟರಮಟ್ಟಿಗೆ ಈ ಚಿತ್ರದ ನಟನೆಯಲ್ಲಿ ವಿಕ್ಕಿ ಕೌಶಲ್ ಅವರು ಪ್ರಭುತ್ವ ತೋರಿಸಿದ್ದಾರೆ.

ಈ ಮೊದಲು ತೆರೆಗೆ ಬಂದಿದ್ದ ವಿಕ್ಕಿ ನಟನೆಯ ಎಲ್ಲಾ ಸಿನಿಮಾದಲ್ಲಿ ಕೂಡ ಅವರ ನಟನೆ ಚೆನ್ನಾಗಿದ್ದರೂ ಸಹ ಸಿನಿಮಾ ಈ ಮಟ್ಟಿಗೆ ಯಶಸ್ಸು ಕಂಡಿರಲಿಲ್ಲ. ಹೀಗಾಗಿ ವಿಕ್ಕಿ ಕೌಶಲ್ ನಟನೆ ಜನರಿಗೆ ತಲುಪಿರಲಿಲ್ಲ ಎನ್ನಬಹುದು. ಆದರೆ, ಛಾವಾ ಸೂಪರ್ ಹಿಟ್ ಆಗಿದೆ, ಜನರು ವಿಕ್ಕಿ ಕೌಶಲ್ ನಟನೆಯನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರನ್ನು ಉತ್ತರ-ದಕ್ಷಿಣ ಎಂಬ ಬೇಧವಿಲ್ಲದೇ ಎಲ್ಲಾ ಭಾಷೆಯ ಚಿತ್ರರಂಗಗಳು ಒಪ್ಪಿಕೊಂಡಿವೆ.

ಹೆತ್ತವರ ತ್ಯಜಿಸಿ ಸರಿಗಮಪ ಖ್ಯಾತಿ ಪೃಥ್ವಿ ಭಟ್ ಲವ್ ಮ್ಯಾರೇಜ್! ವಶೀಕರಣವೆಂದು ಅಪ್ಪನ ಅಳಲು!

ರಶ್ಮಿಕಾರ ನಟನೆ ಛಾವಾದಲ್ಲಿ ಈ ಮೊದಲಿಗಿಂತ ಇನ್ನೊಂದು ಹಂತ ಮೇಲೆ ಇದೆ ಎನ್ನಲಾಗುತ್ತಿದೆ. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅವರು ಈಗ ನ್ಯಾಷನಲ್ ಕ್ರಶ್ ಆಗಿ ಬೆಳೆದಿದ್ದಾರೆ. ಅವರ ಈ ಬೆಳವಣಿಗೆ ಹಿಂದೆ ಸಿನಿಮಾ ಪ್ರೀತಿ, ಪರಿಶ್ರಮ ಹಾಗೂ ಅದೃಷ್ಟ ಎಲ್ಲವೂ ಇದೆ. ಒಟ್ಟನಲ್ಲಿ, ನಟಿ ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಸಿನಿಮಾ ಸೋತರೂ ಕೂಡ ಛಾವಾ ಗೆಲುವು ಪಡೆದಿರುವ ಮೂಲಕ ಅವರ ಬೇಡಿಕೆಗೆ ಯಾವುದೇ ಧಕ್ಕೆ ಬಂದಿಲ್ಲ.