ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಾಲ್ ಅಭಿನಯದ ಛಾವ ಚಿತ್ರ ವಿವಾದಕ್ಕೆ ಕಾರಣವಾಗಿದೆ. ಸಂಭಾಜಿ ಮಹಾರಾಜ್ ಹಾಗೂ ಯೇಸುಬಾಯಿ ಭೋನ್ಸಾಲಿ ಜೀವನಾಧರಿತ ಚಿತ್ರದ ಹಾಡಿನ ದೃಶ್ಯ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದೀಗ ಈ ಲೆಝಿಮ್ ಡ್ಯಾನ್ಸ್ ತೆಗೆದು ಹಾಕಲು ನಿರ್ದೇಶಕರು ಮುಂದಾಗಿದ್ದಾರೆ.
ಮುಂಬೈ(ಜ.27) ಬಹುನಿರೀಕ್ಷಿತ ಬಾಲಿವುಡ್ ಛಾವ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಪ್ರಮಖವಾಗಿ ವಿವಾದ ಮೈಮೇಲೆ ಎಳೆದುಕೊಂಡಿದೆ. ಛಾವಾ ಚಿತ್ರ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜ ಹಾಗೂ ಮಹಾರಾಣಿ ಯೇಸುಭಾಯಿ ಭೋನ್ಸಾಲೆ ಜೀವನಾಧರಿತ ಚಿತ್ರ. ಫೆಬ್ರವರಿ 14 ರಂದು ಈ ಚಿತ್ರ ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರದ ಟೇಲರ್ ಬಿಡುಗಡೆಯಾಗಿದೆ. ಅಷ್ಟೇ ವೇಗದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸಂಭಾಜಿ ಮಹಾರಾಜ, ಭೋನ್ಸಾಲೆ ಚಿತ್ರ ತೆಗೆಯುವಾಗ ಇತಿಹಾಸಕಾರರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ, ತಕ್ಷಣವೇ ಲೆಝಿಮ್ ಡ್ಯಾನ್ಸ್ ಸೀನ್ ತೆಗೆಯಲು ಭಾರಿ ಪ್ರತಿಭಟನೆಗಳು ನಡೆದಿದೆ. ಇದರ ಬೆನ್ನಲ್ಲೇ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ವಿವಾದಿತ ಹಾಡಿನ ದೃಶ್ಯಗಳನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಲೆಝಿಮ್ ಡ್ಯಾನ್ಸ್ ವಿವಾದ
ಛಾವ ಚಿತ್ರದ ಟ್ರೇಲರ್‌ನಲ್ಲಿ ಸಂಭಾಜಿ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಂಡ ವಿಕ್ಕಿ ಕೌಶಾಲ್ ಹಾಗೂ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಲೆಝಿಮ್ ಡ್ಯಾನ್ಸ್ ಸಂಭ್ರಮದ ದೃಶ್ಯವಿದೆ. ಇದು ಹಲವು ಮರಾಠ ಸಂಘಟೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲ ಸಲ್ಲದನ್ನು ಚಿತ್ರದಲ್ಲಿ ಸೇರಿಸಬೇಡಿ, ಇತಿಹಾಸಕಾರರನ್ನು ಸಂಪರ್ಕಿಸಿ ಪೂರ್ಣ ಮಾಹಿತಿ ಪಡೆದುಕೊಳ್ಳಿ. ತಕ್ಷವೇ ಈ ದೃಶ್ಯಗಳನ್ನು ಡಿಲೀಟ್ ಮಾಡಲು ಹಲವು ನಾಯಕರು ಸೂಚನೆ ನೀಡಿದ್ದರು. ಇದೇ ರೀತಿ ಅಸಂಬಂದ್ಧ ವಿಚಾರಗಳನ್ನು ಚಿತ್ರದಲ್ಲಿ ತುರುಕಿದರೆ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಲಾಗಿತ್ತು.
ಛಾವ ಚಿತ್ರದ ಬಳಿಕ ನಿವೃತ್ತಿ ಮಾತನಾಡಿದ ನಂ.1 ನಟಿ ರಶ್ಮಿಕಾ ಮಂದಣ್ಣ, ಅಭಿಮಾನಿಗಳು ಶಾಕ್!
ಮಹಾರಾಷ್ಟ್ರದಲ್ಲಿ ಪ್ರತಿಭಟನೆಗಳು ಕಾವು ಪಡೆದುಕೊಳ್ಳುತ್ತಿದ್ದಂತೆ ನಿರ್ದೇಶಕ ಉಟೇಕರ್, ನೇರವಾಗಿ ಮಹಾರಾಷ್ಟ್ರದ ಎಂಎನ್ಎಸ್ ನಾಯಕ ರಾಜ್ ಠಾಕ್ರೆಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಹಾಡಿನ ದೃಶ್ಯಗಳನ್ನು ಕತ್ತರಿಸುವುದು ದೊಡ್ಡ ವಿಷಯವಲ್ಲ. ಸಂಭಾಜಿ ಮಹಾರಾಜರಿಗಿಂತ ಹಾಡು ದೊಡ್ಡದಲ್ಲ. ವಿವಾದವಾಗಿರುವ ದೃಶ್ಯಗಳನ್ನು ಕತ್ತರಿಸುತ್ತೇನೆ ಎಂದು ಉಟೇಕರ್ ಹೇಳಿದ್ದಾರೆ.
ಶಿವಾಜಿ ಸಾವಂತ್ ಬರೆದಿರುವ ಛಾವ ಪುಸ್ತಕದಲ್ಲಿ ಸಂಭಾಜಿ ಮಹಾರಾಜರ ಜೀವನಚರಿತ್ರೆಯನ್ನು ದಾಖಲಿಸಿದ್ದಾರೆ. ಇದೇ ಪುಸ್ತಕದ ಹೆಸರು ಹಾಗೂ ಇದೇ ಕತೆಯನ್ನು ತೆಗೆದುಕೊಳ್ಳಲಾಗಿದೆ. ಸಂಭಾಜಿ ಮಹಾರಾಜರು ಬರ್ಹನಪುರ್ ಮೇಲೆ ದಾಳಿ ಮಾಡಿದಾಗ ವಯಸ್ಸು ಕೇವಲ 20. ಯುವ ಸಂಭಾಜಿ ಮಹರಾಜರ ಹೋಳಿ ಹಬ್ಬ ಆಚರಿಸಿದ ಘಟನೆ ಇತಿಹಾಸದಲ್ಲಿ ಉಲ್ಲೇಖವಿದೆ. ಈ ಹೋಳಿ ಹಬ್ಬದಲ್ಲಿ ಸಂಭಾಜಿ ಮಹಾರಾಜ್ ಲೆಝಿಮ್ ಡ್ಯಾನ್ಸ್ ಮಾಡಿ ಸಂಭ್ರಮಿಸಿರುವ ದೃಶ್ಯವನ್ನು ಚಿತ್ರಿಸಲಾಗಿದೆ. ಲೆಝಿಮ್ ಡ್ಯಾನ್ಸ್ ಮಹಾರಾಷ್ಟ್ರದ ಸಂಸ್ಕೃತಿಯಾಗಿದೆ. ಆದರೆ ಈ ಡ್ಯಾನ್ಸ್ ಮನಸ್ಸಿ ನೋವುಂಟು ಮಾಡಿದ್ದರೆ ತೆಗೆಯುತ್ತೇನೆ ಎಂದು ನಿರ್ದೇಶಕ ಉಟೇಕರ್ ಹೇಳಿದ್ದಾರೆ.
ಜನವರಿ 29ಕ್ಕೆ ವಿಷೇಷ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಇದು ವಿಶೇಷವಾಗಿ ಇತಿಹಾಸಕಾರಿಗೆ ಮಾತ್ರ. ಈ ಚಿತ್ರ ಪ್ರದರ್ಶನದಲ್ಲಿ ಛಾವ ಚಿತ್ರವನ್ನು ಇತಿಹಾಸ ತಜ್ಞರಿಗೆ ಪ್ರದರ್ಶಿಸಲಾಗುತ್ತದೆ. ಈ ವೇಳೆ ಇತಿಹಾಸಕಾರರು ಹೇಳುವ ಪ್ರತಿಯೊಂದು ಸಲಹೆಯನ್ನು ನಾವು ತೆಗೆದುಕೊಳ್ಳುತ್ತೇವೆ. ಇತಿಹಾಸಕಾರರನ್ನು ಸಂಪರ್ಕಿಸಿ, ಯಾವುದೇ ರೀತಿ ಅಪಚಾರವಾಗದಂತೆ ನೋಡಿಕೊಂಡಿದ್ದೇವೆ. ಇದರ ಮೇಲೂ ಏನಾದರೂ ತಪ್ಪುಗಳಾಗಿದ್ದರೆ ಅದನ್ನು ತಿದ್ದಿಕೊಳ್ಳುತ್ತೇವೆ ಎಂದು ಉಟೇಕರ್ ಹೇಳಿದ್ದಾರೆ. ಸಂಭಾಜಿ ಮಹಾರಾಜರನ್ನು ಆಧರದಿಂದ ಗೌರವದಿಂದ, ನಮ್ಮ ನಾಯಕ ಪುರುಷನಾಗಿ ನೋಡಿದ್ದೇವೆ. ಸಂಭಾಜಿ ಮಹಾರಾಜರಿಗಿಂತ ಈ ಚಿತ್ರ, ಹಾಡು ದೊಡ್ಡದಲ್ಲ. ಹೀಗಾಗಿ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಉಟೇಕರ್ ಹೇಳಿದ್ದಾರೆ. ಆದರೆ ವಿವಾದ ಇಲ್ಲಿಗೆ ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ನಿರ್ದೇಕ ಉಟೇಕರ್ ಸಂಪೂರ್ಣ ಛಾವ ಚಿತ್ರ ವೀಕ್ಷಿಸಿ ವಿಮರ್ಷಿಸುವಂತೆ ಮನವಿ ಮಾಡಿದ್ದಾರೆ. \
ರಶ್ಮಿಕಾ ಮಂದಣ್ಣ-ವಿಕ್ಕಿ ಕೌಶಲ್ ಅಭಿನಯದ ಝಾವಾ ಚಿತ್ರದ ನೃತ್ಯ ಇಷ್ಟೊಂದು ವಿವಾದವೇಕೆ?
