Asianet Suvarna News Asianet Suvarna News

ದೆಹಲಿಯಲ್ಲಿ ಸ್ವರಾ-ಫಹಾದ್​ 'ಪುನರ್​ಮಿಲನ': ಕುಟುಂಬಸ್ಥರಿಂದ ಅದ್ಧೂರಿ ಕಾರ್ಯಕ್ರಮ

ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರ ಮದುವೆಯ ಅದ್ಧೂರಿ ಕಾರ್ಯಕ್ರಮವನ್ನು ಕುಟುಂಬಸ್ಥರು ದೆಹಲಿಯಲ್ಲಿ ನಡೆಸುತ್ತಿದ್ದಾರೆ. ಏನಿದರ ಕಥೆ?
 

Check out Swara Bhasker and Fahad Ahmads wedding invite more marriage details revealed
Author
First Published Mar 6, 2023, 11:09 AM IST

ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker)  ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ವಿವಾದಿತ ಹೇಳಿಕೆಗಳ ಮೂಲಕವೇ ಹೆಚ್ಚು ಸದ್ದು ಮಾಡುವ ನಟಿ ಸ್ವರಾ ಭಾಸ್ಕರ್ ಕಳೆದ ತಿಂಗಳು  ನಿಗೂಢ ವ್ಯಕ್ತಿ ಜೊತೆ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಆ ಫೋಟೋದಲ್ಲಿ ಸ್ವರಾ ಅವರನ್ನು ತಬ್ಬಿಕೊಂಡಿದ್ದರು. ಆದರೆ ಅವರ ಮುಖ ಕಾಣುತ್ತಿರಲಿಲ್ಲ. 'ಇದು ಪ್ರೀತಿ ಆಗಿರಬಹುದು' ಎಂದಷ್ಟೇ ಹೇಳಿದ್ದ ಸ್ವರಾ ಭಾಸ್ಕರ್​ ದಿಢೀರನೆ ಆ ವ್ಯಕ್ತಿಯ ಜೊತೆ ಮದುವೆಯಾಗಿ ಫೋಟೋ ಶೇರ್​​ ಮಾಡಿ ಸರ್​ಪ್ರೈಸ್​ ಮೂಡಿಸಿದ್ದರು.  ಸ್ವರಾ ಖುದ್ದು ಆ ವ್ಯಕ್ತಿಯ ಪಕ್ಕದಲ್ಲಿ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದರು. ಟ್ವಿಟರ್‌ (Tweet) ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ  ತಮ್ಮ ಮದುವೆ ವಿಚಾರ ತಿಳಿಸಿದ್ದರು. ತಾವು  ಕೈ ಹಿಡಿದಿರುವ ವರ ಎಂದರೆ  ರಾಜಕಾರಣಿ ಹಾಗೂ ಕಾರ್ಯಕರ್ತ ಫಹಾದ್ ಅಹ್ಮದ್ ಎಂದು ಹೇಳಿದ್ದರು. ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmad) ಅವರೊಂದಿಗೆ ತಾವು ಮದುವೆಯಾಗಿರುವುದಾಗಿ ಹೇಳಿದ್ದರು.

ಅನ್ಯ ಧರ್ಮೀಯರನ್ನು ಮದುವೆಯಾದುದರಲ್ಲಿ ಸ್ವರಾ ಸಾಕಷ್ಟು ಟ್ರೋಲ್​ಗೂ ಒಳಗಾದರು. ಸಾಲದು ಎಂಬುದಕ್ಕೆ  ಕೆಲ ಸಮಯದ ಹಿಂದಷ್ಟೇ ಇವರನ್ನು ಅಣ್ಣಾ ಎಂದು ಸ್ವರಾ ಕರೆದಿದ್ದರು. ಅಣ್ಣನನ್ನೇ ಮದುವೆಯಾದ್ರಾ ಎಂದು ನೆಟ್ಟಿಗರು ಸ್ವರಾ ಕಾಲೆಳೆದಿದ್ದರು. ಇಷ್ಟೇ ಸಾಲದು ಎಂಬಂತೆ  ಮುಸ್ಲಿಂ ಧರ್ಮದ ಯುವಕನನ್ನು ಮದುವೆಯಾಗಿರುವ ಕುರಿತು  ಇಸ್ಲಾಮಿಕ್ ಧರ್ಮಗುರು (Islamic cleric) ಈ ಮದುವೆಯನ್ನು ವಿರೋಧಿಸಿದರು.  ಚಿಕಾಗೋ ಮೂಲದ ನಿಯತಕಾಲಿಕದ ಸಂಪಾದಕ ಮತ್ತು ವಿದ್ವಾಂಸರಾಗಿರುವ ಡಾ ಯಾಸಿರ್ ನದೀಮ್ ಅಲ್ ವಾಜಿದಿ ಅವರು ಈ ಮದುವೆ ಅಮಾನ್ಯವಾಗಿದೆ. ಇಬ್ಬರೂ ಬೇರೆ ಧರ್ಮೀಯರಾಗಿದ್ದು,  ವಿಭಿನ್ನ ನಂಬಿಕೆಗಳಿಂದ ಬಂದ ಕಾರಣ ಮದುವೆ ಅಸಿಂಧು  ಎಂದು ಘೋಷಿಸಿದ್ದಾರೆ. ಅಂತರ್ಧರ್ಮೀಯ ವಿವಾಹ ಸರಿಯಲ್ಲ ಎಂಬುದಾಗಿ ಕಮೆಂಟ್ ಮಾಡಿದ್ದಾರೆ. ಮದುವೆಯ ಸಲುವಾಗಿಯಷ್ಟೇ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದರೆ ಮಹಿಳೆಯ ಜೊತೆಗಿನ ಮದುವೆ ಸಿಂಧುವಾಗುವುದಿಲ್ಲ ಎಂದರು. 

ಆದರೆ ಸ್ವರಾ ದಂಪತಿ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ತಮ್ಮ ಫೋಟೋ ಶೇರಿಂಗ್​ ಮುಂದುವರೆಸಿದ್ದ ಅವರು, ಕೊನೆಯದಾಗಿ ಸಿನಿಮೀಯ ಸ್ಟೈಲ್​ನಲ್ಲಿ ಅದ್ಧೂರಿಯಾಗಿ ಶೃಂಗರಿಸಿದ್ದ ಫಸ್ಟ್​ ನೈಟ್​ (First night) ಮಂಚದ ಫೋಟೋ ಕೂಡ ಶೇರ್​ ಮಾಡಿದ್ದರು. ಇದನ್ನು ತಮ್ಮ ತಾಯಿ ಕಷ್ಟಪಟ್ಟು ಸಿಂಗರಿಸುದುದ್ದಾಗಿ ಹೇಳಿಕೊಂಡಿದ್ದರು.  ಯಾರು ಏನೇ ವಿರೋಧ  ಮಾಡಿದರೂ ಸ್ವರಾ ಕುಟುಂಬಸ್ಥರು ಮಾತ್ರ ಮಗಳ ಪರವಾಗಿ ನಿಂತಿರುವುದು ಇದರಿಂದ ತಿಳಿದುಬಂದಿತ್ತು. ಸ್ವರಾ ಅವರ  ಪೋಷಕರು ಮತ್ತು  ಸಹೋದರ ಇಶಾನ್‌ ಈ ಮದುವೆಯನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.

ಫಸ್ಟ್​ ನೈಟ್​ ಬೆಡ್​ರೂಂ ಫೋಟೋ ಶೇರ್​ ಮಾಡಿದ ನಟಿ SWARA BHASKAR
 
“ಮಗಳ ಮದುವೆಯಲ್ಲಿ ಯಾವುದೇ ಗಡಿಬಿಡಿಯಿಲ್ಲ ಪ್ರಶ್ನೆಗಳಿಲ್ಲ. ಸ್ವರಾ ಸದಾ ಎಲ್ಲವನ್ನೂ ಸರಿಯಾಗಿ ಯೋಚಿಸಿ ನಿರ್ಧಳಿಸುತ್ತಾಳೆ ಎಂದು ಪಾಲಕರು ಹೇಳಿದ್ದಾರೆ. ಅದರಂತೆ, ಸ್ವರಾ ಪೋಷಕರು ಯಾವಾಗಲೂ ಅವರ ಎಲ್ಲಾ ಜೀವನ ಮತ್ತು ವೃತ್ತಿ ಆಯ್ಕೆಗಳನ್ನು ಬೆಂಬಲಿಸಿದ್ದಾರೆ.   ಭಾರತೀಯ ವಿವಾಹವು ಕೇವಲ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರವಲ್ಲ, ಎರಡು ಕುಟುಂಬಗಳ ನಡುವೆ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಸ್ವರಾ ಮತ್ತು ಫಹಾದ್ ತಮ್ಮ ಪರಸ್ಪರ ಮೈತ್ರಿಯ ಮೂಲಕ ಹೆಚ್ಚುವರಿ ಕುಟುಂಬವನ್ನು ಕಂಡುಕೊಂಡಿದ್ದಾರೆ ಎಂದು ಪಾಲಕರು ಹೇಳಿದ್ದಾರೆ.
 
ಈ ಮಧ್ಯೆಯೇ ಮಗಳ ಮದುವೆ ಅದ್ಧೂರಿಯಾಗಿ ನಡೆಯದ ಹಿನ್ನೆಲೆಯಲ್ಲಿ ಈಗ ಮತ್ತೊಂದು ಮದುವೆ ಸಂಭ್ರಮವನ್ನು ಮಾಡಲು ಸ್ವರಾ ಕುಟುಂಬಸ್ಥರು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ  15 ಮತ್ತು 16 ರಂದು ದೆಹಲಿಯಲ್ಲಿ ಎರಡು ದಿನಗಳ ಸಂಭ್ರಮಾಚರಣೆಗೆ ಅವರು ಸಜ್ಜಾಗಿದ್ದಾರೆ. ಪ್ರತೀಕ್ ವಿನ್ಯಾಸಗೊಳಿಸಿದ ಮತ್ತು ಅನುಪಮ್ ಅರುಣಾಚಲಂ (Anupam Arunachalam) ಅವರು ಚಿತ್ರಿಸಿದ ಕಲಾಕೃತಿಯ ಕಾರ್ಡ್ ಈಗ ವೈರಲ್​ ಆಗಿದೆ.  ನಾವು ಸ್ವರಾ ಮತ್ತು ಫಹಾದ್ ಅವರ ಜೀವಿತಾವಧಿಯಲ್ಲಿ ಆನಂದದಾಯಕ ಒಟ್ಟಿಗೆ ಇರಬೇಕೆಂದು ನಾವು ಬಯಸುತ್ತೇವೆ ಎಂದು ಕುಟುಂಬದವರು ಹೇಳಿದ್ದಾರೆ. 

Swara Bhaskar ಮದುವೆ ಅಸಿಂಧು ಎಂದ ಧರ್ಮಗುರು: ರಕ್ಷಣೆಗೆ ಬಂದ ಆರ್​ಜೆ ಸಯೇಮಾ

"ಇರಾ ಮತ್ತು ಚಿತ್ರಪು ಉದಯ್ ಭಾಸ್ಕರ್ ಅವರು ತಮ್ಮ ಮಗಳು ಸ್ವರಾ ಮತ್ತು ಅಳಿಯ ಫಹಾದ್ ಅಹ್ಮದ್ ಅವರನ್ನು ಅಭಿನಂದಿಸುತ್ತಿದ್ದು, ನಿಮ್ಮ ಉಪಸ್ಥಿತಿ ಬಯಸುತ್ತದೆ' ಎಂದು ಇನ್ವಿಟೇಷನ್​ ಕಾರ್ಡ್​ನಲ್ಲಿ (Invitation card) ಬರೆಯಲಾಗಿದೆ. 

Follow Us:
Download App:
  • android
  • ios