ನಟ ವಿಕ್ಕಿ ಕೌಶಲ್ ಬಗ್ಗೆ ಈಗ ಬಹಳಷ್ಟು ಸುದ್ದಿಗಳು ಓಡಾಡುತ್ತಿವೆ. ಬಾಲ್ಯದಲ್ಲೇ ತಂದೆಯ ಜೊತೆಗೆ ಶೂಟಿಂಗ್ ಸೆಟ್‌ಗೆ ಹೋಗುತ್ತಿದ್ದರು. Childhoodನಲ್ಲೇ ಬಾಲಿವುಡ್ ಹೀರೋ ಆಗುವ ಕನಸು ಕಂಡಿದ್ದರು ಈ ವಿಕ್ಕಿ. ವಿಕ್ಕಿ ಕೌಶಲ್ ತಮ್ಮ ಭವಿಷ್ಯವನ್ನು ಮೊದಲೇ ತಿಳಿದಿದ್ರಾ? ಹೌದು, ಅಂತಿವೆ ಅವರ ಆಪ್ತರ ಬಳಗ.. 

ನಟ ವಿಕ್ಕಿ ಕೌಶಲ್ (Vicky Kaushal) ಬಗ್ಗೆ ಈಗ ಬಹಳಷ್ಟು ಸುದ್ದಿಗಳು ಓಡಾಡುತ್ತಿವೆ. ಮುಂಬೈನಲ್ಲಿ ಹುಟ್ಟಿದ ವಿಕ್ಕಿ ಕೌಶಲ್ ಬಾಲ್ಯದಲ್ಲೇ ತಂದೆಯ ಜೊತೆಗೆ ಶೂಟಿಂಗ್ ಸೆಟ್‌ಗೆ ಹೋಗುತ್ತಿದ್ದರು. ಅವರ ತಂದೆ ಶ್ಯಾಮ್ ಕೌಶಲ್ ಸಾಹಸ ನಿರ್ದೇಶಕರು. ಆಗಲೇ ಬಾಲಿವುಡ್ ಹೀರೋ ಆಗುವ ಕನಸು ಕಂಡಿದ್ದರು ಈ ವಿಕ್ಕಿ. ಈಗ ಅದು ನನಸಾಗಿದೆ. ವಿಕ್ಕಿ ಕೌಶಲ್ ತಮ್ಮ ಭವಿಷ್ಯವನ್ನು ಮೊದಲೇ ತಿಳಿದಿದ್ರಾ? ಹೌದು, ಅಂತಿವೆ ಅವರ ಆಪ್ತರ ಬಳಗ. 

ಕಾರಣ, ನಟ ವಿಕ್ಕಿ ಕೌಶಲ್ ಅವ್ರಿಗೆ ಈ Manifestation ಅಂತಾರಲ್ಲ, ಅದನ್ನು ನಿಖರವಾಗಿ ಮಾಡುವ ಅಭ್ಯಾಸ ಇದೆಯಂತೆ.. ಬಾಲ್ಯದಿಂದಲೂ ಈ ಅಭ್ಯಾಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ವಿಕ್ಕಿ, ಇದರಲ್ಲಿ ಯಾವತ್ತೂ ಫೇಲ್ ಆಗಿಲ್ವಂತೆ. ಈ ಟ್ಯಾಲೆಂಟ್ ಇದ್ಯಂತೆ ವಿಕ್ಕಿ ಕೌಶಲ್‌ಗೆ!. ಅವರು 10-12 ವರ್ಷ ಇದ್ದಾಗಿನಿಂದಲೂ ನಾನು ಮುಂದೆ ಬಾಲಿವುಡ್ ಬಿಗ್ ಸ್ಟಾರ್ ಆಗ್ತೀನಿ ಅಂತಾನೇ ಇದ್ರಂತೆ. ಅದು ಸುಳ್ಳು ಅಂತ ಅಂದ್ಕೊಂಡ ಬಹಳಷ್ಟು ಮಂದಿಗೆ ಈಗ ಸತ್ಯ ಅಂತ ಅರ್ಥವಾಗಿದೆ. 

ಎಲ್ಲಿಂದ ಬಂದ್ರು ಈ ವಿಕ್ಕಿ ಕೌಶಲ್, 'ಕತ್ರಿನಾ ಪತಿ' ಛತ್ರಪತಿ ಸಂಭಾಜಿ ಮಹಾರಾಜ್ ಆಗಿದ್ದು ಹೇಗೆ?

ಈ ಮೆನಿಫೆಸ್ಟೇಶನ್ ಅಂದ್ರೆ ಏನು ಅಂತ ಯಾರಿಗೂ ಹೇಳ್ಬೇಕಾಗಿಲ್ಲ..! ಯಾಕೆ ಅಂದ್ರೆ ತುಂಬಾ ಮಂದಿಗೆ ಈ ಶಬ್ಧ ಹಾಗೂ ಅರ್ಥ ಗೊತ್ತು. ಅವರಲ್ಲಿ ಬಹಳಷ್ಟು ಮಂದಿ ಅದನ್ನು ಸ್ಟ್ರಾಂಗ್ ಆಗಿ ಮಾಡಲ್ಲ ಅಷ್ಟೇ. ಅದಕ್ಕೇ ಅವ್ರು ಅಂದ್ಕೊಳ್ಳೋದೇ ಒಂದು ಆಗೋದೇ ಇನ್ನೊಂದು..! ಆದ್ರೆ, ಈ Manifestation ತುಂಬಾ ಚೆನ್ನಾಗಿ ಅರಿತು, ಅದನ್ನು ಸರಿಯಾಗಿ ಮಾಡಿಬಿಟ್ರೆ ಅವರು ಅಂದ್ಕೊಂಡಿದ್ದು ಆಗೋದು ಪಕ್ಕಾ ಅಂತಾರೆ ಅದನ್ನು ಸಾಧಿಸಿದವರು.

ಬೇಕಾದ್ರೆ ಈ ವಿಕ್ಕಿ ಕೌಶಲ್ ಹತ್ರನೇ ಕೇಳಿ ಟಿಪ್ಸ್ ತಗೊಳ್ಳಿ.. ಒಟ್ಟಿನಲ್ಲಿ, ನಟ ವಿಕ್ಕಿ ಕೌಶಲ್ ಇಂದು ವಿಶ್ವವಿಖ್ಯಾತ ನಟ, ಭಾರತದ ಟಾಪ್ ಸ್ಟಾರ್. ಹಾಗೆ ನೋಡಿದರೆ ಛಾವಾ (Chhaava) ಸಿನಿಮಾಗಿಂತ ಮೊದಲು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರೇ ವಿಕ್ಕಿಗಿಂತ ದೊಡ್ಡ ಸ್ಟಾರ್ ಆಗಿದ್ದರು. ಅವರಿಬ್ಬರ ಮಧ್ಯೆ ಹೋಲಿಕೆ ಅಸಾಧ್ಯ.

ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..!

ಆದರೆ, ಸ್ಟಾರ್‌ಡಂ ಅಂತ ಬಂದ್ರೆ ವಿಕ್ಕಿಗಿಂತ ರಶ್ಮಿಕಾ ಹಿರೋಯಿನ್ ಲಿಸ್ಟ್‌ನಲ್ಲಿ ಟಾಪ್ ಒನ್‌ ಆಗಿದ್ದರು. ಈಗ ವಿಕ್ಕಿ ಕೌಶಲ್ ಕೂಡ ಟಾಪ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅದೇನು ಮನಿಫೆಸ್ಟೇಶನ್ ಜಾದುನೋ ಅಥವಾ ಅವರ ಲೈಪ್ ಉದ್ಧೇಶವೇ ಹಾಗಿತ್ತೋ..!? ಅದನ್ನು ಅವರನ್ನೇ ಕೇಳಿ ತಿಳಿದುಕೊಳ್ಳಬೇಕಷ್ಟೇ..!