Asianet Suvarna News Asianet Suvarna News

ಮಾಜಿ  ಪ್ರೇಯಸಿಗೆ  ದೋಖಾ, ಬಲವಂತವಾಗಿ ಗರ್ಭಪಾತ... ನಟನ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ನಟ 11 ವರ್ಷ ಒಂದೇ ಮನೆಯಲ್ಲಿ ವಾಸವಾಗಿದ್ದನು. ಸಹನಟಿಯ ಪರಿಚಯವಾಗುತ್ತಲೇ ತನ್ನಿಂದ ಅಂತರ ಕಾಯ್ದುಕೊಂಡಿದ್ದು, ಮೋಸ ಮಾಡಿದ್ದಾನೆ ಎಂದು ನಟನ ವಿರುದ್ಧ ಆತನ ಪ್ರೇಯಸಿ ದೂರು ದಾಖಲಿಸಿದ್ದಳು. ಇದೀಗ ಪೊಲೀಸರಿಂದ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.

Chargesheet filed against Telagu Actor Raj Tarun by police for cheating ex girlfriend mrq
Author
First Published Sep 7, 2024, 11:52 AM IST | Last Updated Sep 7, 2024, 11:52 AM IST

ಹೈದರಾಬಾದ್: ಟಾಲಿವುಟ್ ನಟ ರಾಜ್ ತರುಣ್ ವಿರುದ್ಧ ಮಾಜಿ ಗೆಳತಿಗೆ ಮೋಸ ಮಾಡಿದ ಆರೋಪ ಕೇಳಿ ಬಂದಿತ್ತು. ಮದುವೆಯಾಗೋದಾಗಿ ನಂಬಿಸಿ ಮೋಸ ಮಾಡಿದ್ದಾನೆ. 11 ವರ್ಷ ರಿಲೇಶನ್‌ಶಿಪ್ ಬಳಿಕ ವಂಚಿಸಿದ್ದಾನೆ ಎಂದು ರಾಜ್ ತರುಣ್ ಗೆಳತಿ ಲಾವಣ್ಯ ದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು, ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆ  ಮಾಡಿದ್ದಾರೆ. ಈ ಆರೋಪಪಟ್ಟಿಯಲ್ಲಿ ಬಲವಂತವಾಗಿ ಲಾವಣ್ಯಗೆ ಗರ್ಭಪಾತ ಮಾಡಿಸಲಾಗಿದೆ ಎಂಬ ಅಂಶ ಉಲ್ಲೇಖವಾಗಿದೆ. ಲಾವಣ್ಯ ಆಸ್ಪತ್ರೆಗೆ ದಾಖಲಾಗಿ ಗರ್ಭಪಾತ ಮಾಡಿಸಿಕೊಂಡ ವೈದ್ಯಕೀಯ ದಾಖಲೆಗಳು  ಪೊಲೀಸರಿಗೆ ಲಭ್ಯವಾಗಿವೆ. 

ತಮ್ಮ ರಿಲೇಶನ್‌ಶಿಪ್‌ಗೆ ಸಂಬಂಧಿಸಿದ ದಾಖಲೆಗಳನ್ನು ಲಾವಣ್ಯ ಪೊಲೀಸರಿಗೆ ನೀಡಿದ್ದಾರೆ. ತನ್ನ ಜೊತೆ ರಿಲೇಶನ್‌ಶಿಪ್‌ನಲ್ಲಿದರೂ ಸಹನಟಿ ಮಾಳವಿ ಮಲ್ಹೋತ್ರಾ ಜೊತೆಯಲ್ಲಿಯೂ ರಾಜ್ ತರುಣ್ ಸಂಬಂಧ ಹೊಂದಿದ್ದಳು. ರಾಜ್ ತರುಣ್ ಜೊತೆ ತನ್ನ ಮದುವೆಯಾಗಿರೋದಾಗಿ ಹೇಳಿಕೊಂಡಿದ್ದು, ಮಾಳವಿ ಮಲ್ಹೋತ್ರಾ ಮತ್ತು ಆಕೆಯ ಸೋದರ ತನಗೆ ಬೆದರಿಕೆ ಹಾಕಿದ್ದಾರೆ ಎಂದು ಲಾವಣ್ಯ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ ರಾಜ್ ತರುಣ್ ಮಾತ್ರ ತಮ್ಮ ವಿರುದ್ಧ ಕೇಳಿ ಬಂದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದರು. ಲಾವಣ್ಯಗೆ ನಶೆ ಪದಾರ್ಥ ಸೇವನೆ ಸೇರಿದಂತೆ ಹಲವು ಕೆಟ್ಟ ಅಭ್ಯಾಸಗಳಿವೆ ಎಂದಿದ್ದರು. ಎಫ್‌ಐಆರ್ ದಾಖಲಾದ ಬಳಿಕ ತೆಲಂಗಾಣ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದರು.

ಗರ್ಲ್‌ಫ್ರೆಂಡ್‌ ಜೊತೆ ಚಕ್ಕಂದವಾಡಿ ಎಸ್ಕೇಪ್‌ ಆದ ಪ್ರಖ್ಯಾತ ನಟ, ದೂರು ದಾಖಲಿಸಿದ ಪ್ರೇಯಸಿ!

ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಲಾವಣ್ಯ, ನಾವಿಬ್ಬರೂ ಮದುವೆಯಾಗಿದ್ದೇವೆ. ಈ ವಿಷಯ ನಮ್ಮ ಕುಟುಂಬಸ್ಥರಿಗೂ ಗೊತ್ತಿತ್ತು. ಕಳೆದ ಸೆಪ್ಟೆಂಬರ್‌ನಿಂದ ನನ್ನಿಂದ ದೂರವಾಗಲು ರಾಜ್ ತರುಣ್ ಪ್ರಯತ್ನಿಸುತ್ತಿರೋದು ನನ್ನ ಗಮನಕ್ಕೆ ಬಂತು. ಕಳೆದ 15 ವರ್ಷಗಳಿಂದ ನಮ್ಮಿಬ್ಬರಿಗೂ ಪರಿಚಯ. 11 ವರ್ಷದಿಂದ ರಿಲೇಶನ್‌ಶಿಪ್‌ನಲ್ಲಿದ್ದೇವೆ. ನನಗೆ ಆತನ ಬಳಿಯಲ್ಲಿರುವ ಹಣ ಬೇಡ. ರಾಜ್ ತರುಣ್ ಮತ್ತು ನಾನು ರಿಲೇಶನ್‌ಶಿಪ್ ನಲ್ಲಿರೋ ವಿಷಯ ಮಾಳವಿಗೂ ಗೊತ್ತಿದೆ. ಆದರೂ ರಾಜ್ ತರುಣ್ ಜೊತೆ ಸಂಬಂಧ ಬೆಳೆಸಿದ್ದಾಳೆ. ಆಕೆ ರಾಜ್‌ ತರುಣ್‌ಗಾಗಿ ನನ್ನ ಸ್ನೇಹ ಕಳೆದುಕೊಂಡಳು.

ಈ ನಡುವೆ ಸಂಯುಕ್ತಾ ಹೆಸರಿನ ಯುವತಿಯ ವಿಡಿಯೋ ರಿವೀಲ್ ಆಗಿತ್ತು. ಕಳೆದ ಒಂದು ತಿಂಗಳಿನಿಂದ ನಟ ರಾಜ್ ತರುಣ್‌ಗೆ ಸಂಬಂಧಿಸಿದ ಸುದ್ದಿಯನ್ನು ನೋಡುತ್ತಿದ್ದೇನೆ. ನಾನು ಆತ ಸಂಬಂಧ ಹೊಂದಿರುವ ಯುವತಿಯ ಸ್ನೇಹಿತೆ. ಲಾವಣ್ಯ ಮತ್ತು ರಾಜ್ ತರುಣ್‌ಗೆ ಒಂದು ಮಗುವಿದೆ. ಒಂದೇ ಹಾಸಿಗೆಯಲ್ಲಿ ಇಬ್ಬರು ವಿರುದ್ಧ ದಿಕ್ಕಿಗೆ ಮುಖ ಮಾಡಿ ಮಲಗುತ್ತಾರೆ. ಆ ಪುಟ್ಟ ಮಗು ಫೋನ್ ಮಾಡಿ ಹೇಳುತ್ತದೆ. ಮನುಷ್ಯ ಎಷ್ಟು  ಸುಂದರವಾಗಿದ್ರೆ ಏನು ಪ್ರಯೋಜನ? ಸಿನಿಮಾದಲ್ಲಿ ಮಾತ್ರ ಹೀರೋಗಿರಿ, ಆತ ಗಂಡಸೇ ಅಲ್ಲ ಎಂದು ಹೇಳಿದ್ದರು.

'ಆತ ಗಂಡಸೇ ಅಲ್ಲ, ಒಂದೇ ಹಾಸಿಗೆಯಲ್ಲಿ ಮಲಗಿದ್ದರೂ......'; ನಟ ತರುಣ್ ವಿರುದ್ಧ ತಿರುಗಿಬಿದ್ದ ಅಪರಿಚಿತ ಯುವತಿ

Latest Videos
Follow Us:
Download App:
  • android
  • ios