Asianet Suvarna News Asianet Suvarna News

ಚಂದ್ರಯಾನ v/s ಆದಿಪುರುಷ: ಸಾಮಾಜಿಕ ಜಾಲತಾಣದಲ್ಲಿ ಇವುಗಳದ್ದೇ ಚರ್ಚೆ

ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿರುವ ಬೆನ್ನಲ್ಲೇ ಆದಿಪುರುಷ್​ ಚಿತ್ರ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವೇನು? 
 

Chandrayaan 3 Is Cheaper Than Om  Adipurush And Internet Is Dumbstruck
Author
First Published Jul 14, 2023, 9:48 PM IST

ಭಾರತ ಶುಕ್ರವಾರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಬಹುನೀರಿಕ್ಷಿತ  ಚಂದ್ರಯಾನ-3ರ ಉಡಾವಣೆ   (Chandrayaan 3) ಯಶಸ್ವಿಯಾಗಿ ನಡೆದಿದೆ.  ಮಧ್ಯಾಹ್ನ 2.35ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ISRO) ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಟೇಕಾಫ್ ಆಗಿದ್ದು, ವಿಜ್ಞಾನಿಗಳು ಸೇರಿದಂತೆ ಸಮಸ್ತ ಭಾರತೀಯರಲ್ಲಿ ಹರ್ಷೋದ್ಗಾರ ಮೊಳಗಿದೆ. ಈ ಚಂದ್ರಯಾನ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಾಧ್ಯವಾದರೆ, ಭಾರತವು ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಇಂಥದ್ದೊಂದು ಸಾಧನೆ ಮಾಡಲು ಆರು ದಶಕಗಳ ಹಿಂದೆ ಇಸ್ರೋ ಪಿತಾಮಹ ವಿಕ್ರಮ್ ಸಾರಾಭಾಯಿ ಅವರು ಕಂಡ ಕನಸು ಇಂದು ನನಸಾಗಿದೆ. ನಿಜವಾದ ಭಾರತೀಯರೆಲ್ಲರೂ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರೆ, ಇಷ್ಟೊಂದು ಹಣವನ್ನು ಇದಕ್ಕೆ ಸುರಿಯುವ ಅಗತ್ಯವೇನಿತ್ತು ಎಂದು ಅಲ್ಲಲ್ಲಿ ಕೆಲವರು ಈ ಯೋಜನೆಯ ಅರಿವೇ ಇಲ್ಲದವರು ಕುಹಕವಾಡುತ್ತಿರುವುದೂ ನಡೆದಿದೆ. 

ಭಾರತವನ್ನು ವಿಶ್ವಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಷ್ಟೋ ತಿಂಗಳು ಹಗಲು ಇರುಳು ಎನ್ನದೇ ಇಸ್ರೋ ವಿಜ್ಞಾನಿಗಳು ಪಟ್ಟ ಶ್ರಮದ ಫಲವಾಗಿ ಚಂದ್ರಯಾನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇವರೆಗೆ ಅಮೆರಿಕ, ರಷ್ಯ ಹಾಗೂ ಚೀನಾ ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇನ್ನು ಈ ಯೋಜನೆ ಯಶಸ್ವಿಯಾದರೆ, ಭಾರತದ ಅಂತರಿಕ್ಷ ವಿಜ್ಞಾನ ವಲಯಕ್ಕೆ ಬೂಸ್ಟ್‌ ಸಿಗುತ್ತದೆ. ಉಪಗ್ರಹ ಉಡಾವಣೆ ಸೇರಿದಂತೆ ಹಲವು ವಿಚಾರಗಳಿಗೆ ವಿಶ್ವದ ಹಲವು ರಾಷ್ಟ್ರಗಳು ಭಾರತವನ್ನೇ ಅವಲಂಬಿಸಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗಲಿದೆ. ಇಂಥ ಮಹತ್ವಾಕಾಂಕ್ಷಿ  ಯೋಜನೆಗೆ ಖರ್ಚಾಗಿದ್ದು 615 ಕೋಟಿ ರೂಪಾಯಿಗಳು. 

Adipurush ರಾಮಾಯಣವೂ ಅಲ್ಲ, ಹನುಮ ದೇವ್ರೂ ಅಲ್ಲ ಎಂದ ಸಂಭಾಷಣೆಕಾರ ಕೊನೆಗೂ ಕೇಳಿದ್ರು ಕ್ಷಮೆ!

ಭಾರತಕ್ಕೆ ಇಷ್ಟೊಂದು ಪ್ರಯೋಜನಕಾರಿಯಾಗಿರುವ ಚಂದ್ರಯಾನಕ್ಕೆ 615 ಕೋಟಿ ರೂಪಾಯಿಗಳು ಖರ್ಚಾಗಿದ್ದರೆ, ಸಕತ್​ ಟ್ರೋಲ್​ ಆಗಿ ಟುಸ್​ ಎಂದಿರುವ ಪ್ರಭಾಸ್​ (Prabhas) ಅವರ ಚಿತ್ರಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತಾ? 700 ಕೋಟಿ ರೂಪಾಯಿಗಳು!  ಆದಿಪುರುಷ್​ ಚಿತ್ರಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿ ಆಕಾಶಕ್ಕೆ ಚಿಮ್ಮಿದೆ ಚಂದ್ರಯಾನ 3 ರಾಕೆಟ್‌. ರಾಕೆಟ್​ ಉಡಾವಣೆಗೆ 615 ಕೋಟಿ ರೂಪಾಯಿ ಖರ್ಚು ಮಾಡುವ ಅಗತ್ಯವೇನಿತ್ತು, ಇದರಿಂದ ನಮಗೇನು ಪ್ರಯೋಜನ? ಈ ಹಣವನ್ನು ಬಡವರಿಗೆ ಕೊಡಬಹುದಿತ್ತು ಎಂದು ಕೆಲವರು ಹೇಳುತ್ತಿದ್ದು, ಅಂಥವರಿಗೆ ಆದಿಪುರುಷ್​ ಚಿತ್ರದ ಬಜೆಟ್​ ಲೆಕ್ಕಾಚಾರ ಹಾಕಿ ತಿರುಗೇಟು ನೀಡಲಾಗುತ್ತಿದೆ. ರಾಕೆಟ್​ ಉಡಾವಣೆಯಿಂದ ನಮಗೇನು ಎಂದು ಕೆಲವರು ತಲೆಬುಡವಿಲ್ಲದ ಪ್ರಶ್ನೆ ಮಾಡುತ್ತಿದ್ದರೆ, ಬಾಲಿವುಡ್​ ಅನ್ನು ಮಕಾಡೆ ಮಲಗಿಸಿರುವ, ರಾಕೆಟ್​ ಉಡಾವಣೆಗಿಂತಲೂ ಹೆಚ್ಚಿನ ಖರ್ಚು ಮಾಡಿರುವ ಆದಿಪುರುಷ್​ನಂಥ ಚಿತ್ರಗಳಿಂದ ನಿಮಗೆ ಏನು ಪ್ರಯೋಜನ ಆಗಿದೆ ಎಂದು ಇನ್ನೊಂದು ವರ್ಗ ಕೇಳುತ್ತಿದೆ! 

 ಹೀಗೆ  ಆದಿಪುರುಷ್‌ ಚಿತ್ರವನ್ನು ಇದೀಗ ಚಂದ್ರಯಾನಕ್ಕೂ ಹೋಲಿಕೆ ಮಾಡಲಾಗುತ್ತಿದೆ.   ಚಂದ್ರಯಾನ್‌ 3 ರಾಕೆಟ್‌ನ ಒಟ್ಟಾರೆ ಪ್ರಾಜೆಕ್ಟ್‌ನ ಬಜೆಟ್‌ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ  ಹೊರಬೀಳುತ್ತಿದ್ದಂತೆಯೇ, ಅಬ್ಬಬ್ಬಾ ಇಷ್ಟೆಲ್ಲಾ ಖರ್ಚು ಮಾಡಲಾಗಿದೆಯೇ ಎಂದು ಪ್ರಶ್ನಿಸುವವರಿಗೆ ಆದಿಪುರುಷ್​ ಬಜೆಟ್​ ಹೇಳಿ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ.  700 ಕೋಟಿ ವೆಚ್ಚದಲ್ಲಿ ಆದಿಪುರುಷ್‌ (Adipurush) ಸಿನಿಮಾ ನಿರ್ಮಾಣವಾದರೆ, ಅದಕ್ಕಿಂತ ಕಡಿಮೆ ಮೊತ್ತ ಅಂದರೆ, 615 ಕೋಟಿ ವೆಚ್ಚದಲ್ಲಿ ಚಂದ್ರಯಾನ 3 ರಾಕೆಟ್‌ ಸಿದ್ಧವಾಗಿದೆ. ಯಾವುದು ನಮ್ಮ ಹೆಮ್ಮೆ ಎಂದು ಹೇಳಬಲ್ಲಿರಾ ಎಂದು ಪ್ರಶ್ನೆ ಮಾಡಲಾಗುತ್ತಿದೆ. ಇನ್ನು ಹಲವರು  ಇಸ್ರೋಗೆ ಇನ್ನೂ ಹೆಚ್ಚಿನ ಬಜೆಟ್ ನೀಡಿ ಅದನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವ ಅವಶ್ಯಕತೆ ಇದೆ ಎನ್ನುತ್ತಿದ್ದಾರೆ.   
Adipurush: ಹಿಂದೂಗಳು ಸಹಿಷ್ಣುರೆಂದು ಈ ಮಟ್ಟಕ್ಕೆ ಇಳಿಯೋದಾ ಎಂದು ಹೈಕೋರ್ಟ್​ ಗರಂ

Follow Us:
Download App:
  • android
  • ios