Asianet Suvarna News Asianet Suvarna News

Adipurush ರಾಮಾಯಣವೂ ಅಲ್ಲ, ಹನುಮ ದೇವ್ರೂ ಅಲ್ಲ ಎಂದ ಸಂಭಾಷಣೆಕಾರ ಕೊನೆಗೂ ಕೇಳಿದ್ರು ಕ್ಷಮೆ!

ಆದಿಪುರುಷ್​ ರಾಮಾಯಣವೂ ಅಲ್ಲ, ಹನುಮ ದೇವ್ರೂ ಅಲ್ಲ ಎಂದು ಹೇಳಿ ವಿವಾದಕ್ಕೆ ಸಿಲುಕಿರೋ ಚಿತ್ರದ ಸಂಭಾಷಣೆಕಾರ ಮನೋಜ್​ ಮುಂತಶೀರ್​ ಕೊನೆಗೂ ಕ್ಷಮೆ ಕೋರಿದ್ದಾರೆ. 
 

Adipurush dialogue writer Manoj Muntashir apologises unconditionally after movie flops suc
Author
First Published Jul 8, 2023, 4:30 PM IST

ಓಂ ರಾವತ್​ (Om Raut) ನಿರ್ದೇಶನ ಆದಿಪುರುಷ್​ ಮೊದಲಿನಿಂದಲೂ ವಿವಾದಗಳ ಕೇಂದ್ರಬಿಂದುವಾಗಿಯೇ ಹೊರಹೊಮ್ಮಿದೆ.  ಈ ಸಿನಿಮಾದಲ್ಲಿ ಪ್ರಭಾಸ್​ (Prabhas), ಕೃತಿ ಸನೋನ್​, ದೇವದತ್ತ ನಾಗೆ, ಸೈಫ್​ ಅಲಿ ಖಾನ್​, ಸನ್ನಿ ಸಿಂಗ್​ ಮುಂತಾದವರು ನಟಿಸಿದ್ದಾರೆ.  ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ.  ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದಿದ್ದರು. ಆದರೆ ಹಲವರು ಇದರ ಬಗ್ಗೆ ಟೀಕೆ ಶುರು ಮಾಡಿದ್ದಾರೆ. ಹಲವರು ಮೊದಲಿನಿಂದಲೂ ಚಿತ್ರವನ್ನು ಟ್ರೋಲ್​  ಮಾಡುತ್ತಲೇ ಬಂದಿದ್ದಾರೆ.  ಚಿತ್ರದ ಹಲವು ದೃಶ್ಯಗಳಲ್ಲಿ ತಲೆಬುಡವಿಲ್ಲದ ಸಂಭಾಷಣೆಗಳಿದ್ದರೆ, ಹಲವೆಡೆ ಕಾಲ್ಪನಿಕ ದೃಶ್ಯಗಳನ್ನು ರಚಿಸಲಾಗಿದೆ ಎನ್ನುತ್ತಿದ್ದವರೇ ಹೆಚ್ಚು. ಇನ್ನು ಕೆಲವರು ಚಿತ್ರವನ್ನು ಕೊಂಡಾಡುತ್ತಿರುವುದೂ ಇದೆ. ಈ ಚಿತ್ರ ರಾಮಾಯಣವನ್ನು ಆಧರಿಸಿ ಮಾಡಲಾಗಿದೆ ಎಂದೇ  ಹೇಳಲಾಗುತ್ತಿತ್ತು. ಆದರೆ ಇದೀಗ  ಸಂಭಾಷಣಕಾರ ಮನೋಜ್​ ಮುಂತಶೀರ್​ ಅವರು   ಸೆನ್ಸೇಷನ್​ ಹೇಳಿಕೆ ನೀಡಿದ್ದು ಉಲ್ಟಾ ಹೊಡೆದಿದ್ದಾರೆ. ‘ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್​. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್​​ಕ್ಲೈಮರ್​ನಲ್ಲೂ ನಾವು ಅದನ್ನೇ ಹೇಳಿದ್ದೇವೆ’ ಎಂದು ಮನೋಜ್​ ಮುಂತಶೀರ್​ ಹೇಳಿದ್ದು, ಈ ಚಿತ್ರದ ಬಗ್ಗೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಅದಾದ ಬಳಿಕ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದ ಮನೋಜ್​ ಮುಂತಶೀರ್​ ಅವರು,  ಸಂದರ್ಶನವೊಂದರಲ್ಲಿ ತಾವು ಬರೆದಿರುವ  ಸಂಭಾಷಣೆಗಳನ್ನು ಬಹಳ ಸುಲಭವಾಗಿ ಸಮರ್ಥಿಸಿಕೊಂಡಿದ್ದರು. ಅವರು ಹೇಳಿದ್ದೇನೆಂದರೆ, ಬಜರಂಗಬಲಿ ದೇವರಲ್ಲ ಎನ್ನುವುದು. ಅವರ ಪ್ರಕಾರ ಹನುಮಂತ ದೇವರಲ್ಲ, ಬದಲಿಗೆ ಅವನೊಬ್ಬ ಭಕ್ತ ಅಷ್ಟೇ.  ಆತನ ಭಕ್ತಿಯಲ್ಲಿ ಆ ಶಕ್ತಿ ಇದ್ದುದರಿಂದಲೇ ಆತನನ್ನು ದೇವರನ್ನಾಗಿ ಮಾಡಿದ್ದೇವೆ ಎಂದಿದ್ದರು. ಇದಕ್ಕೆ  ಸಾಮಾಜಿಕ ಜಾಲತಾಣಗಳ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಅವರಿಗೆ ಕೊಲೆ ಬೆದರಿಕೆ ಕೂಡ ಬಂದಿತ್ತು.  ಹಿನ್ನೆಲೆಯಲ್ಲಿ ಮನೋಜ್​ ಮುಂತಶೀರ್​ ಅವರು ಭದ್ರತೆಗಾಗಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದು,  ಮುಂಬೈ ಪೊಲೀಸರು ಭದ್ರತೆ ನೀಡಿದ್ದಾರೆ.  

 Adipurush Contraversy: ಹನುಮಂತ ದೇವ್ರೇ ಅಲ್ಲ ಎಂದವರಿಗೆ ಕೊಲೆ ಬೆದರಿಕೆ- ಬಿಗಿ ಪೊಲೀಸ್​ ಬಂದೋಬಸ್ತ್​!

ಇಷ್ಟೆಲ್ಲಾ ಆದ ಬಳಿಕ ಕೊನೆಗೂ  ಮನೋಜ್ ಮುಂತಶಿರ್ (Manoj Muntasheer) ಅವರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಾಪಣೆ ಪತ್ರ ಶೇರ್​ ಮಾಡಿಕೊಂಡಿರುವ ಅವರು,  ಚಿತ್ರವು ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದಾಗಿ ಹೇಳಿದ್ದಾರೆ.  'ಆದಿಪುರುಷನಿಂದ ಜನರ ಭಾವನೆಗಳಿಗೆ ಘಾಸಿಯಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮಗೆ ದಯಪಾಲಿಸಲಿ. ನಮ್ಮ ಪವಿತ್ರ ಸನಾತನ ಮತ್ತು ನಮ್ಮ ಮಹಾನ್ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಶಕ್ತಿ. #ಆದಿಪುರುಷ' ಎಂದು ಅವರು ತಮ್ಮ ಸಂದೇಶದಲ್ಲಿ ಬರೆದಿದ್ದಾರೆ.

ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಕೊನೆಗೂ ಕ್ಷಮೆ ಕೋರಿದ್ದೀರಲ್ಲ, ಅದೇ ಖುಷಿ ಎಂದು ಹಲವರು ಹೇಳಿದ್ದರೆ,  ಬಜರಂಗ ಬಲಿ ನಿಮಗೆ ಶಕ್ತಿಯನ್ನು ನೀಡಲಿ ಎಂದಿದ್ದಾರೆ ಇನ್ನು ಕಲವರು.  'ಕೆಲವೊಮ್ಮೆ ಒಳ್ಳೆಯ ಜನರು ಕೂಡ ದಾರಿ ತಪ್ಪುತ್ತಾರೆ. ಆದರೆ ನಿಮ್ಮ ಕ್ಷಮೆಯಾಚನೆಯು ಕಾರಣಾಂತರಗಳಿಂದ ನೀವು ತಪ್ಪು ಮಾಡಿದರೂ ಸಹ ನೀವು ನಿಜವಾದ ಸನಾತನಿಗಳು ಎಂದು ಸಾಬೀತುಪಡಿಸುತ್ತದೆ. ಶ್ರೀರಾಮನಿಗೆ ನಮಸ್ಕಾರ. ಭಗವಾನ್ ರಾಮನು ನಿಮ್ಮನ್ನು ಆಶೀರ್ವದಿಸಲಿ' ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.

ಇದು ರಾಮಾಯಣ ಅಲ್ಲ, ಅದಿಪುರುಷ್: ಟ್ರೋಲ್ ಬಳಿಕ ಉಲ್ಟ ಹೊಡೆದ ಪ್ರಭಾಸ್ 'ಆದಿಪುರುಷ್' ತಂಡ

Follow Us:
Download App:
  • android
  • ios