ವ್ಯಾಪಾರಿಗೆ ಮೋಸ ಮಾಡಿ ಜನ ಸೇವೆ ಮಾಡ್ತಾರಾ ಸಲ್ಮಾನ್ ಖಾನ್ ? ನಟ ಸೇರಿ ಬೀಯಿಂಗ್ ಹ್ಯೂಮನ್ ಫೌಂಡೇಷನ್‌ನ ಹಲವರಿಗೆ ನೋಟಿಸ್

ಚಂಡೀಗಡ(ಜು.09): ವಂಚನೆ ಪ್ರಕರಣದಲ್ಲಿ ಚಂಡೀಗಡ ಪೊಲೀಸರು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಮತ್ತು ನಟನ ಬೀಯಿಂಗ್ ಹ್ಯೂಮನ್ ಫೌಂಡೇಶನ್‌ಗೆ ಸಂಬಂಧಿಸಿದ 7 ಮಂದಿಗೆ ನೋಟಿಸ್ ಕಳುಹಿಸಿದ್ದಾರೆ. ಈ ವಿಷಯದಲ್ಲಿ ಉತ್ತರಿಸಲು ನಟ ಮತ್ತು ಇತರ ಜನರಿಗೆ ಜುಲೈ 13 ರವರೆಗೆ ಕಾಲಾವಕಾಶ ನೀಡಲಾಗಿದೆ.

"ಅವರಿಗೆ ಉತ್ತರಿಸಲು ಜುಲೈ 13 ರವರೆಗೆ ನೀಡಲಾಗಿದೆ. ಏನಾದರೂ ಅಪರಾಧ ಇದ್ದರೆ ಕ್ರಮ ಕೈಗೊಳ್ಳಲಾಗುವುದು" ಎಂದು ಚಂಡೀಗ ಡ ಎಸ್‌ಪಿ ಕೇತನ್ ಬನ್ಸಾಲ್ ಅವರನ್ನು ಎಎನ್‌ಐ ಹೇಳಿದ್ದಾರೆ.

ನೆಲದಲ್ಲಿ ಕುಳಿತು ಊಟ ಮಾಡಿದ ಐಶ್‌: ಇವರು ರಾಣಿ ಎಂದ ಆ್ಯಮಿ

ಸಲ್ಮಾನ್ ಕೊನೆಯ ಬಾರಿಗೆ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ಕಾಣಿಸಿಕೊಂಡರು. ದಿಶಾ ಪಟಾನಿ, ಜಾಕಿ ಶ್ರಾಫ್ ಮತ್ತು ರಂದೀಪ್ ಹೂಡಾ ಸಹನಟನಾಗಿ ನಟಿಸಿದ ಆಕ್ಷನ್ ಸಿನಿಮಾ ಮೇ 13 ರಂದು ಪ್ರಮುಖ ಡಿಟಿಎಚ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಯಿತು. ತೀವ್ರ ಟೀಕೆ ಎದುರಾದರೂ ಸಹ, ಈ ಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು.

ಸಲ್ಮಾನ್ ತಮ್ಮ ಕಿಟ್ಟಿಯಲ್ಲಿ 'ಕಭೀ ಈದ್ ಕಭಿ ದೀಪಾವಳಿ' ಮತ್ತು 'ಟೈಗರ್ 3' ಸೇರಿದಂತೆ ಒಂದೆರಡು ಸಿನಿಮಾಗಳನ್ನು ಹೊಂದಿದ್ದಾರೆ. ವೈಆರ್‌ಎಫ್ ಫಿಲ್ಮ್ಸ್ ನಿರ್ಮಿಸುತ್ತಿರುವ 'ಟೈಗರ್' ಫ್ರ್ಯಾಂಚೈಸ್‌ನ ಮೂರನೇ ಕಂತುಗಾಗಿ ಅವರು ಕತ್ರಿನಾ ಕೈಫ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ಬಾಲಿವುಡ್‌ನ ಭೈಜಾನ್ 'ಕಬೀ ಈದ್ ಕಭಿ ದೀಪಾವಳಿ' ಚಿತ್ರದಲ್ಲಿ ಪೂಜಾ ಹೆಗ್ಡೆ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.

Scroll to load tweet…