‘ಚಕ್‌ ದೇ ಇಂಡಿಯಾ’, ‘ದಿಲ್‌ ಚಾಹ್ತಾ ಹೈ’, ‘ಹ್ಯಾಪಿ ನ್ಯೂ ಇಯರ್‌’ ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟ ರಿಯೋ ಕಪಾಡಿಯಾ (66) ಗುರುವಾರ ನಿಧನರಾಗಿದ್ದಾರೆ.

ಮುಂಬೈ: ‘ಚಕ್‌ ದೇ ಇಂಡಿಯಾ’, ‘ದಿಲ್‌ ಚಾಹ್ತಾ ಹೈ’, ‘ಹ್ಯಾಪಿ ನ್ಯೂ ಇಯರ್‌’ ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟ ರಿಯೋ ಕಪಾಡಿಯಾ (66) ಗುರುವಾರ ನಿಧನರಾಗಿದ್ದಾರೆ. ಕಪಾಡಿಯಾ ಅವರು ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಕೊನೆಯುಸಿರೆಳೆದರು. ಕಪಾಡಿಯಾ ಅವರು ಸಿನಿಮಾಗಳ ಜೊತೆಗೆ ಖುದಾ ಹಫೀಜ್‌, ದಿ ಬಿಗ್‌ಬುಲ್‌, ಏಜೆಂಟ್‌ ವಿನೋದ್‌, ಕುಟಂಬ್‌ ಎನ್ನುವ ಟೀವಿ ಶೋಗಳಲ್ಲೂ ನಟಿಸಿದ್ದರು. ಇವರು ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದು, ಜನಪ್ರಿಯರಾಗಿದ್ದರು. ಇವರ ಅಂತ್ಯಸಂಸ್ಕಾರ ಶುಕ್ರವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಪದ್ಮ ಪ್ರಶಸ್ತಿ ನಾಮ ನಿರ್ದೇಶನಕ್ಕೆ ಇಂದು ಕೊನೆ ದಿನ

ನವದೆಹಲಿ: ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪುರಸ್ಕಾರಕ್ಕೆ 2024ನೇ ಸಾಲಿಗೆ ನಾಮ ನಿರ್ದೇಶನ ಹಾಗೂ ಶಿಫಾರಸ್ಸು ಮಾಡಲು ಶುಕ್ರವಾರ ಕೊನೆಯ ದಿನವಾಗಿದ್ದು, ಕೇಂದ್ರ ಸರ್ಕಾರದ ಅಧಿಕೃತ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್‌ (https://awards.gov.in) ನಲ್ಲಿ ಹೆಸರು ಸೂಚಿಸಬಹುದಾಗಿದೆ. ಜೊತೆಗೆ ಸ್ವಯಂ ಹೆಸರು ಶಿಫಾರಸು ಮಾಡಿಕೊಳ್ಳಬಹುದಾಗಿದೆ. ಈ ಪ್ರಶಸ್ತಿಗಳನ್ನು ಜ.26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿತರಿಸಲಿದ್ದಾರೆ. ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ, ಕಲೆ, ಸಾಮಾಜಿಕ ಸೇವೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದವರಿಗೆ ಪದ್ಮ ಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ.

ಚಕ್ ದೇ ಹುಡುಗಿಗೆ ಬೌಲ್ಡ್‌ ಆದ ಈ ಫೇಮಸ್‌ ಬೌಲರ್!

ಕಾರ್ಯಕ್ರಮ ಅವ್ಯವಸ್ಥೆಗೆ ರೆಹಮಾನ್‌ ಜವಾಬ್ದಾರಿಯಲ್ಲ: ಎಟಿಸಿಟಿ ಸ್ಪಷ್ಟನೆ
ಚೆನ್ನೈ: ಕಳೆದ ಭಾನುವಾರ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಎ.ಆರ್‌ ರೆಹಮಾನ್‌ ಅವರ ಸಂಗೀತ ಕಾರ್ಯಕ್ರಮದಲ್ಲಿ ಉಂಟಾದ ಯಾವುದೇ ಸಮಸ್ಯೆಗಳಿಗೂ ಹಾಗೂ ರೆಹಮಾನ್‌ ಅವರಿಗೂ ಯಾವುದೇ ಸಂಬಂಧವಿಲ್ಲ. ಎಲ್ಲಾ ತಪ್ಪುಗಳ ಹೊಣೆಯನ್ನೂ ನಾವೇ ಹೊತ್ತುಕೊಳ್ಳುತ್ತೇವೆ ಎಂದು ಕಾರ್ಯಕ್ರಮ ಆಯೋಜಿಸಿದ್ದ ಎಸಿಟಿಸಿ ಇವೆಂಟ್ಸ್ ಹೇಳಿದೆ. ಇಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಂಸ್ಥೆಯ ಸಂಸ್ಥಾಪಕ ಹೇಮಂತ್‌ ಅವರು "ಭಾನುವಾರ ಉಂಟಾದ ಸಮಸ್ಯೆಗಳಿಗೆ ಸಂಸ್ಥೆ ಜವಾಬ್ದಾರಿಯಾಗಿರುತ್ತದೆ. ಯಾರೂ ಕೂಡ ರೆಹಮಾನ್‌ ಬಗ್ಗೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಬಾರದು" ಎಂದಿದ್ದಾರೆ.

ಭಾನುವಾರ ನಗರದಲ್ಲಿ ಎಟಿಸಿಟಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಟಿಕೆಟ್‌ಗೆ ಭಾರೀ ದರ ಇರಿಸದ್ದು, ಕೇವಲ 10,000 ಜನರು ಸಾಲುವ ಸ್ಥಳದಲ್ಲಿ ಟಿಕೆಟ್‌ ಪಡೆಯದೆಯೂ 1 ಲಕ್ಷ ಜನ ಸೇರಿದ್ದು ಸೇರಿದಂತೆ ಭಾರೀ ಅವ್ಯವಸ್ಥೆ ಉಂಟಾಗಿತ್ತು. ಈ ವೇಳೆ ಕಾಲ್ತುಳಿತ ಉಂಟಾಗಿ ಮಕ್ಕಳು ಮತ್ತು ಮಹಿಳೆಯರು ಗಾಯಗೊಂಡಿದ್ದ ಘಟನೆಗಳು ನಡೆದಿದ್ದಲ್ಲದೇ ಮಕ್ಕಳು ಜನಸಂದಣಿಯಲ್ಲಿ ಸಿಲುಕಿ ಅಳುತ್ತಿದ್ದ ವಿಡಿಯೋಗಳು ಭಾರೀ ವೈರಲ್‌ ಆಗಿ, ರೆಹಮಾನ್‌ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.

ಕೇಜ್ರಿ ವಿರುದ್ಧ ‘ಚಕ್ ದೇ ಇಂಡಿಯಾ’ ಖ್ಯಾತಿಯ ನಟ ಕಣಕ್ಕೆ: ಒಟ್ಟು 92 ಅಭ್ಯರ್ಥಿಗಳು!