Asianet Suvarna News Asianet Suvarna News

ಮೆಗಾ ಸ್ಟಾರ್ ಚಿರಂಜೀವಿ ಅಳಿಯ, ನಿಹಾರಿಕಾ ಪತಿ ವಿರುದ್ಧ ದೂರು ದಾಖಲು!

ಸಣ್ಣ ಪುಟ್ಟ ವಿಚಾರಕ್ಕೆ ಚಿರಂಜೀವಿ ಕುಟುಂಬ ಸುದ್ದಿಯಲ್ಲಿತ್ತು. ಆದರೆ ಇದೇ ಮೊದಲ ಬಾರಿ ಇತ್ತೀಚೆಗೆ ಮದುವೆಯಾದ ಸಹೋದರನ ಮಗಳ ಗಂಡ ಅಳಿಯನ ವಿಚಾರವಾಗಿ ದೂರು ದಾಖಲು ಮಾಡಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಏನಿದು ಮ್ಯಾಟರ್?

Case filed against Niharika Konidela husband Chaitanya vcs
Author
Bangalore, First Published Aug 6, 2021, 11:11 AM IST
  • Facebook
  • Twitter
  • Whatsapp

ಟಾಲಿವುಡ್ ನಿರ್ದೇಶಕ ನಾಗಬಾಬು ಪುತ್ರಿ ನಿಹಾರಿಕಾ ಕಳೆದ ವರ್ಷ ಉದ್ಯಮಿ ಚೈತನ್ಯ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಿಹಾರಿಕಾ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರೆ, ಚೈತನ್ಯ ಉದ್ಯಮ expansion ಮಾಡುವುದರಲ್ಲಿ ಓಡಾಡುತ್ತಿದ್ದಾರೆ. ಆದರೀಗ ಚೈತನ್ಯ ವಿರುದ್ಧ ದೂರೊಂದು ದಾಖಲು ಮಾಡಲಾಗಿದೆ. 

ಹೈದರಾಬಾದ್‌ನ ಶೇಕ್‌ಪೇಟೆನಲ್ಲಿರುವ ಟೆನ್‌ಸಿನಾ ಅಪಾರ್ಟ್‌ಮೆಂಟ್‌ನಲ್ಲಿ ಚೈತನ್ಯ ಒಂದು ಫ್ಲಾಟ್ ಖರೀದಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಗಲಾಟೆ ಮಾಡಿದ್ದಾರೆ, ಇನ್ನಿತರೆ ನಿವಾಸಿಗಳಿಗೆ ತೊಂದರೆ ಕೊಡುತ್ತಿದ್ದಾರೆ, ಎಂದು ನಿವಾಸಿಗಳು ದೂರು ನೀಡಿದ್ದಾರೆ. ನಿವಾಸಿಗಳ ವಿರುದ್ಧ ಚೈತನ್ಯ ಕೂಡ ಪ್ರತಿ ದೂರು ನೀಡಿದ್ದಾರೆ ಎನ್ನಲಾಗಿದೆ. 

ಬಾಗಿಲಿಗೆ ಆನೆ ತೋರಣ; ನಿಹಾರಿಕಾ ಮದುವೆ ವಿಶೇಷತೆಗಳೇನು ಗೊತ್ತಾ?

'ನಿನ್ನೆ ರಾತ್ರಿ ಅಪಾರ್ಟ್‌ಮೆಂಟ್ ನಿವಾಸಿಗಳು ಕೆಲವರು ನನ್ನ ಫ್ಲ್ಯಾಟ್‌ಗೆ ಬಂದು ಜೋರಾಗಿ ಬಾಗಿಲು ತಟ್ಟಿ ಗಲಾಟೆ ಮಾಡಿದ್ದಾರೆ. ನಾನು ಬಾಗಿಲು ತೆರೆಯಯುವ ಮೊದಲು ಪೊಲೀಸರಿಗೆ ವಿಷಯ ತಿಳಿಸಿದೆ. ನಂತರ ಅಪಾರ್ಟ್‌ಮೆಂಟ್ ಮಾಲೀಕರಿಗೆ ವಿಷಯ ತಿಳಿಸಿ ಅವರನ್ನು ಸ್ಥಳಕ್ಕೆ ಬರಲು ಹೇಳಿದೆ.  ರಾತ್ರೋರಾತ್ರಿ ನನ್ನ ಫ್ಲಾಟ್‌ಗೆ ನುಗ್ಗಿ ಸುಮಾರು 20 ಮಂದಿ ಅಪಾರ್ಟ್‌ಮೆಂಟ್‌ ನಿವಾಸಿಗಳು ನನ್ನ ವಿರುದ್ಧ ಜಗಳ ಶುರು ಮಾಡಿದ್ದಾರೆ. ನಾನು ವಾಣಿಜ್ಯ ಉದ್ದೇಶಕ್ಕೆ ಕಚೇರಿ ತೆರೆದಿದ್ದೆ. ಅದೇ ಉದ್ದೇಶಕ್ಕಾಗಿ ಅಲ್ಲಿ ಫ್ಲ್ಯಾಟ್ ಖರೀದಿಸಿದ್ದೆ. ಆದರೆ ನಾನು ಅಲ್ಲಿ ಕಚೇರಿ ಮಾಡಬಾರದು, ಅಪಾರ್ಟ್‌ಮೆಂಟ್ ಬಿಟ್ಟು ಹೋಗಬೇಕು ಎಂದು ಒತ್ತಾಯಿಸಿದರು. ನನ್ನ ಫ್ಲ್ಯಾಟ್ ಒಳಗೆ ಗಲಾಟೆ ಮಾಡಿರುವ ಸಿಸಿಟಿವಿ ದೃಶ್ಯಗಳನ್ನು ಬಂಜಾರ ಹಿಲ್ಸ್ ಪೊಲೀಸರಿಗೆ ನಾನು ನೀಡಿರುವೆ,' ಎಂದು ಚೈತನ್ಯ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 

ವಾಣಿಜ್ಯ ಉದ್ದೇಶಕ್ಕೆ ನಾನು ಫ್ಲ್ಯಾಟ್ ಖರೀದಿ ಮಾಡಿರುವುದು ಎಂದು ಮಾಲೀಕರಿಗೆ ತಿಳಿಸಿರಲಿಲ್ಲ. ಇದು ನನ್ನ ತಪ್ಪು ಎಂದು ಒಪ್ಪಿಕೊಂಡಿರುವ ಚೈತನ್ಯ ಆಗಸ್ಟ್‌ 10ರಂದು ಅಪಾರ್ಟ್‌ಮೆಂಟ್ ಖಾಲಿ ಮಾಡುವುದಾಗಿಯೂ ತಿಳಿಸಿದ್ದಾರೆ.

Follow Us:
Download App:
  • android
  • ios