ಭಾರತದಲ್ಲಿ 5 ಜಿ ಅನುಷ್ಠಾನದ ವಿರುದ್ಧ ನಟಿ ಜುಹಿ ಚಾವ್ಲಾ ಅವರ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ವರ್ಚುವಲ್ ವಿಚಾರಣೆಯಲ್ಲಿ ಫಿಲ್ಮ್ ಸಾಂಗ್ ಹಾಡಲಾಗಿದೆ. ಅಪರಿಚಿತ ಜನರು ನಟಿಯ ಚಲನಚಿತ್ರಗಳಿಂದ ಹಾಡುಗಳನ್ನು ಹಾಡಲು ಪ್ರಾರಂಭಿಸಿದ್ದಾರೆ.

'ಘೂಂಘಾಟ್ ಕಿ ಆಡ್ ಸೆ', 'ಲಾಲ್ ಲಾಲ್ ಹೊಂಟೋನ್ ಪೆ' ಮತ್ತು 'ಮೇರಿ ಬನ್ನೊ ಕಿ ಆಯೆಗಿ ಬರಾತ್' ಹಾಡುಗಳು ವಿಚಾರಣೆಗೆ ಅಡ್ಡಿಯುಂಟುಮಾಡಿದವು. ವ್ಯಕ್ತಿಯನ್ನು ಗುರುತಿಸಿ ಕಂಟೆಪ್ಟ್ ಆಫ್ ಕೋರ್ಟ್ ನೋಟಿಸ್ ನೀಡಿ ಎಂದು ಹೈಕೋರ್ಟ್ ಆದೇಶಿಸಿದೆ.

ಸುರಕ್ಷತೆ ಖಚಿತಪಡಿಸಿ; 5G ಕೆನೆಕ್ಷನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ!

ಭಾರತದಲ್ಲಿ ಈಗ 5ಜಿ ಅಳವಡಿಕೆಯ ಚರ್ಚೆ ಜೋರಾಗಿದೆ. 3ಜಿ ಯಿಂದ 4ಜಿಗೆ ಬರುವಾಗಲೇ ಇದು ಪ್ರಕೃತಿ, ಪ್ರಾಣಿ ಸಂಕಲಗಳ ಮೇಲೆ ಮಾಡಿದ ಪರಿಣಾಮ ಭಾರೀ ದೊಡ್ಡದು. ಹಾಗಿರುವಾಗ 5ಜಿ ಬಂದರೆ ಹೇಗಾಗಬಹುದು ಎಂಬ ಆತಂಕ ಬಹಳಷ್ಟು ಜನರಲ್ಲಿದೆ.

ಆದರೆ ಟೆಕ್ನಾಲಜಿ, ಕಾರ್ಪರೇಟ್ ಜಗತ್ತಿಗೆ 5ಜಿ ನೀಡಬಹುದಾದ ಲಾಭ, ಗುಣಗಳು ಊಹನೆಗೂ ಮೀರಿದ್ದು. ಆದರೆ ಇದಕ್ಕೆ ಪರಿಸರ ಪ್ರೇಮಿಗಳಿಂದ ಇದಕ್ಕೆ ತೀವ್ರ ವಿರೋಧ ಕೇಳಿ ಬಂದಿದೆ.