ಶಾರುಖ್ ಖಾನ್, ಪಠಾಣ್, ಜವಾನ್, ಡಂಕಿ ಯಶಸ್ಸಿನ ನಂತರ, ಹಾಲಿವುಡ್ ಚಿತ್ರ 'ಅವೆಂಜರ್ಸ್' ಮುಂದಿನ ಸರಣಿಯಲ್ಲಿ ನಟಿಸುವ ಸಾಧ್ಯತೆ ಇದೆ. ಹಾಲಿವುಡ್ ನಟ ಅಂಥೋನಿ ಮ್ಯಾಕಿ, ಶಾರುಖ್ ಅವರನ್ನು ಆಯ್ಕೆ ಮಾಡಿರುವುದಾಗಿ ವರದಿಗಳು ಹೇಳುತ್ತಿವೆ. ಈ ಹಿಂದೆ ಶಾರುಖ್ ನಟಿಸಿದ್ದ ಹಾಲಿವುಡ್ ಚಿತ್ರ ಬಿಡುಗಡೆಯಾಗಿರಲಿಲ್ಲ. ಬಾಲಿವುಡ್‌ನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಶಾರುಖ್, ಹಾಲಿವುಡ್‌ನಲ್ಲೂ ಮಿಂಚಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿದೆ.

ಬಾಲಿವುಡ್​ ಬಾದ್​ಶಾಹ್​ ಎಂದೇ ಕರೆಯಲ್ಪಡುವ ಶಾರುಖ್​ ಖಾನ್​ ಇದೀಗ ಪಠಾಣ್​ ಮತ್ತು ಜವಾನ್​ ಯಶಸ್ಸಿನ ಗೆಲುವಿನಿಂದ ಬೀಗುತ್ತಿದ್ದಾರೆ. ಅವರ ಡಂಕಿ ಕೂಡ ಯಶಸ್ಸು ಕಂಡಿದೆ. ಈಗ ಕಿಂಗ್​ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಇದಾಗಲೇ ಪಠಾಣ್​ ಮತ್ತು ಜವಾನ್​ ಬಾಲಿವುಡ್​ನ ಬಹುತೇಕ ದಾಖಲೆಗಳನ್ನೂ ಉಡೀಸ್​ ಮಾಡಿದೆ. ಸಾವಿರ ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಇಂಥ ಹಿಟ್​ ಚಿತ್ರಗಳನ್ನು ಕೊಟ್ಟಿರುವ ಶಾರುಖ್​ ಅವರ ಕೆಲವು ಚಿತ್ರಗಳು ರಿಲೀಸೇ ಆಗಿಲ್ಲ ಎನ್ನುವುದು ಗೊತ್ತಾ? 95ಕ್ಕೂ ಚಿತ್ರಗಳಲ್ಲಿ ನಟಿಸಿರುವ ಶಾರುಖ್​ ಅವರ ಕೆಲವು ಚಿತ್ರಗಳು ಫ್ಲಾಪ್​ ಎಂದು ಸಾಬೀತಾಗಿದ್ದರೆ ಐದು ಚಿತ್ರಗಳು ಬಿಡುಗಡೆಯೇ ಕಾಣಲಿಲ್ಲ. ಇವುಗಳ ಪೈಕಿ ಒಂದು ಹಾಲಿವುಡ್​​ ಚಿತ್ರ ಕೂಡ ಇದೆ. 2011 ರಲ್ಲಿ, ಅವರು ಹಾಲಿವುಡ್ ಚಲನಚಿತ್ರ ಎಕ್ಸ್​ಟ್ರೀಮ್​ ಸಿಟಿ ಕೆಲಸ ಮಾಡಿದರು. ಈ ಚಿತ್ರದಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ಕೂಡ ಅವರ ಜೊತೆಗಿದ್ದರು. ಆದರೆ ಚಿತ್ರ ಬಿಡುಗಡೆಯಾಗಲೇ ಇಲ್ಲ. 

ಆದರೆ, ಈಗ ಶಾರುಖ್​ ಅವರ ಕನಸು ನನಸಾಗುವ ಕಾಲ ಸನ್ನಿಹಿತವಾಗುವಂತೆ ಕಾಣಿಸುತ್ತಿದೆ. ಹಾಲಿವುಡ್​ ನಟ ಅಂಥೋನಿ ಮ್ಯಾಕಿ ಅವರ ಅವೆಂಜರ್ಸ್‌ನ ಮುಂದಿನ ಸರಣಿಗೆ ಶಾರುಖ್​ ಆಯ್ಕೆ ಆಗಿರುವುದಾಗಿ ವರದಿಯಾಗಿದೆ. ‘ಕ್ಯಾಪ್ಟನ್ ಅಮೆರಿಕ: ಬ್ರೇವ್ ನ್ಯೂ ವರ್ಲ್ಡ್‌ ಖ್ಯಾತಿಯ ಅಂಥೋನಿ ಅವರು, ನಟ ಶಾರುಖ್​ ಅವರನ್ನು ಆಯ್ಕೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಇದಾಗಲೇ ಅಂಥೋನಿ ಮ್ಯಾಕಿ ಅವರು, ಶಾರುಖ್​ ಬಗ್ಗೆ ಮಾತನಾಡಿದ್ದು, ಶಾರುಖ್ ಖಾನ್ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್​ ಮಂದಿಗೂ ಪರಿಚಿತರು. ಅನೇಕರು ಇವರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ ಎಂದಿದ್ದಾರೆ. 

ಮಗಳ ಹೊಕ್ಕಳು ಕಾಣದಂತೆ ವೇದಿಕೆ ಮೇಲೆಯೇ ಶಾರುಖ್​ ಏನ್​ ಮಾಡಿದ್ರು ನೋಡಿ! ನಟನಿಗೆ ಅಪಾರ ಮೆಚ್ಚುಗೆ

ಹಲವಾರು ನಟರನ್ನು ನೋಡಿದ ಬಳಿಕ, ಮ್ಯಾಕಿ ಅವರು, ಶಾರುಖ್ ಅವರನ್ನು ಆಯ್ಕೆ ಮಾಡಿದ್ದು, ಇದರಿಂದ ಕಿಂಗ್​ ಖಾನ್​ ಹಾಲಿವುಡ್​ಗೆ ಹಾರಲಿದ್ದಾರೆ ಎನ್ನಲಾಗಿದೆ. ಆದರೆ ಸದ್ಯ ಅವರು ಬಾಲಿವುಡ್​ ಬಿಡುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಷ್ಟಕ್ಕೂ ಬಾಲಿವುಡ್​ನಲ್ಲಿ ತಮ್ಮದೇ ಆಗಿರುವ ಛಾಪು ಮೂಡಿಸಿರುವ ಶಾರುಖ್​, ವಯಸ್ಸು 60ಕ್ಕೆ ಸಮೀಪವಾದರೂ ನಾಯಕನಾಗಿಯೇ ಮಿಂಚುತ್ತಿದ್ದಾರೆ. ಮಗಳ ವಯಸ್ಸಿನ ನಾಯಕಿಯರ ಜೊತೆ ರೊಮಾನ್ಸ್​ ಕೂಡ ಮಾಡುತ್ತಿದ್ದಾರೆ. ಆದ್ದರಿಂದ ಸದ್ಯ ಅವರು ಬಾಲಿವುಡ್​ ಬಿಡುವುದಿಲ್ಲ. ಆದರೆ ಹಾಲಿವುಡ್​ನಲ್ಲಿ ಅವರಿಗೆ ಇನ್ನಷ್ಟು ಆಫರ್​ಗಳು ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘ಅವೆಂಜರ್ಸ್ ಮುಂದಿನ ಸರಣಿಯಲ್ಲಿ ಯಾವ ಬಾಲಿವುಡ್​ ಹೀರೋನ ನೀವು ಆಯ್ಕೆ ಮಾಡಿಕೊಳ್ಳುತ್ತೀರಿ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನನ್ನ ಪ್ರಕಾರ ಶಾರುಖ್ ಖಾನ್. ಅವರು ಇದಕ್ಕೆ ಅತ್ಯುತ್ತಮ ಆಯ್ಕೆ’ ಎಂದು ಹೇಳಿದ್ದಾರೆ. ಇದರಿಂದ ಹಾಲಿವುಡ್​ನಲ್ಲಿ ಶಾರುಖ್​ ಖಾನ್​ಗೆ ಒಳ್ಳೆಯ ಅವಕಾಶ ಸಿಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. 

'ದಂತದ ಬೊಂಬೆ' ಶಾರುಖ್​ ಪುತ್ರಿ ಸುಹಾನಾಳ ದೇಹದ ಯಾವ್ಯಾವ ಭಾಗಕ್ಕೆ ಕತ್ತರಿ ಬಿದ್ದಿದೆ ನೋಡಿ...