Asianet Suvarna News Asianet Suvarna News

ದ್ವೇಷ ಹರಡುವ ಕಸ ಕಾಶ್ಮೀರ್ ಫೈಲ್ಸ್ ಆಸ್ಕರ್‌ಗೆ ಕಳಿಸಿದ್ರೆ ಭಾರತಕ್ಕೆ ಮುಜುಗರ; ಕೆನಡಾ ನಿರ್ದೇಶಕ

ಕೆನಡಾದ ಖ್ಯಾತ ಸಿನಿಮಾ ನಿರ್ದೇಶಕ ಡೇಲನ್ ಮೋಹನ್ ಗ್ರೇ ಭಾರತದ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕಾಶ್ಮೀರ ಫೈಲ್ಸ್ ಕಲಾತ್ಮಕ ಅರ್ಹತೆಯಿಲ್ಲದ ಸಿನಿಮಾ, ದ್ವೇಷ ಹರಡುವ ಕಸ  ಎಂದು ದೂರಿದ್ದಾರೆ. 

Canadian filmmaker Dylan Mohan Gray says The Kashmir Files will be embarrassment to India if sent to Oscar sgk
Author
Bengaluru, First Published Aug 18, 2022, 10:53 AM IST

ಕೆನಡಾದ ಖ್ಯಾತ ಸಿನಿಮಾ ನಿರ್ದೇಶಕ ಡೇಲನ್ ಮೋಹನ್ ಗ್ರೇ ಭಾರತದ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕಾಶ್ಮೀರ ಫೈಲ್ಸ್ ಕಲಾತ್ಮಕ ಅರ್ಹತೆಯಿಲ್ಲದ ಸಿನಿಮಾ, ದ್ವೇಷ ಹರಡುವ ಕಸ  ಎಂದು ದೂರಿದ್ದಾರೆ. ಅಲ್ಲದೆ ನಿರ್ದೇಶಕ ಅನುಗಾರ್ ಕಶ್ಯಪ್ ಅವರು ಈ ವರ್ಷ ಕಾಶ್ಮೀರ್ ಫೈಲ್ಸ್ ಈ ವರ್ಷ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆಯಲು ಆಯ್ಕೆಯಾಗುವುದಿಲ್ಲ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದರು ಈ ಮೂಲಕ ಭಾರತದ ಒಳ್ಳೆಯ ಹೆಸರನ್ನು ಉಳಿಸಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದಾರೆ. ಕೆನಡಾ ನಿರ್ದೇಶಕ ಈ ಹೇಳಿಕೆ ಈಗ ಈಗ ಚರ್ಚೆಗೆ ಗ್ರಾಸವಾಗಿದೆ. 

ಕೆನಡ ನಿರ್ದೇಶಕ ಡೇಲನ್ ಅವರ ಬ್ಯಾಡ್ ಬಾಯ್ ಬಿಲಿಯನೇರ್ಸ್ ಇಂಡಿಯಾ ನೆಟ್‌ಫ್ಲಿಕ್ಸ್ ವೆಬ್ ಸರಣಿ 2020ರಲ್ಲಿ ರಿಲೀಸ್ ಆಗಿತ್ತು. ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ್ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಟ್ವೀಟ್‌ಗೆ ಕೆನಡಾ ನಿರ್ದೇಶಕ ಡೇಲನ್ ಪ್ರತಿಕ್ರಿಯೆ ನೀಡಿದ್ದಾರೆ. 'ಹೌದು, ವಾಸ್ತವವಾಗಿ  ದ್ವೇಷ ಹರಡುವ ಕಸ, ಯಾವುದೇ ಕಲಾತ್ಮಕ ಅರ್ಹತೆಯಿಲ್ಲದ ಕಾಶ್ಮೀರ್ ಫೈಲ್ಸ್ ಸಿನಿಮಾ  ಆಸ್ಕರ್‌ಗೆ ಆಯ್ಕೆ ಮಾಡಿದ್ದರೆ ಭಾರತಕ್ಕೆ ದೊಡ್ಡ ಮುಜುಗರವಾಗುತ್ತೆ. ಅನುರಾಗ್ ಕಶ್ಯಪ್ ದೇಶದ ಒಳ್ಳೆಯ ಹೆಸರನ್ನು ಉಳಿಸಲು ಪ್ರಯತ್ನಿಸುತ್ತಿದೆ' ಎಂದು ಹೇಳಿದ್ದಾರೆ. ಬಳಿಕ ‘ಯು ಆರ್ ವೆಲ್ಕಮ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದಾರೆ. ಡೇಲನ್ ಮತ್ತೊಂದು ಟ್ವೀಟ್ ನಲ್ಲಿ ಆರ್ ಆರ್ ಆರ್ ಸಿನಿಮಾವನ್ನು ಜರಿಸಿದಿದ್ದಾರೆ.  'ಆರ್‌ಆರ್‌ಆರ್ ಕೂಡ ಕೆಟ್ಟ ಮತ್ತು ಹಿಂಸಾತ್ಮಕವಾಗಿದೆ' ಎಂದು ಹೇಳಿದ್ದಾರೆ.

ಈ ವರ್ಷ ಭಾರತದಿಂದ ಆಸ್ಕರ್‌ಗೆ ಅಧಿಕೃತ ಆಯ್ಕೆಯಾಗುವ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ತೆಲುಗಿನ ಆರ್ ಆರ್ ಆರ್  ಪರ ಬ್ಯಾಟ್ ಬೀಸಿದ್ದಾರೆ.  ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅನುರಾಗ್ ಕಶ್ಯಪ್, 'ಆಸ್ಕರ್‌ಗೆ ಕಳುಹಿಸಲು ಭಾರತದಲ್ಲಿ ಅಂತಿಮವಾಗಿ 5 ಸಿನಿಮಾಗಳ ಪಟ್ಟಿಯಲ್ಲಿ ನನ್ನ ಆಯ್ಕೆ ಆರ್ ಆರ್ ಆರ್. ಯಾರು ಯಾವ ಸಿನಿಮಾವನ್ನು ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ಕಾಶ್ಮೀರ ಫೈಲ್ಸ್ ಅಂತು ಆಗಿರಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದರು. 

Sai Pallavi- Aamir Khan: ಕಾಶ್ಮೀರಿ ಪಂಡಿತರ ವಲಸೆ ಬಗ್ಗೆ ಕಮೆಂಟ್ ಮಾಡಿದೋರು!

ಅನುರಾಗ್ ಕಶ್ಯಪ್ ಮಾತಿಗೆ ತಿರುಗೇಟು ನೀಡಿದ್ದ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, 'ಬಾಲಿವುಡ್‌ನ ನರಮೇಧ ಮತ್ತು ನಿರಾಕರಣೆ ಲಾಬಿ ತಮ್ಮ ಚಿತ್ರದ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದೆ' ಎಂದು ಹೇಳಿದ್ದಾರೆ. 'ಬಾಲಿವುಡ್‌ನ ಕೆಟ್ಟ, ನರಮೇಧ-ನಿರಾಕರಿಸುವ ಲಾಬಿ ಆಸ್ಕರ್‌ಗಾಗಿ ಕಾಶ್ಮೀರ ಫೈಲ್ಸ್ ವಿರುದ್ಧ  ದೋಬಾರಾ (ಅನುರಾಗ್) ಅವರ ನಾಯಕತ್ವದಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ' ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕನೆಡಾ ನಿರ್ದೇಶಕ ಡೇಲನ್ ಪ್ರತಿಕ್ರಿಯೆ ನೀಡಿ ಒಂದು ವೇಳೆ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತದಿಂದ ಆಸ್ಕರ್‌ಗೆ ಕಳಿಸಿದ್ರೆ ಇದು ಭಾರತಕ್ಕೆನೆ ಮುಜುಗರ ಎಂದು ಹೇಳಿ ವಿವೇಕ್ ಅಗ್ನಿಹೋತ್ರಿಯನ್ನು ಕೆಣಕಿದ್ದಾರೆ.

ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ 

ಕಾಶ್ಮೀರ್ ಫೈಲ್ಸ್ 1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಹಿಂಸೆ ಮತ್ತು ಹತ್ಯೆಯ ಬಗ್ಗೆ ಇರುವ ಸಿನಿಮಾವಾಗಿದೆ. ವಿವೇಕ್ ಅಗ್ನಿಹೋತ್ರಿ ಸಾರಥ್ಯದಲ್ಲಿ ಬಂದ ಈ ಸಿನಿಮಾದಲ್ಲಿ ಅನುಪಮ್ ಖೇರ್, ಪಲ್ಲವಿ ಜೋಷಿ, ಮಿಥುನ್ ಚಕ್ರವರ್ತಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿತ್ತು.   


 

Follow Us:
Download App:
  • android
  • ios