ಸಮೋಸಾ ಮತ್ತು ಚಹ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರ ಕೈ ಹಿಡಿಯುತ್ತಾ? ಮಲ್ಟಿಪ್ಲೆಕ್ಸ್​ನಿಂದ ಸಿಕ್ಕ ಭರ್ಜರಿ ಆಫರ್​ ಏನು?  

ನಟ ಅಕ್ಷಯ್​ ಕುಮಾರ್​ ಅವರಿಗೆ ಯಾಕೋ ಈ ವರ್ಷ ಕೂಡ ಕೈಹಿಡಿದಂತೆ ಕಾಣುತ್ತಿಲ್ಲ. ಕಳೆದ ವರ್ಷ ಕೂಡ ಇವರ ಬಹುತೇಕ ಚಿತ್ರಗಳು ತೋಪೆದ್ದು ಹೋಗಿದ್ದವು. ಹಲವು ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾದ ಚಿತ್ರಗಳೆಲ್ಲವೂ ಕೆಲವೇ ಕೋಟಿ ರೂಪಾಯಿಗಳನ್ನು ಗಳಿಸಲು ಶಕ್ಯವಾಗುತ್ತಿವೆ. ಹಿಂದೊಮ್ಮೆ ಬಾಲಿವುಡ್​​ನಲ್ಲಿ ಸಕತ್​ ಸ್ಟ್ರಾಂಗ್​ ಆಗಿದ್ದ, ಒಂದರ ಮೇಲೊಂದರಂತೆ ಬ್ಲಾಕ್​ಬಸ್ಟರ್​ ಚಿತ್ರ ಕೊಡುತ್ತಿದ್ದ ಅಕ್ಷಯ್​ ಕುಮಾರ್​ ಅವರ ಗ್ರಹಗತಿ ಸದ್ಯಕ್ಕಂತೂ ಚೆನ್ನಾಗಿಲ್ಲ. ಬಹುನಿರೀಕ್ಷೆ ಮೂಡಿಸಿದ ಸಿನಿಮಾಗಳಿಗೆ ಮೆಚ್ಚುಗೆ ಸಿಕ್ಕರೂ, ಗಳಿಕೆ ವಿಚಾರದಲ್ಲಿ ಮಕಾಡೆ ಮಲಗುತ್ತಿವೆ. ಅವುಗಳ ಸಾಲಿಗೆ ಈಗ ಸರ್ಫಿರಾ ಚಿತ್ರ ಸೇರಿದೆ.

ಸರ್ಫಿರಾ ಚಿತ್ರ ನಿಜ ಜೀವನದ ಘಟನೆಯನ್ನು ಆಧರಿಸಿದ ಸಿನಿಮಾ. ಇದರಲ್ಲಿ ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್​ ಅವರ ಪಾತ್ರವನ್ನು ಅಕ್ಷಯ್​ ಕುಮಾರ್​ ಮಾಡಿದ್ದಾರೆ. ಪರೇಶ್​ ರಾವಲ್​, ದಿಶಾ ಮದನ್​, ಪ್ರಕಾಶ್​ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಕಾಲಿವುಡ್​ ನಟ ಸೂರ್ಯ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅಕ್ಷಯ್​ ಕುಮಾರ್​ ಸಾಕಷ್ಟು ಶ್ರಮ ವಹಿಸಿದ್ದಾರೆ. ಆದರೆ ಸತತ ಸೋಲು ಅಕ್ಷಯ್​ ಕುಮಾರ್​ ಅವರನ್ನು ಈ ಚಿತ್ರದಲ್ಲೂ ಬಿಟ್ಟಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಇದು ಕಳಪೆ ಕಲೆಕ್ಷನ್ ಮಾಡುತ್ತಿದೆ. ‘ಸರ್ಫಿರಾ’ ಸಿನಿಮಾ ಮೊದಲ ದಿನವಾದ ಜುಲೈ 12ರಂದು ಕೇವಲ 2.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವುದಕ್ಕಷ್ಟೇ ಸಮರ್ಥವಾಗಿದೆ. ಮೊದಲ ದಿನ 20 ಕೋಟಿಗೂ ಅಧಿಕ ಲಾಭ ಗಳಿಸಬಹುದು ಎಂಬ ಟ್ರೇಡ್‌ ಪಂಡಿತರ ಅಂದಾಜು ತಲೆಕೆಳಗೆ ಆಗಿದೆ. ಎರಡನೇ ದಿನ 4.50 ಕೋಟಿ ರೂಪಾಯಿ ಗಳಿಸಿತು. ಕಳೆದ 15 ವರ್ಷಗಳಲ್ಲಿ ನಟನ ವೃತ್ತಿಜೀವನದಲ್ಲಿ ಇದು ಅತ್ಯಂತ ಕಡಿಮೆ ಓಪನಿಂಗ್ ಪಡೆದ ಸಿನಿಮಾ ಎಂಬ ಹಣೆಪಟ್ಟಿ ಪಡೆದಿದೆ.

ಬಿಗ್​ಬಾಸ್​ ಮಂಚದ ಮೇಲೆ ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೊಮಾನ್ಸ್​! ವೈರಲ್​ ಆಯ್ತು ವಿಡಿಯೋ...

ಇದರಿಂದಾಗಿ ಜನರನ್ನು ಸೆಳೆಯಲು ಮಲ್ಟಿಪ್ಲೆಕ್ಸ್​ಗಳು ಭಾರಿ ಆಮಿಷ ಒಡ್ಡುತ್ತಿದ್ದು ಇದೊಂದು ರೀತಿಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಹಾಸ್ಯಾಸ್ಪದ ರೀತಿಯಲ್ಲಿ ಟ್ರೆಂಡಿಂಗ್​ ಆಗುತ್ತಿದೆ. ಪ್ರೇಕ್ಷಕರನ್ನು ಸೆಳೆಯಲು ಉಚಿತ ಚಹ ಮತ್ತು ಸಮೋಸಾದ ಆಫರ್​ ನೀಡಿದೆ ಮಲ್ಟಿಪ್ಲೆಕ್ಸ್. ವೀಕೆಂಡ್​ ಭಾನುವಾರ ಅಂದರೆ ಜುಲೈ 14ರಂದು ಸಿನಿಮಾದ ಕಲೆಕ್ಷನ್​ ಹೆಚ್ಚಿಸಬೇಕು ಎಂಬುದು ಚಿತ್ರತಂಡದ ಗುರಿಯಾಗಿದ್ದರಿಂದ ಈ ಆಫರ್​ ನೀಡಲಾಗಿತ್ತು. ಈ ಬಗ್ಗೆ ‘ಪಿವಿಆರ್​ ಐನಾಕ್ಸ್​’ ಮಲ್ಟಿಪ್ಲೆಕ್ಸ್​ ಕಡೆಯಿಂದ ಸೋಷಿಯಲ್​​ ಮೀಡಿಯಾದಲ್ಲಿ ಜಾಹೀರಾತು ಕೂಡ ನೀಡಲಾಗಿದೆ. ಅಕ್ಷಯ್​ ಕುಮಾರ್​ ಅವರ ಸರ್ಫಿರಾ ಸಿನಿಮಾ ನೋಡಲು ಬರುವ ವೀಕ್ಷಕರಿಗೆ 2 ಸಮೋಸಾ, ಒಂದು ಟೀ ಹಾಗೂ ಒಂದು ಲಗೇಜ್​ ಟ್ಯಾಗ್​ ಉಚಿತವಾಗಿ ನೀಡಲಾಗುವುದು ಎಂದು ಆಫರ್​ ನೀಡಲಾಗಿದೆ. ಆದರೂ ಇದು ಹೆಚ್ಚು ಸಕ್ಸಸ್​ ಕಂಡಿಲ್ಲ ಎಂದೇ ಹೇಳಲಾಗುತ್ತಿದೆ.

ಇನ್ನು ‘ಸರ್ಫಿರಾ’ ಚಿತ್ರದ ಕುರಿತು ಹೇಳುವುದಾದರೆ, ಈ ಚಿತ್ರವನ್ನು ಸುಮಾರು ನೂರು ಕೋಟಿ ಬಜೆಟ್​ನಲ್ಲಿ ತಯಾರು ಮಾಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಸುಧಾ ಕೊಂಗರಾ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರವು ತಮಿಳಿನ ‘ಸೂರರೈ ಪೋಟ್ರು’ ಸಿನಿಮಾದ ಹಿಂದಿ ರಿಮೇಕ್​. ತಮಿಳಿನ ಆ ಸಿನಿಮಾ ಈ ಮೊದಲೇ ಹಿಂದಿಗೆ ಡಬ್​ ಆಗಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಇದು ಕೂಡ ಅಕ್ಷಯ್​ ಕುಮಾರ್​ ಅವರ ಈ ಚಿತ್ರದ ಸೋಲಿಗೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಡಬ್​ ಆಗಿರುವ ಚಿತ್ರವನ್ನು ಮತ್ತೆ ರೀಮೇಕ್​ ಮಾಡುವ ಸಾಹಸ ಅಕ್ಷಯ್​ ಕುಮಾರ್​ ಮಾಡಬಾರದಿತ್ತು. ಇದಾಗಲೇ ಈ ಚಿತ್ರವನ್ನು ಸಿನಿ ಪ್ರಿಯರು ನೋಡಿರುವ ಕಾರಣ, ಮತ್ತೊಮ್ಮೆ ನೋಡಲು ಆಸಕ್ತಿ ತೋರುತ್ತಿಲ್ಲ ಎಂದು ಈಗ ವ್ಯಾಖ್ಯಾನಿಸಲಾಗುತ್ತಿದೆ.

ಮಗನ ಮದುವೆಯ ಬೆನ್ನಲ್ಲೇ ಎಲ್ಲರ ಕ್ಷಮೆ ಕೋರಿದ ನೀತಾ ಅಂಬಾನಿ: ವಿಡಿಯೋದಲ್ಲಿ ಹೇಳಿದ್ದೇನು?

Scroll to load tweet…