Oscar 2023: ದೀಪಿಕಾ ಬದಲು ಕ್ಯಾಮಿಲಾ! ವಿದೇಶಿ ಮಾಧ್ಯಮಗಳ ರೇಸಿಸಂ ಎಂದ ನೆಟ್ಟಿಗರು
ಆಸ್ಕರ್ ವೇದಿಕೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಇದೇ ವೇದಿಕೆಯ ಮೇಲೆ ಬ್ರೆಜಿಲಿಯನ್ ಮಾಡೆಲ್ ಕ್ಯಾಮಿಲಾ ಅಲ್ವೆಸ್ ಅವರೂ ಕಾಣಿಸಿಕೊಂಡಿದ್ದು, ವಿದೇಶಿ ಮಾಧ್ಯಮದವರಿಗೆ ಕನ್ಫ್ಯೂಷನ್ ಆಗಿದೆ. ಏನಿದು ಎಡವಟ್ಟು!
ನಿನ್ನೆ ನಡೆದ ಆಸ್ಕರ್ (Oscar) ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಿಂಚಿದ್ದರು. ಆಸ್ಕರ್ ಕಾರ್ಯಕ್ರಮದಲ್ಲಿ ನಟಿ, ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ಮಿಂಚಿದ್ದರು. ಇದೇ ಮೊದಲ ಬಾರಿಗೆ ದೀಪಿಕಾ, ಅಕಾಡೆಮಿ ಅವಾಡ್ರ್ಸ್ ಶಾಂಪೇನ್ ಕಾರ್ಪೆಟ್ ಮೇಲೆ ನಡೆದು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಅವರ ವಜ್ರದ ನೆಕ್ಲೇಸ್, ಬಳೆ ಮತ್ತು ವೆಲ್ವೆಟ್, ಕ್ಲಾಸಿ ಕಪ್ಪು ಗೌನ್‍ನಲ್ಲಿ ಮನಮೋಹಕವಾಗಿ ಕಾಣುತ್ತಿದ್ದ ನಟಿ, ಆರ್‌ಆರ್‌ಆರ್‌ನ 'ನಾಟು ನಾಟು' ಪ್ರದರ್ಶನವನ್ನು ಘೋಷಿಸಲು ಆಸ್ಕರ್ ವೇದಿಕೆಯನ್ನು ಅಲಂಕರಿಸಿದಾಗ ಹರ್ಷೋದ್ಗಾರಗಳ ಸುರಿಮಳೆಯೇ ಆಯಿತು. ಈ ಸಂದರ್ಭದಲ್ಲಿ ನಾಟು ನಾಟುವಿನ ಕುರಿತು ಅವರು ಮಾತನಾಡುವಾಗ ಭಾವುಕರಾದರು. ನಾಟು ನಾಟು ಹಾಡು ‘ಬೆಸ್ಟ್ ಒರಿಜಿನಲ್ ಸಾಂಗ್’ (Best Original song) ವಿಭಾಗದಲ್ಲಿ ಆಸ್ಕರ್ ಪಡೆದಿದೆ. ಇದನ್ನು ಘೋಷಣೆ ಮಾಡುವಾಗ ನಟಿ ಭಾವುಕರಾಗಿರುವ ವಿಡಿಯೋ ವೈರಲ್ ಆಗಿದೆ. ನಾಟು ನಾಟು ಹಾಡಿಗೆ ನೃತ್ಯ ಮಾಡಿದ ಸಂದರ್ಭದಲ್ಲಿ ನಟಿ ದೀಪಿಕಾ ಪಡುಕೋಣೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಎಂ.ಎಂ.ಕೀರವಾಣಿ ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸಿದಾಗ ದೀಪಿಕಾ ಭಾವುಕರಾಗಿದ್ದು, ಇದು ಭಾರಿ ಸುದ್ದಿಯಾಗುತ್ತಿದೆ.
ಆಸ್ಕರ್ನಂಥ ವೇದಿಕೆಯಲ್ಲಿ ದೀಪಿಕಾ ಅವರು ಮಿಂಚಿದ್ದು ಭಾರತೀಯರ ಹೆಮ್ಮೆ ಎಂದೇ ಬಣ್ಣಿಸಲಾಗುತ್ತಿದೆ. ದೀಪಿಕಾ ಪಡುಕೋಣೆ ಅವರ ಈ ನಿರೂಪಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅಭಿನಂದನೆಗಳ ಸುರಿಮಳೆಯೇ ಆಗುತ್ತಿದೆ. ಆಸ್ಕರ್ ವೇದಿಕೆಯಲ್ಲಿ ಆಕೆಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅನೇಕರು ಇದನ್ನು 'ಹೆಮ್ಮೆಯ ಕ್ಷಣ' ಎಂದು ಕರೆದಿದ್ದಾರೆ. ಇನ್ನು ಕೆಲವರು ಆಹಾ! ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. 'ದೀಪಿಕಾ ಪಡುಕೋಣೆ (Deepika Padukone) ಅವರ ಪ್ರಸ್ತುತಿ ಸುಂದರ, ಅತಿ ಸುಂದರ' ಎಂದು ಇನ್ನು ಕೆಲವರು ಹೇಳಿದ್ದಾರೆ.
Natu Natu ಎನ್ನುತ್ತ ದೀಪಿಕಾ ಭಾವುಕ: ಸೋಷಿಯಲ್ ಮೀಡಿಯಾ ತುಂಬಾ ಹಾಡಿನದ್ದೇ ಗುಂಗು
ಪಠಾಣ್ ನಟಿ, ಈ ಮೂಲಕ ಭಾರಿ ಮನೆಮಾತಾಗಿದ್ದಾರೆ. ಆಸ್ಕರ್ ಮೂಲಕ ಸದ್ಯ ಅಂತರರಾಷ್ಟ್ರೀಯ ಸಂವೇದನೆಯಾಗಿದ್ದಾರೆ. ಅವರು 2007 ರಲ್ಲಿ ಮತ್ತೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದವರು. ಇದಾಗಲೇ ಹಲವಾರು ಅಂತರರಾಷ್ಟ್ರೀಯ ಐಷಾರಾಮಿ ಬ್ರಾಂಡ್‌ಗಳಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಆಸ್ಕರ್ ವೇದಿಕೆಯ ಮೇಲೆ ಅದಲು ಬದಲಾಗಿ ಗುರುತಿಸಲಾಗಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಆಗಿದ್ದೇನೆಂದರೆ, ಬ್ರೆಜಿಲಿಯನ್ ಮಾಡೆಲ್ ಕ್ಯಾಮಿಲಾ ಅಲ್ವೆಸ್ (Camila Alves) ಅವರೂ ಇದೇ ಸಂದರ್ಭದಲ್ಲಿ ಆಸ್ಕರ್ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ. ನೋಡಲು ಸರಿಸುಮಾರಾಗಿ ಒಂದೇ ರೀತಿ ಇರುವ ಈ ಇಬ್ಬರೂ ಬೆಡಗಿಯರು ಕಾಕತಾಳೀಯ ಎಂಬಂತೆ ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದಾರೆ. ಇದಕ್ಕಾಗಿ ಮೂರು ಅಂತರರಾಷ್ಟ್ರೀಯ ಏಜೆನ್ಸಿಗಳು ದೀಪಿಕಾ ಪಡುಕೋಣೆ ಅವರನ್ನು ಬ್ರೆಜಿಲಿಯನ್ ಮಾಡೆಲ್ ಕ್ಯಾಮಿಲಾ ಅಲ್ವೆಸ್ ಎಂದು ತಪ್ಪಾಗಿ ಗುರುತಿಸಿದ್ದು, ನೆಟಿಜನ್‌ಗಳ ಅಸಮಾಧಾನಕ್ಕೆ ಕಾರಣವಾಗಿದೆ. ದೀಪಿಕಾ ಅವರ ಆಸ್ಕರ್ ವೇದಿಕೆಯ ಮೇಲಿನ ಫೋಟೋಗಳು ಕೆಲವು ವಿದೇಶಿ ಮಾಧ್ಯಮಗಳಲ್ಲಿಯೂ ಕಾಣಿಸಿಕೊಂಡಿದ್ದು, ಅವರನ್ನು ಕ್ಯಾಮಿಲಾ ಅಲ್ವೆಸ್ ಎಂದು ಸಂಬೋಧಿಸಲಾಗಿದೆ. ಇದರಿಂದ ನೆಟಿಜನ್ಗಳು ಮಾತ್ರವಲ್ಲದೇ ಖುದ್ದು ದೀಪಿಕಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 72 ಮಿಲಿಯನ್‌ನಷ್ಟು ದೊಡ್ಡ ಅನುಯಾಯಿಗಳನ್ನು (Followers) ಹೊಂದಿರುವ ಮತ್ತು ವೃತ್ತಿಜೀವನದಲ್ಲಿ ಹಲವಾರು ಪುರಸ್ಕಾರಗಳನ್ನು ಹೊಂದಿರುವ ದೀಪಿಕಾ ತಮ್ಮದೇ ಆಗಿರುವ ಜಾಗತಿಕ ಐಕಾನ್ ಆಗಿರುವಾಗ ಈ ರೀತಿ ತಪ್ಪು ಮಾಡಿರುವುದನ್ನು ಆಕೆಯ ಅಭಿಮಾನಿಗಳು ಸಹಿಸುತ್ತಿಲ್ಲ.
Oscar Award: ನಾಟು ನಾಟುಗಾಗಿ ನಡೆದಿತ್ತು ಕೋಟಿ ಕೋಟಿಗಟ್ಟಲೆ ಬೆಟ್ಟಿಂಗ್?