Asianet Suvarna News Asianet Suvarna News

80ರ ದಶಕದಲ್ಲೇ ಬೋಲ್ಡ್‌ ಆಗಿ ನಟಿಸಿದ ಮುಸ್ಲಿಂ ನಟಿ, ಹಿಂದೂ ಧರ್ಮಕ್ಕೆ ಬದಲಾದ್ರೂ ಮದುವೆ ಭಾಗ್ಯ ಸಿಗ್ಲಿಲ್ಲ!

ರೀಲ್ ಲೈಫ್ ನಲ್ಲಿ ಎಷ್ಟೇ ರೋಮ್ಯಾನ್ಸ್ ಮಾಡಿದ್ರೂ ರಿಯಲ್ ಲೈಫ್ ನಲ್ಲಿ ಒಂಟಿಯಾಗಿರುವ ಅನೇಕ ಕಲಾವಿದರಿದ್ದಾರೆ. ಅದ್ರಲ್ಲಿ ಆಶಾ ಸಚ್ ದೇವ್ ಕೂಡ ಒಬ್ಬರು. ಅವರ ಒಂಟಿ ಜೀವನಕ್ಕೆ ಮಹತ್ವದ ಕಾರಣವೊಂದಿದೆ.
 

Born In A Muslim Family But Following Hinduism This Actress Did Not Marry Till Her Fiance Died roo
Author
First Published Aug 1, 2024, 12:53 PM IST | Last Updated Aug 1, 2024, 12:53 PM IST

70 -80ರ ದಶಕದಲ್ಲಿ ಸಿಗ್ಗು ಬಿಟ್ಟು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋದು (Bold Bollywood Actress of 80s) ಸುಲಭವಾಗಿರಲಿಲ್ಲ. ಆದರೆ ಆ ಸಮಯದಲ್ಲೇ ಎಲ್ಲರ ನಿದ್ರೆ ಕದ್ದಿದ್ದ ಈ ನಟಿಗೆ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು. ಎಲ್ಲ ಪಾತ್ರಗಳಲ್ಲಿ ಕಾಣಿಸಿಕೊಂಡು ಸೈ ಎನ್ನಿಸಿಕೊಂಡಿದ್ದವಳು ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಬದಲಾದ್ರು. ಆದ್ರೆ ಪ್ರೀತಿ ಮಾತ್ರ ಅವರ ಕೈ ಹಿಡಿಯಲಿಲ್ಲ. ನಿಶ್ಚಿತಾರ್ಥ ಮಾಡಿಕೊಂಡವರ ಜೊತೆ ಮದುವೆ ಆಗ್ಲಿಲ್ಲ. ಈಗ್ಲೂ ಒಂಟಿಯಾಗಿರುವ ನಟಿ ಯಾರು ಗೊತ್ತಾ?.

ನಾವು ಹೇಳ್ತಿರೋದು ನಟಿ ಆಶಾ ಸಚ್‌ದೇವ್ (Asha Sachdev) ಬಗ್ಗೆ. ಆಶಾ ಸಚ್ ದೇವ್ ಮೂಲತಃ ಮುಸ್ಲಿಂ (Muslim) ಕುಟುಂಬದಿಂದ ಬಂದವರು. ಮೇ 27, 1956ರಲ್ಲಿ ಆಶಾ ಸಚ್ ದೇವ್ ಜನಿಸಿದ್ದರು. ಆಶಾ ಮುಂಬೈ (Mumbai) ನಲ್ಲಿ ವಾಸಿಸುವ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಅವರ ಮೊದಲ ಹೆಸರು ನಫೀಸಾ ಸುಲ್ತಾನ್. ಆಶಾ ಸಚ್‌ದೇವ್ ಹಿರಿಯ ನಟ ಅರ್ಷದ್ ವಾರ್ಸಿ ಅವರ ಮಲ ಸಹೋದರಿ. ನಫೀಸಾ ಅಲಿಯಾಸ್ ಆಶಾ ಅವರ ತಂದೆ ಆಶಿಕ್ ಹುಸೇನ್ ವಾರ್ಸಿ ಬರಹಗಾರರಾಗಿದ್ದರು ಮತ್ತು ಅವರ ತಾಯಿ ರಜಿಯಾ ಸಹ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಆಶಿಕ್ ಮತ್ತು ರಜಿಯಾ ಅವರಿಗೆ ಮೂವರು ಮಕ್ಕಳು. ನಂತರ ಇಬ್ಬರೂ 60 ರ ದಶಕದಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ನಫೀಸಾ ಮತ್ತು ಅವಳ ತಂಗಿ ತಾಯಿ ರಜಿಯಾ ಜೊತೆ ವಾಸಿಸಲು ಪ್ರಾರಂಭಿಸಿದರು. ರಜಿಯಾ, ಮುಂಬೈನ ಪ್ರಸಿದ್ಧ ವಕೀಲರಾಗಿದ್ದ ಐಪಿ ಸಚ್‌ದೇವ್ ಅವರನ್ನು ವಿವಾಹವಾದರು.  ಈ ಮದುವೆಯ ನಂತರ ನಫೀಸಾ ಸುಲ್ತಾನ್‌ ಆಶಾ ಸಚ್‌ದೇವ್ ಆಗಿ ಬದಲಾದ್ರು. ಅಮ್ಮನ ಆಸೆಯಂತೆ ಸಿನಿಮಾಗೆ ಪದಾರ್ಪಣೆ ಮಾಡಿದ ಆಶಾ ಸಚ್ ದೇವ್ 40 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.  

ದಾಸನಿಗೆ ಧ್ಯಾನ ಕಲಿಸಿದ ಗುರು, ಬುರುಡೆ ಬಿಟ್ಟ ಸಿದ್ಧಾರೂಢನಿಗೆ ಸಂಕಷ್ಟ..! ಪುಂಗಿದಾಸ ಹೇಳಿದ ಬಂಡಲ್ ಬಡಾಯಿ ಕಥೆ..?

ಪುಣೆ ಫಿಲ್ಮಂ ಇಂಡಸ್ಟ್ರಿಯಲ್ಲಿ (Pune Movie Industry) ನಟನೆ ಕಲಿತ ಆಶಾ, ಮುಂಬೈಗೆ ಬಂದ್ಮೇಲೆ ನಟನೆ ಶುರು ಮಾಡಿದ್ದರು. ಅನೇಕ ಪ್ರಸಿದ್ಧ ಕಲಾವಿದರು, ನಿರ್ದೇಶಕರು ಅವರ ಜೊತೆ ಕೆಲಸ ಮಾಡಲು ಬಯಸಿದ್ದರು. ಅದ್ರಲ್ಲಿ ಮಹೇಶ್ ಭಟ್ ಕೂಡ ಸೇರ್ತಾರೆ. 

ಆದ್ರೆ ಆಶಾ ಸಚ್ ದೇವ್ ತೆಗೆದುಕೊಂಡ ಒಂದು ನಿರ್ಧಾರ ಅವರ ವೃತ್ತಿಗೆ ಸಾಕಷ್ಟು ಹೊಡೆತ ನೀಡ್ತು. ಅವರು 1972ರಲ್ಲಿ ಬಿ ಗ್ರೇಡ್ ಚಿತ್ರವಾದ ಬಿಂದಿಯಾ ಔರ್ ಬಂದೂಕ್ ಚಿತ್ರದಲ್ಲಿ ಕಾಣಿಸಿಕೊಂಡ್ರು. ಈ ಚಿತ್ರದಲ್ಲಿ ಆಶಾ ನಟನೆಗೆ ಮೆಚ್ಚುಗೆ ವ್ಯಕ್ತವಾದ್ರೂ ನಿರ್ದೇಶಕರ ದೃಷ್ಟಿ ಬದಲಾಯ್ತು. ಬಿ ಗ್ರೇಟ್ ಚಿತ್ರದಲ್ಲಿ ನಟಿಸುವ ಕಲಾವಿದೆ ಎನ್ನುವ ಹಣೆಪಟ್ಟಿ ಆಶಾ ಮುಡಗೇರಿತು. ಹಾಗಾಗಿ ದೊಡ್ಡ ಬಜೆಟ್ ಚಿತ್ರಗಳು ಕೈತಪ್ಪಿದವು. 

ಇಷ್ಟರ ಮಧ್ಯೆಯೂ ಆಶಾ ಅನೇಕ ಚಿತ್ರಗಳಲ್ಲಿ ನಟಿಸಿದ್ರು. ಏಜೆಂಟ್ ವಿನೋದ್, ಮೆಹಬೂಬಾ, ಸತ್ತೆ ಪೆ ಸತ್ತಾ, ವೋ ಮೈ ನಹಿ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2000 ರ ದಶಕದಲ್ಲಿ, ಅವರು ಫಿಜಾ, ಝೂಮ್ ಬರಾಬರ್ ಝೂಮ್ ಮತ್ತು ಆಜಾ ನಾಚ್ಲೆಯಲ್ಲಿ ಕಾಣಿಸಿಕೊಂಡಿದ್ದಾರೆ. 

ಅಮಲಾಗೆ ಕಪಾಳಕ್ಕೆ ಬಾರಿಸಿದ ಆರಾಧನಾ; 3rd ಕ್ಲಾಸ್ ಫ್ಯಾಮಿಲಿ ಅಂದವರಿಗೆ ಪಾಠ!

ಸಿಗದ ಪ್ರೀತಿ – ಸಿಂಗಲ್ ಆಗಿಯೇ ಉಳಿದ ಆಶಾ : ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದ್ರೂ ಆಶಾ ಸಿಂಗಲ್ ಆಗಿದ್ದಾರೆ. ಅದಕ್ಕೆ ಕಾರಣ ಪ್ರೇಮಿಯ ಸಾವು. ಆಶಾ, ಕಿಶನ್ ಲಾಲ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರು ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಇಬ್ಬರ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದ್ರೆ ರಸ್ತೆ ಅಪಘಾತದಲ್ಲಿ ಕಿಶನ್ ಲಾಲ್ ಸಾವನ್ನಪ್ಪಿದ್ರು. ಆ ನಂತ್ರ ಆಶಾ ಮದುವೆ ಬಗ್ಗೆ ಆಲೋಚನೆ ಮಾಡಲಿಲ್ಲ. 

Latest Videos
Follow Us:
Download App:
  • android
  • ios