Asianet Suvarna News Asianet Suvarna News

Boney Kapoor ಅನಿಲ್‌ ಕಪೂರ್‌ಗಾಗಿ ನಟನೆ ಬಿಟ್ಟು ಕೊಟ್ಟ ಬೋನಿ ಕಪೂರ್; ಇದೇ ಅಸಲಿ ಸತ್ಯ!

ವೃತ್ತಿ ಜೀವನ ಆಯ್ಕೆ ಮಾಡಿಕೊಂಡ ವಿಚಾರದ ಬಗ್ಗೆ ಸತ್ಯ ಬಿಚ್ಚಿಟ್ಟ ಬೋನಿ ಕಪೂರ್. ಅನಿಲ್‌ ಕಪೂರ್‌ಗೆ ಈ ಋಣ ಇದ್ಯಾ?

Boney Kapoor reveals why gave up acting and turned producer vcs
Author
First Published Nov 11, 2022, 4:09 PM IST

ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ನಟನೆ ಬಿಟ್ಟು ನಿರ್ಮಾಣ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. 1999ರಲ್ಲಿ ನಡೆದ ಟಿವಿ ಸಂದರ್ಶನವೊಂದರಲ್ಲಿ ಅನಿಲ್ ಕಪೂರ್‌ಗಾಗಿ ನಟನೆಯಿಂದ ಹಿಂದೆ ಸರಿದಿರುವುದರ ಬಗ್ಗೆ ಮಾತನಾಡಿದ್ದಾರೆ. ಈಗ ಈ ಸಂದರ್ಶನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು ಅನಿಲ್‌ ಕಪೂರ್‌ಗೆ ಆ ಋಣ ಇನ್ನೂ ಇದ್ಯಾ? ಇದಕ್ಕೆ ಪ್ರತಿಕಾರವಾಗಿ ಅನಿಲ್ ಏನು ಮಾಡಿದ್ದಾರೆ ಎಂದ ಪ್ರಶ್ನೆ ಮಾಡುತ್ತಿದ್ದಾರೆ.

ಸುರೀಂದರ್ ಕಪೂರ್ ಮಗನಾಗಿ ಚಿತ್ರರಂಗದಲ್ಲಿ ಯಾವ ರೀತಿ ಉಪಯೋಗವಾಗಿದೆ ಎಂದು ಬೋನಿ ಕಪೂರ್‌ಗೆ ಪ್ರಶ್ನೆ ಮಾಡಲಾಗಿತ್ತು. 'ತುಂಬಾ ಜಾಸ್ತಿ ಉಪಯೋಗವಾಗಿದೆ,ಈಗ ನೋಡಿ ನನ್ನ ಬಗ್ಗೆ ನಿಮಗೆ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ. ಇಲ್ಲದಿದ್ದರೆ ನನ್ನ ಸಮಯ ವ್ಯರ್ಥವಾಗುತ್ತಿತ್ತು' ಎಂದು ಬೋನಿ ಹಾಸ್ಯ ಮಾಡಿದ್ದಾರೆ. ನಾಯಕನಾಗಲು ಅವಕಾಶ ಸಿಗಲಿಲ್ವಾ ಎಂದು ಪ್ರಶ್ನಿಸಿದ್ದಾಗ 'ಫುಲ್ ಟೈಂ ನಾಯಕನಾಗಿ ಅವಕಾಶ ಸಿಗಲಿಲ್ಲ ಆದರೆ ಎರಡನೇ ನಾಯಕನಾಗಿ ಸಿಗುತ್ತಿತ್ತು ಏಕೆಂದರೆ ಅನಿಲ್‌ ಕಪೂರ್‌ನಿಂದ ಆದರೆ ನಾನು ಅವಕಾಶ ಕಿತ್ತುಕೊಂಡಿದ್ದು ಅನಿಲ್ ಕಪೂರ್ ಅಲ್ಲ ಅನ್ನೋ ವಿಚಾರ ಕೇಳಿರುವೆ ಅದು ಸುಳ್ಳು. ಅನಿಲ್‌ ನಾಯಕನಾಗಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದ ಆದರೆ ನಾನು ಯೋಚನೆಯಲ್ಲಿದ್ದೆ. ಅನಿಲ್ ಕನಸು ನನಸು ಮಾಡಬೇಕು ಎಂದು ನಾನು ನಾಯಕನಾಗುವುದರಿಂದ ಹಿಂದೆ ನಡೆದೆ' ಎಂದು ಬೋನಿ ಕಪೂರ್ ಹೇಳಿದ್ದಾರೆ.

Boney Kapoor reveals why gave up acting and turned producer vcs

ಹೊಸಬ್ಬರನ್ನು ಚಿತ್ರರಂಗಕ್ಕೆ ಪರಿಚಯಿಸಿಕೊಡುವುದು ತುಂಬಾನೇ ಕಷ್ಟ ಆದರೆ ಕುಟುಂಬದಿಂದ ಒಬ್ಬರನ್ನು ಲಾಂಚ್ ಮಾಡುವುದು ಸುಲಭ ಅಂತಾರೆ ಎಂದು ಸಂಜಯ್ ಕಪೂರ್‌ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. 'ಕುಟುಂಬಸ್ಥರನ್ನು ಲಾಂಚ್ ಮಾಡುವುದು ನನಗೆ ಉಪಯೋಗನೇ ಆಯ್ತು ನಾನು ಈವರೆಗೂ ಮಾಡಿರುವ ಸಿನಿಮಾಗಳಲ್ಲಿ . ಸಂಜಯ್ ಮತ್ತು ಅನಿಲ್ ಕಪೂರ್ ಒಟ್ಟಿಗೆ ಸಿನಿ ಜೀವನ ಆರಂಭಿಸಿದ್ದರು, ಅನಿಲ್ ಮತ್ತು ನಾನು ಒಟ್ಟಿಗೆ ವೃತ್ತಿ ಆರಂಭಿಸಿದ್ದು. ಆರಂಭದಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದೆವು ಆ ನಂತರ ಹಮ್ ಪಾಂಚ್‌ ಸಿನಿಮಾ ಮೂಲಕ ಇಂಡಿಪೆಂಡೆಂಟ್‌ ನಿರ್ಮಾಪಕನಾದೆ. ಅನಿಲ್ ಕಪೂರ್‌ಗೆ ಪ್ರತಿಯಿಂದು ವಿಚಾರದಲ್ಲೂ ಸಹಾಯ ಮಾಡುತ್ತಾನೆ ಆತನ ಯೋಚನೆಗಳು ತುಂಬಾನೇ ವಿಭಿನ್ನವಾಗಿದೆ. ನಾಯಕನಾದೆ ಬ್ಯುಸಿಯಾಗಿರುವೆ ಎಂದು ಅನಿಲ್ ಎಂದೂ ಧಿಮಾಕ್ ಮಾಡಲಿಲ್ಲ' ಎಂದಿದ್ದಾರೆ ಬೋನಿ. 

Cyber Fraud:ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಬ್ಯಾಂಕ್ ಖಾತೆಗೆ ಕನ್ನ; 3.82 ಲಕ್ಷ ರೂ. ವಂಚನೆ

ಬೋನಿ ಕಪೂರ್ ನಿರ್ಮಾಣ ಮಾಡಿರುವ ಪ್ರೇಮ್ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಯಿತ್ತು ಆದರೆ ನೆಚ್ಚಿನ ಚಿತ್ರವಾಗಿ ಉಳಿದುಕೊಳ್ಳುತ್ತದೆ ಎಂದಿದ್ದಾರೆ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಿಂದ ಬೆಸ್ಟ್‌ ಸಿನಿಮಾ ಎಂದು ಹೇಳುವುದಕ್ಕೆ ಆಗಲ್ಲ ನೆಮ್ಮದಿಯಿಂದ ತೃಪ್ತಿಯಿಂದ ಕೆಲಸ ಮಾಡಿರುವ ಸಿನಿಮಾ ಬೆಸ್ಟ್‌ ಆಗಲಿದೆ. 

ಹೆಂಡ್ತಿ ಮಗಳನ್ನು ಕಂಪೇರ್ ಮಾಡಬೇಡಿ:

ಮೊದಲ ಬಾರಿಗೆ ಜಾನ್ವಿ ಕಪೂರ್ ತಂದೆ ನಿರ್ಮಾಣ ಸಂಸ್ಥೆಯಲ್ಲಿ ನಟಿಸಿದ್ದಾರೆ. ಮಿಲಿ ಸಿನಿಮಾ ನವೆಂಬರ್ 4ರಂದು ತೆರೆಕಂದು ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ಮಲಯಾಳಂ ಭಾಷೆಯ ಹೆಲೆನ್ ಸಿನಿಮಾ ರಿಮೇಕ್ ಇದಾಗಿದ್ದು, ಬಿ-ಟೌನ್‌ಗೆ ಹೊಸ ಕಾನ್ಸೆಪ್ಟ್‌ ಆಗಿರುವ ಕಾರಣ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 

Relationship and Breakup: ಸ್ವಂತ ಅಣ್ಣನೊಂದಿಗೇ ಅನಿಲ್ ಕಪೂರ್ ಸಂಬಂಧ ಕಡಿದು ಕೊಂಡಿದ್ಯಾಕೆ?

ಈ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಜಾನ್ವಿ ನಟನೆ ನೋಡಿದ್ದರೆ ಶ್ರೀದೇವಿ ನೆನಪಾಗುತ್ತದೆ ಎಂದು ವರದಿ ಮಾಡಲಾಗಿತ್ತು. ಈ ವಿಚಾರವನ್ನು ಕೊಂಡ ಗಂಭೀರವಾಗಿ ಪರಿಗಣಿಸಿದ ಬೋನಿ 'ಪ್ರತಿಯೊಬ್ಬರೂ ಒಂದು ಪಾತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಆ ತಿಳುವಳಿಕೆಗೆ ಅನುಗುಣವಾಗಿ ನಟಿಸಲು ವಿಭಿನ್ನ ಮಾರ್ಗವನ್ನು ಹೊಂದಿರುತ್ತಾರೆ.ನಾನು 'ಆಕ್ಟ್' ಗೆ ವಿರುದ್ಧವಾಗಿ 'ಪಾರ್ಟ್‌' ಆಗು ಎಂದು ಹೇಳುತ್ತೇನೆ. ಅದು ಶ್ರೀಯವರ ಪ್ರಮುಖ ಗುಣಗಳಲ್ಲಿ ಒಂದಾಗಿತ್ತು ಮತ್ತು ಪ್ರಾಯಶಃ ಜಾನ್ವಿ ಅದೇ ಆನುವಂಶಿಕ ರಚನೆಯನ್ನು ಹೊಂದಿದ್ದಾಳೆ. ಅವಳು ಪಾತ್ರವನ್ನು ಅಳವಡಿಸಿಕೊಳ್ಳುತ್ತಾಳೆ ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೇವಲ ಪಾತ್ರವನ್ನು ನಿರ್ವಹಿಸುವ ಬದಲು ಪಾತ್ರದಲ್ಲಿ ಒಳಗೊಳ್ಳುತ್ತಾಳೆ. ಅದಕ್ಕಾಗಿಯೇ ನೀವು ಇದುವರೆಗಿನ ಚಲನಚಿತ್ರಗಳಲ್ಲಿ ಆಕೆಯ ಬೆಳವಣಿಗೆಯನ್ನು ವೀಕ್ಷಿಸಿದ್ದೀರಿ' ಎಂದು ಬೋನಿ ಕಪೂರ್‌ ಹೇಳಿದ್ದಾರೆ.
 

Follow Us:
Download App:
  • android
  • ios