Asianet Suvarna News Asianet Suvarna News

ಬಾಲಿವುಡ್‌ನ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಜೋಡಿ ಇವ್ರು; ಒಟ್ಟು ಆಸ್ತಿ ಭರ್ತಿ 8096 ಕೋಟಿ ರೂ. ಮೀರುತ್ತೆ!

ಬಾಲಿವುಡ್‌ನಲ್ಲಿ ಕೋಟಿ ಕೋಟಿ ಬಜೆಟ್‌ನ ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ. ಬಾಕ್ಸಾಫೀಸಿನಲ್ಲಿ ಸಕ್ಸಸ್‌ ಆಗುವುದರ ಜೊತೆಗೆ ಭರ್ಜರಿ ಯಶಸ್ಸನ್ನೂ ಗಳಿಸುತ್ತವೆ. ಹಾಗೆಯೇ ನಟ-ನಟಿಯರು ಸಹ ಚಿತ್ರಕ್ಕಾಗಿ ಕೋಟಿಗಟ್ಟಲೆ ಸಂಭಾವನೆಯನ್ನು ಪಡೆಯುತ್ತಾರೆ. ಹೀಗೆ ಕೋಟಿಗಟ್ಟಲೆ ಗಳಿಸಿರೋ ಸೆಲೆಬ್ರಿಟಿ ಜೋಡಿ ಯಾರು ಗೊತ್ತಾ?

Bollywoods richest couple, its not Virat-Anushka, Ranveer-Deepika, Ranbir-Alia, Abhishek-Aishwarya Vin
Author
First Published Dec 7, 2023, 9:14 AM IST

ಬಾಲಿವುಡ್‌ನಲ್ಲಿ ಕೋಟಿ ಕೋಟಿ ಬಜೆಟ್‌ನ ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ. ಬಾಕ್ಸಾಫೀಸಿನಲ್ಲಿ ಸಕ್ಸಸ್‌ ಆಗುವುದರ ಜೊತೆಗೆ ಭರ್ಜರಿ ಯಶಸ್ಸನ್ನೂ ಗಳಿಸುತ್ತವೆ. ಹಾಗೆಯೇ ನಟ-ನಟಿಯರು ಸಹ ಚಿತ್ರಕ್ಕಾಗಿ ಕೋಟಿಗಟ್ಟಲೆ ಸಂಭಾವನೆಯನ್ನು ಪಡೆಯುತ್ತಾರೆ. ಮಾತ್ರವಲ್ಲ ಜಾಹೀರಾತು, ಬ್ರ್ಯಾಂಡ್ ಅಂಬಾಸಿಡರ್, ವ್ಯಾಪಾರ-ಉದ್ಯಮಗಳಿಂದ ಹೆಚ್ಚಿನ ಮೊತ್ತದ  ಹಣವನ್ನು ಗಳಿಸುತ್ತಾರೆ. ಕೋಟಿ ಬೆಲೆಬಾಳುವ ಕಾರು, ಬಂಗಲೆ, ಲಕ್ಸುರಿಯಸ್ ರೆಸಾರ್ಟ್‌ಗಳನ್ನು ಹೊಂದಿರುತ್ತಾರೆ. ಆದರೆ, ಬಾಲಿವುಡ್ ನ ಶ್ರೀಮಂತ ಜೋಡಿ ಯಾರು ಗೊತ್ತಾ? ಇದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಥವಾ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಲ್ಲ. 

ಬಾಲಿವುಡ್‌ನ ಅತ್ಯಂತ ಶ್ರೀಮಂತ ದಂಪತಿಗಳು (Rich couple) ಶಾರೂಕ್‌ ಖಾನ್‌ ಮತ್ತು ಗೌರಿ ಖಾನ್ ಎಂದು ವರದಿಗಳು ಹೇಳುತ್ತವೆ. ದಂಪತಿಗೆ ಮದುವೆಯಾಗಿ 32 ವರ್ಷಗಳಾಗಿವೆ. ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂವರು ಮಕ್ಕಳಿದ್ದಾರೆ. ಶಾರೂಕ್ ಖಾನ್‌ ಅವರ ಜಂಟಿ ನಿವ್ವಳ ಮೌಲ್ಯ (Net worth) 8096 ಕೋಟಿ ರೂ.

ಬಾಲಿವುಡ್‌ ಸೆಲೆಬ್ರಿಟಿ ಮದ್ವೆಯ ಮುದ್ದಾದ ಕ್ಷಣ ಸೆರೆಹಿಡಿಯೋ ಫೋಟೋಗ್ರಾಫರ್‌, ಬೆಂಗಳೂರಿನ ಹುಡುಗ!

ಬರೋಬ್ಬರಿ 200 ಕೋಟಿ ರೂ.ಬೆಲೆಯ ಬಂಗಲೆ ಹೊಂದಿರೋ ಕಿಂಗ್‌ಖಾನ್‌
ಲೈಫ್‌ಸ್ಟೈಲ್ ಏಷ್ಯಾದ ವರದಿಯ ಪ್ರಕಾರ, ಶಾರೂಕ್‌ ಖಾನ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಈ ವರ್ಷದ ಅವರ ಹಿಟ್ ಚಿತ್ರಗಳಾದ 'ಪಠಾಣ್‌' ಮತ್ತು 'ಜವಾನ್'ಗಾಗಿ ತಲಾ 100 ಕೋಟಿ ರೂ. ಸಂಭಾವನೆಯನ್ನು (Remunaration) ಪಡೆದರು. ಶಾರೂಕ್‌ ಖಾನ್ ಮತ್ತು ಗೌರಿ ಖಾನ್ ಅವರ ನಿರ್ಮಾಣ ಸಂಸ್ಥೆಯಾದ 9Production house) ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನ ಸಹ-ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಗೌರಿ ಖಾನ್ \ಸೆಲೆಬ್ರಿಟಿ ಇಂಟೀರಿಯರ್ ಡಿಸೈನರ್ ಸಹ ಆಗಿದ್ದಾರೆ. ಗೌರಿ ಖಾನ್ ಡಿಸೈನ್ಸ್ ಎಂಬ ಹೆಸರಿನ ಸ್ಟುಡಿಯೋವನ್ನು ನಡೆಸುತ್ತಿದ್ದಾರೆ. ಶಾರೂಕ್ ಖಾನ್ ಮತ್ತು ಗೌರಿ ಖಾನ್ ಅವರ ಅತ್ಯಂತ ಮೌಲ್ಯಯುತ ಆಸ್ತಿಯೆಂದರೆ ಅವರ ಮುಂಬೈನ ಮನೆ ಮನ್ನತ್, ಇದರ ಮೌಲ್ಯ ಬರೋಬ್ಬರಿ 200 ಕೋಟಿ ರೂ.

ಶಾರೂಕ್‌ ಮತ್ತು ಗೌರಿ ಖಾನ್ ನಂತರದ ಸ್ಥಾನದಲ್ಲಿ ರಾಣಿ ಮುಖರ್ಜಿ ಮತ್ತು ಆದಿತ್ಯ ಚೋಪ್ರಾ ಇದ್ದಾರೆ. ಇವರ ಒಟ್ಟು 7400 ಕೋಟಿ ರೂ. ನಂತರದ ಪಟ್ಟಿಯಲ್ಲಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಒಟ್ಟು 4900 ಕೋಟಿ ರೂ.

ಅನಂತ್ ಅಂಬಾನಿ ಫಿಟ್ನೆಸ್ ಟ್ರೈನರ್: ಒಂದು ಸೆಷನ್‌ಗೆ ಇವರು ಮಾಡೋ ಚಾರ್ಜ್‌ ಎಷ್ಟು ಗೊತ್ತಾ..?

ಇತರ ಕೆಲವು ಪ್ರಸಿದ್ಧ ಬಾಲಿವುಡ್ ಜೋಡಿಗಳು ಮತ್ತು ಅವರ ಒಟ್ಟು ಆಸ್ತಿ ಮೌಲ್ಯ ಇಲ್ಲಿದೆ

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಒಟ್ಟು 3542 ಕೋಟಿ ರೂ
ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ನಿವ್ವಳ ಮೌಲ್ಯ 2994 ಕೋಟಿ ರೂ.
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ನಿವ್ವಳ ಮೌಲ್ಯ 1968 ಕೋಟಿ ರೂ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಒಟ್ಟು 1300 ಕೋಟಿ ರೂ.
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟು 1006 ಕೋಟಿ ರೂ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಒಟ್ಟು ಆಸ್ತಿ ಮೌಲ್ಯ 744 ಕೋಟಿ ರೂ
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಟ್ಟು ಆಸ್ತಿ ಮೌಲ್ಯ 720 ಕೋಟಿ ರೂ.

Follow Us:
Download App:
  • android
  • ios