Happy Birthday Vidya Balan: ವಿದ್ಯಾ ಬಾಲನ್ ಬೆಸ್ಟ್‌ 5 ಸಿನಿಮಾಗಳಿವು!

ಡರ್ಟಿ ಪಿಕ್ಚರ್ ನಟಿ ಇದೀಗ  43 ವಸಂತಕ್ಕೆ ಕಾಲಿಟ್ಟಿದ್ದಾರೆ.  ವಿದ್ಯಾ ನಟಿಸಿರುವ ಸಿನಿಮಾಗಳಲ್ಲಿ ನೀವು ಮಿಸ್ ಮಾಡದೆ ನೋಡಲೇ ಬೇಕಾದ ಸಿನಿಮಾಗಳಿವು.... 

Bollywood Vidya Balan birthday 5 films that proved Vidya acting vcs

ಬಾಲಿವುಡ್ ಸಿಂಪಲ್ ಮತ್ತು ಫ್ಯಾಮಿಲಿ ವುಮೆನ್ ವಿದ್ಯಾ ಬಾಲನ್ 2005ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.  ಪರಿಣಿತ (Parineeta) ಚಿತ್ರದ ಮೂಲಕ ಜರ್ನಿ ಆರಂಭಿಸಿದ ವಿದ್ಯಾ ತಮ್ಮ ವೃತ್ತಿ ಜೀವನದಲ್ಲಿ ಮರೆಯಲಾಗದ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅದರಲ್ಲೂ ಪೋಷಕರ ಪ್ರೋತ್ಸಾಹದಿಂದ ಡರ್ಟಿ ಪಿಕ್ಚರ್ ಒಪ್ಪಿಕೊಂಡು ಅಭಿನೇತ್ರಿ ಎಂದು ಸಾಬೀತು ಮಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿರುವ ಪ್ರತಿಯೊಬ್ಬ ಸ್ಟಾರ್ ನಟನ ಜೊತೆನೂ ಸಿನಿಮಾ ಮಾಡಿದ್ದಾರೆ. 

ಭೂಲ್ ಭುಲೈಯಾ

2007ರಲ್ಲಿ ಬಿಡುಗಡೆಯಾದ ಭೂಲ್ ಭುಲೈಯಾ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. (Bhool Bhulaiyaa)ಇದೊಂದು ಮಲಯಾಳಂ ಸಿನಿಮಾ ರಿಮೇಕ್ ಆಗಿದ್ದು ವಿದ್ಯಾ ಮೊದಲ ಬಾರಿ ದೊಡ್ಡ ಚಾಲೆಂಜಿಂಗ್ ಪಾತ್ರವನ್ನು ಒಪ್ಪಿಕೊಂಡಿದ್ದರು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿದ್ಯಾ ಮೈ ಮೇಲೆ ಡ್ಯಾನ್ಸರ್ ದೆವ್ವ ಬಂದು ಹೇಗೆ ಇದರಿಂದ ಹೊರ ಬಂದರು ಎಂದು ತೋರಿಸಲಾಗಿದೆ. 

ಇಷ್ಕಿಯಾ

2010ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ವಿದ್ಯಾ ವಿಧವೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಕಿಯಾ (Ishqiya) ಒಂದು ಸೂಪರ್ ಹಿಟ್ ಸಿನಿಮಾ ಆಗಿದ್ದು ಇದನ್ನು ಬ್ಲಾಕ್ ಕಾಮಿಡಿ ಎಂದು ಕರೆಯಲಾಗುತ್ತದೆ. ಇದರಲ್ಲಿ ರೊಮ್ಯಾನ್ಸ್ ಎಲಿಮೆಂಟ್‌ ಹೆಚ್ಚಿದ ಕಾರಣ ಬಿ-ಟೌನ್‌ ಮಂದಿಗೆ ಬೇಗ ಹತ್ತಿರವಾಗಿತ್ತು. ಈ ಚಿತ್ರದಲ್ಲಿ ಅರ್ಷದ್ ವಾರ್ಸಿ ಮತ್ತು ನಾಸಿರುದ್ದೀನ್ ಶಾ (Arshad Warsi and Naseeruddin Shah) ನಟಿಸಿದ್ದಾರೆ. ಈ ಚಿತ್ರದ ಹಾಡುಗಳು ಕೂಡ ಹಿಟ್ ಆಗಿತ್ತು. ವಿದ್ಯಾ ವೃತ್ತಿ ಜೀವನದಲ್ಲಿ ಬೋಲ್ಡ್‌ ಪಾತ್ರಗಳನ್ನು ಕೂಡ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ತೋರಿಸಿಕೊಟ್ಟರು. 

Bollywood Vidya Balan birthday 5 films that proved Vidya acting vcs

ಡರ್ಟಿ ಪಿಕ್ಚರ್

2011ರಲ್ಲಿ  ಬಿಡುಗಡೆಯಾದ ಈ ಸಿನಿಮಾ ಬಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದು ತಂದುಕೊಟ್ಟಿತ್ತು. ನಟಿ ಸಿಲ್ಕ ಸ್ಮಿತಾ ಜೀವನ ಚರಿತ್ರೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಚಿಕ್ಕ ವಯಸ್ಸಿಗೆ ಹೇಗೆ ಬಣ್ಣದ ಜರ್ನಿ ತನ್ನ ಇಡೀ ಜೀವನ ಬದಲಾಯಿಸಿತ್ತು ಎಂದು ತೋರಿಸಿಕೊಟ್ಟಿದ್ದಾರೆ. ಈ ಚಿತ್ರಕ್ಕೆ ವಿದ್ಯಾ ನ್ಯಾಷನಲ್ ಅವಾರ್ಡ್‌ ಕೂಡ ಗಳಿಸಿದ್ದರು. ಅನೇಕ ಬೆಸ್ಟ್‌ ನಟಿ ಪ್ರಶಸ್ತಿ ಪಡೆದುಕೊಂಡ್ಡರು. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ನಾಸಿರುದ್ದೀನ್ ಶಾ ಮತ್ತು ತುಷಾರ್ ಕಪೂರ್ (Emraan Hashmi, Naseeruddin Shah and Tushar Kapoor) ನಟಿಸಿದ್ದಾರೆ. 

Actress Beauty Secret: ಪಾರ್ಲರ್‌ಗೆ ಹೋಗಲಿಷ್ಟವಿಲ್ಲದ ಈ ನಟಿ ಸೌಂದರ್ಯಕ್ಕೆ ಸೋಲದವರಿಲ್ಲ

ಕಹಾನಿ

2012 ಡರ್ಟಿ ಪಿಕ್ಚರ್ ನಂತರ ವಿದ್ಯಾಗೆ ಬ್ಯಾಟು ಬ್ಯಾಕ್ ಆಫರ್‌ಗಳು ಹರಿದು ಬಂದಿತ್ತು. ಈ ವೇಳೆ ಕೊಂಚ ಚೇಂಜ್‌ ಇರಲಿ ಎಂದು ಒಪ್ಪಿಕೊಂಡ ಸಿನಿಮಾನೇ ಕಹಾನಿ. ರೊಮ್ಯಾಂಟಿಕ್ ಸಾಂಗ್ ಮತ್ತು ರೊಮ್ಯಾಂಟಿಕ್ ದೃಶ್ಯಗಳಿಂದ ವೀಕ್ಷಕರ ಗಮನ ಸೆಳೆದಿದೆ. ಮೊದಲ ಭಾಗ ಯಶಸ್ವಿಯಾದ ಕಾರಣ ಎರಡನೇ ಭಾಗವನ್ನೂ ಚಿತ್ರೀಕರಣ ಮಾಡಲಾಗಿತ್ತು. ಈ ಚಿತ್ರದಲ್ಲಿ ವಿದ್ಯಾ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ತೆಲುಗು ಮತ್ತು ತಮಿಳು ಭಾಷೆಯಲ್ಲಿ ರಿಮೇಕ್ ಮಾಡಲಾಗಿತ್ತಿದೆ, ಅದಲ್ಲದೆ ದೊಡ್ಡ ಮೊತ್ತಕ್ಕೆ  ಓಟಿಟಿಗೆ ಮಾರಾಟವಾಯ್ತು. 

ಸಿಂಪಲ್ ಸೀರೆಯುಟ್ಟ ವಿದ್ಯಾ ಬಾಲನ್: ಈ ಬಾರಿ ಪೋಸ್ ಚೇಂಜ್

ತುಮ್ಹಾರಿ ಸುಲು 

2017ರಲ್ಲಿ ಬಿಡುಗಡೆಯಾದ ಈ ಸಿನಿಮಾ ವುಮೆನ್ ಸೆಂಟ್ರಿಕ್ ಆಗಿತ್ತು. ಕಾಮಿಡಿ ಡ್ರಾಮ್ ಕಥೆಯಲ್ಲಿ ಕೂಡ ವಿದ್ಯಾ ನಟಿಸಬಹುದು ಎಂದು ಸಾಬೀತು ಮಾಡಿದ್ದರು. ಈ ಚಿತ್ರದಲ್ಲಿ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡು ಮುಗ್ಧ ಹುಡುಗಿಯಿಂಂದ ನಾಟಿ ಹುಡುಗಿಯಾಗಿ ಎಷ್ಟು ಬೇಗ ಬದಲಾಗಬಹುದು ಎಂದು ಪ್ರೂವ್ ಮಾಡಿದ್ದರು. ಈ ಸಿನಿಮಾವನ್ನು ತಮಿಳಿನಲ್ಲಿ ರಿಮೇಕ್ ಮಾಡಲಾಗಿತ್ತು ನಟಿ ಜೋತಿಕಾ ಅಭಿನಯಿಸಿದ್ದಾರೆ

Latest Videos
Follow Us:
Download App:
  • android
  • ios