ಶೀಘ್ರವೇ ಬಾಲಿವುಡ್‌ಗೆ ಕಮ್ ಮಾಡುವುದಾಗಿ ಹೇಳುತ್ತಿದ್ದ ನಟಿ ತನುಶ್ರೀ ದತ್ತಾ ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವೇಟ್‌ಲಾಸ್ ಜರ್ನಿ ಬಗ್ಗೆ ಬರೆದುಕೊಂಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿದ 36 ವರ್ಷದ ನಟಿ ಹೇಗೆ ಬಾಡಿ ಶೇಮಿಂಗ್ ಎದುರಿಸಿದರು ಎಂಬುದನ್ನೂ ಹೇಳಿಕೊಂಡಿದ್ದಾರೆ.

ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ; ಮತ್ತೆ ಕೋರ್ಟ್ ಮೆಟ್ಟಿಲೇರಿದ ತನುಶ್ರೀ ದತ್ತಾ 

'ಎರಡು ಮೂರು ವರ್ಷಗಳಿಂದ ನಾನು ದಪ್ಪ ದೇಹವನ್ನು ಮೆಂಟೇನ್ ಮಾಡುತ್ತಿದ್ದೆ. ಆದರೆ ಎಲ್ಲರೂ ಅದನ್ನೇ ದೊಡ್ಡ ವಿಚಾರ ಮಾಡಿ, ಬಾಡಿ ಶೇಮಿಂಗ್ ಮಾಡುತ್ತಿದ್ದರು. ಕೆಲವೊಮ್ಮೆ ಎಷ್ಟು ವಿಚಿತ್ರ ಎನಿಸುತ್ತಿತು ಅಂದ್ರೆ ದಪ್ಪ ಅಂತ ಮುಖದ ಮೇಲೆ ಹೊಡೆದಂತೆಯೇ ಹೇಳಿ ಬಿಡುತ್ತಿದ್ದರು. ಹೇಳಿದ್ದು ಯಾರೇ ಇರಬಹುದು, ಆದರೆ ಅದರಿಂದ ನೋವಾಗುತ್ತಿತು.  ಅವರೆಲ್ಲಾ ನನ್ನ ವಿಶ್ವಾಸ ಕುಂದಿಸುತ್ತಿದ್ದರು, ' ಎಂದು ತನುಶ್ರೀ ಮಾತನಾಡಿದ್ದಾರೆ.

ಸುಮಾರು 5 ತಿಂಗಳ ಅವಧಿಯಲ್ಲಿ ತನುಶ್ರೀ ಸುಮಾರು 15-17 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಸ್ಟ್ರೀಕ್ಟ್ ಆಗಿ ಪಾಲಿಸಿರುವ ಡಯಟ್‌ ಹೇಗಿತ್ತು ಗೊತ್ತಾ?

ತನುಶ್ರೀ ಪೋಸ್ಟ್‌:
'ನಾನು 15 ಕೆಜಿ ತೂಕ ಇಳಿಸುವುದಕ್ಕೆ ಮುಖ್ಯ ಕಾರಣವೇ Intermittent fasting. ಸೋಷಿಯಲ್ ಮೀಡಿಯಾದಲ್ಲಿ ಈಗ ಜನರು ನಾನು ಹೇಗೆ ಇಷ್ಟೊಂದು ಸಣ್ಣ ಆದೆ ಅಂತ ಚರ್ಚೆ ಶುರು ಮಾಡಿದ್ದಾರೆ. ಒಂದು ದಿನದಲ್ಲಿ ರೋಮ್ ರಾಜ್ಯ ಕಟ್ಟಲು ಆಗಲಿಲ್ಲ, ಅದರಲ್ಲಿ ವರ್ಷಗಳ ಶ್ರಮವಿತ್ತು.  ಹಾಗೆಯೇ ನನ್ನ ದೇಹವೂ. ಒಳ್ಳೆ ಆಹಾರ, ವ್ಯಾಯಾಮ ಹಾಗೂ ಅತ್ಯತ್ತಮವಾದ ಜೀವನಶೈಲಿ ಎಲ್ಲವೂ ಒಂದಾಗಿದ್ದೇ ಇದಕ್ಕೆ ಕಾರಣವಾಯ್ತು. ಸೋಮವಾರ ಉಪವಾಸ ಮಾಡಿದರೆ ನೆಕ್ಸ್ಟ್ ದಿನ ಆರ್ಗ್ಯಾನಿಕ್ ಆಹಾರ, ಮತ್ತೆ ಆಯುರ್ವೇದ ಹೀಗೇ ಒಂದೊಂದು  ದಿನವೂ ಒಂದೊಂದು ಮಾಡುತ್ತಿದ್ದೆ. ನಾನು ಕೆಲವೊಮ್ಮೆ ಮೊಟ್ಟೆ. ಮಾಂಸ ಹಾಗೂ ಹಾಲಿನ ಪದಾರ್ಥಗಳನ್ನೂ ತಿನ್ನುತ್ತೇನೆ.  ನಾನು ಕುಡಿಯುವುದು, ಸಿಗರೇಟ್ ಸೇದುವುದು ಯಾವುದನ್ನೂ ಮಾಡುವುದಿಲ್ಲ ಇವೆಲ್ಲಾ ನನ್ನ ದೇಹವನ್ನು ಹಾಳು ಮಾಡುತ್ತದೆ. ನಾನು ಹೆಚ್ಚಾಗಿ ನೀರು ಕುಡಿಯುತ್ತೇನೆ. ಕೆಲವೊಮ್ಮೆ ಮನಸ್ಸಿಲ್ಲದ ದಿನಗಳಲ್ಲಿ ನಾನು ಹೋಗಿ ಬೇಕಾದ್ದನ್ನು ತಿಂದಿದ್ದೀನಿ,' ಎಂದು ಬರೆದುಕೊಂಡಿದ್ದಾರೆ.

ತನುಶ್ರೀ ದತ್ತಾ ಮನೆಗೆ ನುಗ್ಗಲೆತ್ನಿಸಿದ ಆ ಇಬ್ಬರು ಯಾರು? 

 
 
 
 
 
 
 
 
 
 
 
 
 

The big secret of my 15 kg weight loss as many have been asking is intermittent fasting on alternate days! People on social media are just going berserk wondering what happened to me and how I lost so much. Well, Rome was not built in a day neither was my body. Took a year to get to this. So here it is folks; Along with a good healthy diet and regular exercise I'm following a holistic lifestyle. I start my week with a full day monday fast ( Shiva devotee! ) and live a holistic, organic, ayurvedic lifestyle the rest of week. I started this fast and a few other changes after I visited Mahakaleshwar last year. I consume eggs, non veg and dairy sometimes but mostly remain vegan. I let my spirit decide what to put in my body. I dont drink, smoke or do anything that harms my body and reduces its capacity to heal naturally. I drink lots of water except if I'm doing a full fast. I cheat sometimes on my daily routine once every few weeks for few days but jump right back in to discipline. Start my day with hot water n lemon, and end with a cup of hot green tea after dinner. Dinner is always before 8 or 9 pm latest. 30-40 min walk and 30-40 min of weight training or yoga almost everyday. Lots of fresh juices to keep energy levels up and lots of detox teas and green teas all day. I pray and meditate 3 times daily as has been my habit for years through many different religions, and despite my life circumstances try to keep a smile on my face and help others as much as I can. It's my whole lifestyle and a 360 degree attitude shift that has contributed to this positive change. There is no magic, no miracle, no secret so to say just a realization that I wanted the change so bad that I was willing to give up on a few things that were not serving me anymore. Certain attitudes, certain food habits and certain thought and habit patterns had lived out their expiry. Last but not the least someone up there surely loves me enough to keep giving me second chances in life to correct all the wrongs that I have endured! So this is His grace and His love manifest as my transformed body and soul. Still more to go...work in progress folks! Need ur support, love and prayers too. Xoxo

A post shared by Tanushree Dutta (@iamtanushreeduttaofficial) on Oct 10, 2020 at 8:17am PDT

ಡಯಟ್ ಹೇಗಿತ್ತು:
'ಬೆಳಗ್ಗೆ ಬಿಸಿ ನೀರು ಹಾಗೂ ನಿಂಬೆ ರಸ ಮಿಕ್ಸ್ ಮಾಡಿ ಕುಡಿದರೆ, ರಾತ್ರಿ ಗ್ರೀನ್ ಟೀ ಕುಡಿದೇ ಮಲಗುತ್ತಿದ್ದೆ. ರಾತ್ರಿ 8-9 ಗಂಟೆ ಒಳಗೆ ಊಟ ಮಾಡಿ ಮುಗಿಸುತ್ತಿದೆ.  30-40 ನಿಮಿಷ ವಾಕಿಂಗ್ ಹಾಗೂ  30-40 ವೈಯಟ್‌ ಟ್ರೇನಿಂಗ್ ಪಡೆಯುತ್ತಿದ್ದೆ. ದಿನವಿಡೀ ಎನರ್ಜಿಟಿಕ್ ಆಗಿರಲಿ ಅಂತ ಹಣ್ಣಿನ ಜ್ಯೂಸ್ ಕುಡಿಯುತ್ತೇನೆ. ದಿನಕ್ಕೆ ಮೂರು ಸಲ ಧ್ಯಾನ ಮಾಡುತ್ತೇನೆ. ದೈವ ಶಕ್ತಿ ನಮ್ಮನ್ನು ಪಾಸಿಟಿವ್ ಆಗಿಡಲು ಸಹಾಯ ಮಾಡುತ್ತದೆ,' ಎನ್ನುವ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.