ನಾನಾ ಪಾಟೇಕರ್ ಮೇಲೆ ತನುಶ್ರೀ ದತ್ತಾ ಮಾಡಿರುವ ಆರೋಪಗಳ ಸುದ್ದಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ತನುಶ್ರೀ ದತ್ತಾ ಆರೋಪದ ನಂತರ ಮೀ ಟು ಅಭಿಯಾನ ಸಹ ಶುರುವಾಗಿತ್ತು. ಆದರೆ ಈಗ ಅದೆಲ್ಲಕ್ಕಿಂತ ದೊಡ್ಡ ಶಾಕಿಂಗ್ ಸುದ್ದಿಯನ್ನು ತನುಶ್ರೀ ದತ್ತಾ ಹೊರಹಾಕಿದ್ದಾರೆ.

ಮುಂಬೈ[ಅ.04] ನಟ ನಾನಾ ಪಾಟೇಕರ್ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೇಲೆ ಆರೋಪ ಮಾಡಿದ ನಂತರ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ತನುಶ್ರೀ ಹೇಳಿದ್ದಾರೆ. ಕಳದೆ ರಾತ್ರಿ ಇಬ್ಬರು ಆಗುಂತಕರು ನನ್ನ ಮನೆಗೆ ನುಗ್ಗುವ ಯತ್ನ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರು ಎಂಎನ್ ಎಸ್ ಪಾರ್ಟಿಗೆ ಸೇರಿದ ಕಾರ್ಯಕರ್ತರೇ ಆಗಿದ್ದಾರೆ. ನನ್ನನ್ನು ಭಯಪಡಿಸಲು ಮುಂದಾಗುತ್ತಿದ್ದಾರೆ. ಮನೆಗೆ ನುಗ್ಗಲು ಯತ್ನಿಸಿದವರನ್ನು ಸೆಕ್ಯೂರಿಟಿಯವರು ತಡೆದ ಪರಿಣಾಮ ಅವಘಡಕ್ಕೆ ಅವಕಾಶ ಆಗಿಲ್ಲ ಎಂದು ನಟಿ ಹೇಳಿದ್ದಾರೆ.

ಸಿನಿಮಾ ಶೂಟಿಂಗ್ ವೇಳೆ 10 ವರ್ಷದ ಹಿಂದೆ ನಡೆದ ಪ್ರಕರಣ ಮತ್ತೆ ಸದ್ದು ಮಾಡಲು ಶುರುಮಾಡಿ ಕೆಲ ದಿನಗಳೆ ಕಳೆದಿವೆ. ತನುಶ್ರೀ ದತ್ತಾ ಶೂಟಿಂಗ್ ನಿಂದ ಹೊರಬಂದಾಗ ಅವರ ಕಾರ್ ಮೇಲೆ ಕಿಡಿಗೇಡಿಗಳು ಮುಗಿಬಿದ್ದಿದ್ದರು.ಮನಸೋ ಇಚ್ಛೆ ದಾಳಿ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು.