ಸುಶಾಂತ್ ಬರೆದಿಟ್ಟಿರುವ ಆ 50 ಕನಸುಗಳು ನಿಮ್ಮನ್ನೂ ಒಮ್ಮೆ ಬೆರಗುಗೊಳಿಸಿದರೆ ಅಚ್ಚರಿಯಿಲ್ಲ !
ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಜಕ್ಕೂ ಕನಸುಗಾರನೇ ಹೌದು! ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗಳ ಹಾದಿ ಹುಡುಕುತ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟವನು. ಈಗ ಅದೇ ಸುಶಾಂತ್ ನೆನಪುಗಳು ಮಾತ್ರ ಆದರೆ ಆತನು ಬರೆದಿಟ್ಟ 50 ಕನಸುಗಳನ್ನು ಓದಿದರೆ ಇದೆಲ್ಲಾ ನಿಜವಾಗಲೂ ಕನಸಾ ಎಂದೆನಿಸುತ್ತದೆ.
ಕಿರುತೆರೆ ಪ್ರೇಕ್ಷಕರಿಗೆ ಮೋಡಿ ಮಾಡುವಂತ ಗುಣವುಳ್ಳ ಪಾತ್ರಧಾರಿ ಬೇಕೆಂದು ಹುಡುಕುತ್ತಿದ್ದ ನಿರ್ದೇಶಕಿ ಏಕ್ತಾ ಕಪೂರ್‌ಗೆ ಸಿಕ್ಕಿದ ನಟನೇ ಸುಶಾಂತ್ ಸಿಂಗ್. ಎರಡು ವರ್ಷಗಳ ಕಾಲ ತನ್ನ ಅಭಿನಯದಿಂದ ಮಾತ್ರವಲ್ಲದೇ ತನ್ನ ರಿಯಲ್ ಲೈಫ್‌ನಿಂದಲೂ ಫಿದಾ ಆಗುವಂತೆ ಮಾಡಿದ ನಟ. ಸಿಂಪಲ್ ಆಗಿ ಹೇಳಬೇಕೆಂದು ಟ್ರಾನ್ಸ್ಪರೆಂಟ್ ನಟನಾಗಿ ಗುರುತಿಸಿಕೊಂಡಿದ್ದವ ಸುಶಾಂತ್ .
ಟೀವಿ ಸೀರಿಯಲ್‌ನಿಂದ ಬಂದ ಸ್ಟಾರ್; 7ನೇ ರ‌್ಯಾಂಕ್ ಬಂದಿದ್ದರೂ ಎಂಜಿನಿಯರಿಂಗ್ ಬಿಟ್ಟಿದ್ದ!
ಧಾರಾವಾಹಿಯಿಂದ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ತನ್ನ ಮುಗುಳು ನಗೆಯಿಂದ ಪ್ರೇಕ್ಷಕರ ಹೃದಯ ಕದ್ದ ತುಂಟ ಹುಡುಗ ಸುಶಾಂತ್ ಸಿಂಗ್ ಬಾಲಿವುಡ್ ಚಿತ್ರರಂಗದ ಮೋಸ್ಟ್ ವಾಂಟೆಡ್ ನಟನಾಗಿದ್ದ. 'ಕಾಯ್ ಪೋ ಚೆ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಸುಶಾಂತ್ ಅಭಿನಯಿಸಿದ್ದ 12 ಸಿನಿಮಾಗಳಲ್ಲಿ 9 ಬೆಸ್ಟ್ ನಟ ಅವಾರ್ಡ್ ಪಡೆದುಕೊಂಡವನು.
'The untold story of MS Dhoni' ಸಿನಿಮಾ ಮಾಡಿ ತನ್ನ ಸ್ಟೋರಿನೇ ಯಾರಿಗೂ ಹೇಳದಂತೆ ಮೌನಿಯಾದ. ಆದರೆ ಈ ಮೌನಿ ತನ್ನ ಕೈಯಾರೆ ಬರೆದ 50 ಕನಸುಗಳ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಇಲ್ಲಿದೆ ನೋಡಿ ಆ ಕನಸುಗಾರ ಕೆಲವು ಕನಸುಗಳು:
- Indian Defence Force ವಿದ್ಯಾರ್ಥಿಗಳನ್ನು ತಯಾರಿ ಮಾಡಲು ಸಹಾಯ ಮಾಡಬೇಕು.
- ಕೃಷಿ ಮಾಡೋದು ಕಲಿಯುವುದು
- ಕಣ್ಣು ಕಾಣದವರಿಗೆ ಸಂಜ್ಞೆ ಮೂಲಕ ಬೋದಿಸುವುದು
ಧೋನಿ ಪಾತ್ರದಾರಿ ಸುಶಾಂತ್ ಸುಸೈಡ್; ಕಾರಣ ಏನಿರಬಹುದು ?
- ಮಹಿಳೆಯರಿಗೆ ಭರವಸೆ ತುಂಬುವುದು
-ವಿಮಾನ ಓಡಿಸೋದು ಹೇಗೆ?
- 1 ಸಾವಿರ ಗಿಡ ನೆಟ್ಟಿ ಬೆಳೆಸೋದು
- ಎಡಗೈನಲ್ಲಿ ಬ್ಯಾಟಿಂಗ್ ಮಾಡೋದು
- ಮೋರ್ಸ್ ಕೋಡ್ ಕಲಿಯೋದು
- ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಂದು ಸಾಯಂಕಾಲ ಕಳೆಯುವುದು.
-ಚಾಂಪಿಯನ್ ಜೊತೆಗೆ ಟಿನಿಸ್ ಆಡೋದು
- ಇಷ್ಟದ 50 ಹಾಡುಗಳಿಗೆ ಗಿಟಾರ್ ನುಡಿಸುವುದನ್ನು ಕಲಿಯುವುದು.
- ಕೈಲಾಸ ಪರ್ವತದಲ್ಲಿ ಧ್ಯಾನ ಮಾಡುವುದು
-ಯುರೋಪ್ ಖಂಡವನ್ನು ರೈಲಿನಲ್ಲಿ ಸುತ್ತವುದು
- ಪುಸ್ತಕ ಬರೆಯುವುದು
- ನಾಸಾ ವರ್ಕ್‌ಶಾಪ್‌ನಲ್ಲಿ ಭಾಗಿಯಾಗುವುದು.
- 6 ತಿಂಗಳಲ್ಲಿ ಸಿಕ್ಸ್‌ಪ್ಯಾಕ್ ಮಾಡುವುದು.
- ಕಾಡಿನಲ್ಲಿ ಒಂದು ವಾರ ಕಳೆಯುವುದು
- ವೇದಿಕ್ ಭವಿಷ್ಯ ಅರಿಯುವುದು.
- ಉಚಿತ ಶಿಕ್ಷಣಕ್ಕಾಗಿ ಕೆಲಸ ಮಾಡುವುದು.
-ಕುದುರೆ ಓಡಿಸುವುದು
-ಕ್ರಿಯಾ ಯೋಗ ಕಲಿಯುವುದು
- ಅಂಟಾರ್ಟಿಕಾ ಹೋಗುವುದು
- ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುವುದು
- ಸ್ವಂತ ಲ್ಯಾಂಬೋರ್ಗಿನ ಕಾರ್ ಹೊಂದುವುದು
- ಚಾಂಪಿಯನ್ ಜೊತೆಗೆ ಚೆಸ್ ಆಡುವುದು
- ವಿಯೆನ್ನಾದ St. stephen's catherdral ಭೇಟಿ ನೀಡುವುದು.