ಧೋನಿ ಪಾತ್ರದಾರಿ ಸುಶಾಂತ್ ಸುಸೈಡ್; ಕಾರಣ ಏನಿರಬಹುದು ?
ದೇಶ ಕಂಡ ಅದ್ಭುತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆಗೆ ಬೆಳ್ಳಿತೆರೆಯ ಮೇಲೆ ಜೀವ ತುಂಬಿ ಪ್ರಸಿದ್ಧರಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಿಟಿಐ ಮುಂಬೈ
ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಪ್ರವೇಶಿಸಿ, ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿದ್ದ ಬಿಹಾರದ ಪಟನಾ ಮೂಲದ 34 ವರ್ಷದ ಪ್ರತಿಭಾವಂತ ನಟ, ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಸಿದ್ಧ ನಟರಾದ ರಿಷಿ ಕಪೂರ್, ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡು ಮೊದಲೇ ದುಃಖದಲ್ಲಿದ್ದ ಬಾಲಿವುಡ್‌ಗೆ ಸುಶಾಂತ್ ಸಾವಿನಿಂದ ಮತ್ತೊಂದು ಆಘಾತ ಎದುರಾಗಿದೆ.
ಕಾರಣ ಹೇಳದೆ ಹೋದ ಸುಶಾಂತ್ ಮನೆ ನೋಡಿದ್ದೀರಾ?
ಯುವ ನಟನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಯುವ ಪ್ರತಿಭಾವಂತ ನಟ ಇಷ್ಟುಬೇಗ ಹೋಗಿಬಿಟ್ಟಎಂದು ಮೋದಿ ಬೇಸರ ಸೂಚಿಸಿದ್ದಾರೆ. ಸುಶಾಂತ್ ಅವರ ಮಾಜಿ ಕಾರ್ಯದರ್ಶಿ ಕರ್ನಾಟಕ ಮೂಲದ 28 ವರ್ಷದ ದಿಶಾ ಸಾಲಿಯಾನ್ ಅವರು ಜೂ.9ರಂದು ಮುಂಬೈನ ಗಗನಚುಂಬಿ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಅದಾದ ಆರೇ ದಿನದಲ್ಲಿ ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿ ಆಧರಿಸಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಸುಶಾಂತ್ ಅವರ ಫ್ಲ್ಯಾಟ್‌ನಲ್ಲಿ ಯಾವುದೇ ರೀತಿಯ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಎಷ್ಟುಹೊತ್ತಾದರೂ, ಸುಶಾಂತ್ ಕೊಠಡಿಯ ಬಾಗಿಲು ತೆರೆಯದೇ ಇದ್ದಾಗ ಅನುಮಾನಗೊಂಡ ಕೆಲಸದಾಕೆ, ಸ್ನೇಹಿತರನ್ನು ಕರೆಸಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳಿವು!
ಪಟನಾದಲ್ಲಿ ತಂದೆ ಅಸ್ವಸ್ಥ:
ಪಟನಾದ ಸರ್ಕಾರಿ ಅಧಿಕಾರಿಯೊಬ್ಬರ ಐವರು ಮಕ್ಕಳಲ್ಲಿ ಸುಶಾಂತ್ ಕೊನೆಯವರು. ವಯೋವೃದ್ಧ ತಂದೆ ಪಟನಾದಲ್ಲಿ ನೆಲೆಸಿದ್ದಾರೆ. ಧನಾತ್ಮಕ ಗುಣ ಹಾಗೂ ಚಟುವಟಿಕೆಯಿಂದ ಕೂಡಿದ್ದ ಸುಶಾಂತ್ ಅವರ ಆತ್ಮಹತ್ಯೆಯಿಂದ ಕುಟುಂಬ, ನೆರೆಹೊರೆಯವರು, ಬಂಧುಗಳು, ಸ್ನೇಹಿತರು ದಿಗ್ಭ್ರಮೆಗೊಳಗಾಗಿದ್ದಾರೆ. ಸುಶಾಂತ್ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡಿದ್ದಕ್ಕೆ ಕಾರಣ ಏನು ಎಂಬುದು ತಿಳಿಯದೆ ಕಂಗಾಲಾಗಿದೆ. ಈ ನಡುವೆ, ಸುಶಾಂತ್ ಅವರ ತಂದೆಯ ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ.
ಕಾರಣ ಏನಿರಬಹುದು?
1. ಸುಶಾಂತ್ ಮನೆಯಲ್ಲಿ ಕೆಲವೊಂದು ವೈದ್ಯಕೀಯ ದಾಖಲೆ ದೊರೆತಿವೆ. ಅವುಗಳ ಪ್ರಕಾರ ಅವರು 6 ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದರು. ಖಿನ್ನತೆ ಹೆಚ್ಚಾಗಿ ಸಾವಿನ ನಿರ್ಧಾರ ಕೈಗೊಂಡರೆ?
2. 2002ನೇ ಇಸ್ವಿಯಲ್ಲಿ ಸುಶಾಂತ್ ಅವರ ತಾಯಿ ನಿಧನರಾಗಿದ್ದರು. ತಾಯಿ ನಿಧನ ಅವರನ್ನು ತೀವ್ರವಾಗಿ ಬಾಧಿಸಿತ್ತು. ಜೂ.3ರಂದು ಇನ್‌ಸ್ಟಾಗ್ರಾಂನಲ್ಲಿ ತಾಯಿ ಚಿತ್ರವನ್ನು ಅವರು ಶೇರ್ ಮಾಡಿದ್ದರು. ತಾಯಿ ನೆನಪಾಗಿ ಈ ನಿರ್ಧಾರಕ್ಕೆ ಬಂದರೆ?
3. ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಸಹನಟಿಯಾಗಿದ್ದ ಅಂಕಿತಾ ಲೋಖಂಡೆ ಜತೆ ಸುಶಾಂತ್‌ಗೆ ಪ್ರೇಮವಾಗಿತ್ತು. 6 ವರ್ಷ ಇಬ್ಬರೂ ಪ್ರೀತಿಸಿದ್ದರು. ಈ ಸಂಬಂಧ ಮುರಿದುಬಿದ್ದಿತ್ತು. ಆದರೆ ಇತ್ತೀಚೆಗೆ ಅಂಕಿತಾ ಅವರಿಗೆ ಬೇರೊಬ್ಬರ ಜತೆ ನಿಶ್ಚಿತಾರ್ಥವಾಗಿತ್ತು. ಇದರಿಂದ ನೊಂದರಾ?
4. ತಮ್ಮ ಮಾಜಿ ಮ್ಯಾನೇಜರ್ 28 ವರ್ಷದ ದಿಶಾ ಸಾಲಿಯಾನ್ ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೊಂದು ಆಘಾತಕಾರಿ ಸುದ್ದಿ ಎಂದು ಸುಶಾಂತ್ ಟ್ವೀಟ್ ಮಾಡಿದ್ದರು. ಅದರಿಂದ ಮನಸ್ಸಿಗೆ ಬೇಸರವಾಗಿ ಸಾವಿಗೆ ಶರಣಾದರಾ?