Asianet Suvarna News Asianet Suvarna News

'ಸಲ್ಮಾನ್ ಖಾನ್ ಮಾಲೀಕತ್ವದ 'Being Human' ಚಾರಿಟಿ ಹೆಸರಲ್ಲಿ ಹಗಲು ದರೋಡೆ ಮಾಡುತ್ತಿದೆ'

ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗುತ್ತಿದೆ ಸುಶಾಂತ್ ಸಿಂಗ್ ಸಾವಿನ ಚರ್ಚೆ. ಸ್ಟಾರ್ ಗಿರಿಯಲ್ಲಿದ್ದ ನಟ-ನಟಿಯರಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು? ತಮ್ಮೊಳಗಿದ್ದೂ, ತನ್ನವಳನಾಗಿ ನೋಡದ ಸಹ ನಟ, ನಟಿಯರ ನೈಜ ಮುಖವಾಡ ಕಳಚಿ ಬೀಳುತ್ತಿದೆ. 

Bollywood sushant singh fan stage protest outside salman khan being human brand stores
Author
Bangalore, First Published Jun 20, 2020, 11:29 AM IST

ಬಾಲಿವುಡ್ ಯಂಗ್ ಮ್ಯಾನ್ ಸುಶಾಂತ್ ಸಿಂಗ್ ಇಹಲೋಕ ತ್ಯಜಿಸಿ ವಾರ ಕಳೆಯುತ್ತಿದ್ದರೂ, ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ಆತನ ಅಗಲಿಕೆಯ  ಶಾಕ್‌ನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ.  ರಾಜ್‌ಪೂತ್‌ ಸಾವಿನ ವಿಚಾರಗಳು ಅನೇಕ ನಟ-ನಟಿಯರ ನೈಜ ಮುಖ ಬಹಿರಂಗಗೊಳಿಸಿದೆ. ಮಾನಸಿಕ ಖಿನ್ನತೆ ಮತ್ತು ಅದಕ್ಕೆ ಒಳಗಾಗಿರುವವರ ಪರ ಧ್ವನಿ ಎತ್ತುತ್ತಿದ್ದಾರೆ ಎಲ್ಲರೂ. ರಿಯಾಲಿಟಿ ಶೋ, ಪ್ರಮೋಷನ್ ಕಾರ್ಯಕ್ರಮಗಳಲ್ಲಿ ನಟ, ನಟಿಯರು ಸುಶಾಂತ್ ಸಿಂಗ್ ವಿರುದ್ಧ ಹೇಗೆ ಮಾತನಾಡುತ್ತಿದ್ದರು ಎಂಬುವುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಟಾ ಬಯಾಲಾಗುತ್ತಿದೆ. ಅಷ್ಟೇ ಅಲ್ಲ, ಕರಣ್ ಜೋಹರ್‌ನಂತ ನಿರ್ದೇಶಕ ಸ್ವಜನಪಕ್ಷಪಾತ ಎಲ್ಲವೂ ಒಂದೊಂದಾಗಿ ಕಳಚಿಕೊಳ್ಳುತ್ತಿದೆ.

Bollywood sushant singh fan stage protest outside salman khan being human brand stores

ಅಷ್ಟೇ ಅಲ್ಲ ಕರಣ್ ಜೋಹರ್‌ನಂಥ ನಿರ್ದೇಶಕನನ್ನೇ ಎದುರು ಹಾಕಿಕೊಳ್ಳುವಂಥ ಮಾತನಾಡಿದ ಗಟ್ಟಿಗಿತ್ತಿ ಕಂಗನಾ, ಇದೀಗ ಸುಶಾಂತ್ ಸಾವಿಗೆ ಬಾಲಿವುಡ್‌ನಲ್ಲಿ ನಡೆಯುವ ದಬ್ಬಾಳಿಕೆ, ಕುಟುಂಬ ಪ್ರಭಾವ ಹಾಗೂ ಸ್ವಜನಪಕ್ಷಪಾತವೇ ಕಾರಣ ಎಂಬುದನ್ನು ಮತ್ತೀಗ ಸಾರಿ ಸಾರಿ ಹೇಳುತ್ತಿದ್ದಾರೆ. ಬಾಲಿವುಡ್‌ನಲ್ಲಿ ಯಶಸ್ವಿ ನಟಿಯಾದೂ, ಹೊರಗಿನವರಂತೆಯೇ ಇರುವ ಕಂಗನಾ, ದಿಗ್ಗಜರ ವಿರುದ್ಧ ಮಾತನಾಡಿದ ವೀಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. 

ಸುಶಾಂತ್‌ ಜತೆ ಜಗಳ ಆಗಿತ್ತು: ವಿಚಾರಣೆ ವೇಳೆ ಬಾಯ್ಬಿಟ್ಟ ಗೆಳತಿ ರಿಯಾ!

ಸಲ್ಮಾನ್, ಕರಣ್ ವಿರುದ್ಧ ಧರಣಿ:
ಸುಶಾಂತ್ ಸಾವಿನ ನಂತರ ಬಿಹಾರದ ಮುಜಾಫರ್‌ನಲ್ಲಿ ಬಾಲಿವುಡ್‌ ಸ್ಟಾರ್ ನಟ ಹಾಗೂ ನಿರ್ದೇಶಕರಾದ ಕರಣ್ ಜೋಹರ್, ಸಲ್ಮಾನ್‌ ಖಾನ್‌ ವಿರುದ್ಧ FIR ದಾಖಲು ಮಾಡಲಾಗಿತ್ತು. 34 ವರ್ಷದ ಸುಶಾಂತ್‌ನನ್ನು ಚಿತ್ರರಂಗದಲ್ಲಿ ಒಬ್ಬಂಟಿಯಾಗಿ ಮಾಡಿದ ಕಾರಣ ಅಭಿಮಾನಿಗಳು ಹೊರಾಡಲು ಜೊತೆಯಾಗಿದ್ದಾರೆ.

Bollywood sushant singh fan stage protest outside salman khan being human brand stores

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ದಿನವೇ ಬಿಹಾರ ಮೂಲದ ಅಭಿಮಾನಿಯೊಬ್ಬ ಬಾಲಿವುಡ್‌ ಸ್ಟಾರ್ಸ್ ಪೋಸ್ಟರ್‌ಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟಿಸಲು ಆರಂಭಿಸಿದ್ದರು. ಸುಶಾಂತ್ ಸಾವು ಒಂದು ಪೂರ್ವನಿಯೋಜಿತ ಸಾವೆಂದು ಅಭಿಮಾನಿಗಳು ಸಲ್ಮಾನ್ ಖಾನ್‌ ಮಾಲೀಕತ್ವದ ಬ್ರ್ಯಾಂಡ್ ಆದ 'Being Human' ಶಾಪ್ ಮುಂದೆ ಬೆಂಕಿ ಹಚ್ಚಿ ಪ್ರತಿಭಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಜಾಹೀರಾತಿನ ರೀತಿಯಲ್ಲಿ ಎಲ್ಲೇ ಸಲ್ಮಾನ್‌ ಖಾನ್‌  Being Human ಪೋಸ್ಟರ್‌ ಇದ್ದರೂ, ತೆಗೆಯುವಂತೆ ಆಗ್ರಹಿಸುತ್ತಿದ್ದಾರೆ.

ಸುಶಾಂತ್ ಆತ್ಮಹತ್ಯೆ: ಬಾಲಿವುಡ್‌ನ ಫೇಮಸ್ ಪ್ರೊಡಕ್ಷನ್‌ ಹೌಸ್‌ಗೆ ಪೊಲೀಸ್ ಲೆಟರ್ 

ನಿರ್ದೇಶಕ ಅಭಿನವ್ ಕಶ್ಯಪ್ ಕೂಡ ಸಲ್ಮಾನ್ ಖಾನ್ ವಿರುದ್ಧ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ  ಅನುರಾಗ್ ಸಲ್ಮಾನ್‌ ಖಾನ್ ನಡೆಸುತ್ತಿರುವ ಚಾರಿಟಿ ಜನರಿಗೆ ಮೋಸ ಮಾಡುತ್ತಿದೆ, ಅದೆಲ್ಲವೂ ಶೋ ಆಫ್‌ ಮಾಡುವುದಕ್ಕೆ ಎಂದು ಆರೋಪಿಸಿದ್ದಾರೆ. 'ಸಲ್ಮಾನ್‌ ಖಾನ್‌ ಬ್ರ್ಯಾಂಡ್‌ 500 ರೂ, ಜೀನ್ಸ್‌ ಪ್ಯಾಂಟನ್ನು 5000ರೂ.ಗೆ ಮಾರುತ್ತಾರೆ. ಚಾರಿಟಿ ಹೆಸರಿನಲ್ಲಿ ಹಾಡು ಹಗಲೇ ಜನರನ್ನು ಲೂಟಿ ಮಾಡಲಾಗುತ್ತಿದೆ. ಮುಗ್ಧ ಮನಸ್ಸಿನ ಜನರು ಇದನ್ನು ನಂಬಿ ಹಾಳಾಗುತ್ತಿದ್ದಾರೆ.  ಸರ್ಕಾರ ತನಿಖೆ ನಡೆಸಿದರೆ ಇದರ ನೈಜ ಬಣ್ಣ ಬಯಲಾಗುತ್ತದೆ,' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

 

"ye Salman khan ka photo kal hatt jana chaiye..Salman khan murdabad" MOOD IN BIHAR #SalmanKhan #SalmanKhan #JusticeForSushantSinghRajput pic.twitter.com/NqqODtkgw3

— Aryan pandey (@Aryann45_) June 18, 2020

ಇತ್ತ ಖ್ಯಾತ ಗಾಯಕ ಸೋನು ನಿಗಂ ಸಹ ಬಾಲಿವುಡ್‌ನಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತದ ಬಗ್ಗೆ ಧ್ವನಿ ಎತ್ತಿದ್ದು, ದೊಡ್ಡವರ ಇಂಥ ವರ್ತನೆ ಮುಂದುವರಿದರೆ ಗಾಯಕರೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದ್ದಾರೆ. 

ಒಟ್ಟಿನಲ್ಲಿ ಒಬ್ಬ ಪ್ರತಿಭಾನ್ವಿತ, ವಿದ್ಯಾವಂತ ಸುಶಾಂತ್ ಸಿಂಗ್ ಸಾವು ಬಾಲಿವುಡ್ ಎಂಬ ಚಿತ್ರೋದ್ಯಮದಲ್ಲಿ ತಾಂಡವ ಆಡುತ್ತಿರುವ ಸಮಸ್ಯೆಗಳ ಬಗ್ಗೆ ಹತ್ತು ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಖಿನ್ನತೆಯಿಂದ ಬಳಲುತ್ತಿದ್ದ, ಸುಶಾಂತ್ ನೇಣಿಗೆ ಕೊರಳೊಡ್ಡಿದ್ದಾರೆ ಎಂದರೂ, ಅಂಥ ಖಿನ್ನತೆಗೆ ತಳ್ಳಿದ್ದು ಬಾಲಿವುಡ್‌ನ ರಾಜಕೀಯ ಎಂದೇ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಾಲಿವುಡ್ ಆಳುತ್ತಿರುವ ಕೆಲವು ನಟರು, ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ಭಾರತೀಯರು ಮುನಿಸಿಕೊಂಡಿದ್ದು, ಲಾಕ್‌ಡೌನ್ ತೆರವಾದ ನಂತರ ಈ ಮಹಾನುಭಾವರ ಚಿತ್ರಗಳು ರಿಲೀಸ್ ಆದರೆ ಅದ್ಹೇಗೆ ರೆಸ್ಪಾನ್ಸ್ ಸಿಗುತ್ತದೋ ಕಾದು ನೋಡಬೇಕಾಗಿದೆ. 

Follow Us:
Download App:
  • android
  • ios