ಬಾಲಿವುಡ್‌ ಮುಗ್ಧ ಮನಸ್ಸಿನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಇನ್ನಿಲ್ಲವಾದರೂ ಅಭಿಮಾನಿಗಳು ಈಗಲೂ ಆತನ ನೆನಪಿನಲ್ಲಿ ದಿನ ಕಳೆಯುತ್ತಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತ ನಟನಲ್ಲ ಇದು ಫ್ರೀ ಪ್ಲಾನ್ ಮರ್ಡರ್‌ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಇಂಜಿನಿಯರಿಂಗ್‌ನಲ್ಲಿ ಇಡೀ ರಾಜ್ಯಕ್ಕೆ Rank ಬಂದ ಸುಶಾಂತ್ ಸಿಂಗ್ ನಟನೆಯ ಬಗ್ಗೆ ಆಸಕ್ತಿ ಇದ್ದ ಕಾರಣ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಾರೆ. ಸ್ಟಾರ್ ನಟನಾದರೂ ತಮ್ಮ ಜೀವನ ಶೈಲಿ, ಮುಗ್ಧತೆ ಬಿಟ್ಟುಕೊಡದ ಸುಶಾಂತ್ ಜೀವನದ 50 ಗುರಿಗಳನ್ನು ಡೈರಿಯರ್ಲಿ ಬರೆದಿಟ್ಟಿದ್ದರು. ತಮ್ಮ ಮನೆಯ ಒಂದು ಕೋಣೆಯಲ್ಲಿ  ಸ್ಪೇಸ್ ಮತ್ತು ನಕ್ಷತ್ರಗಳ ಬಗ್ಗೆ ಓದಿ ತಿಳಿದುಕೊಳ್ಳಲು ಅನೇಕ ಪುಸ್ತಕಗಳನ್ನು ಇಟ್ಟಿದ್ದರು. ಈಗ ಇದೇ ನಟ ಫಾರ್‌ಎವರ್‌ ಸ್ಟಾರ್‌ ಆಗಿ ಉಳಿಯಲಿ ಎಂದು ಅಭಿಮಾನಿಗಳು ಅಪರೂಪದ ಕೆಲಸವೊಂದನ್ನು ಮಾಡಿದ್ದಾರೆ. 

ನಕ್ಷತ್ರನಾದ ಸುಶಾಂತ್:

ಸುಶಾಂತ್ ಅಪ್ಪಟ್ಟ ಅಭಿಮಾನಿಯಾಗಿರುವ  ರಕ್ಷಕ್ ಎಂಬಾತ ಸುಶಾಂತ್  ಹೆಸರಿನಲ್ಲಿ ನಕ್ಷತ್ರವನ್ನು  ನಾಮಕರಣ ಮಾಡಿದ್ದಾರೆ. ಈ ಬಗ್ಗೆ  ಟ್ವಿಟ್ಟರ್ ನಲ್ಲಿ  ಸರ್ಟಿಫಿಕೇಟ್‌ ಅಪ್ಲೋಡ್ ಮಾಡಿದ್ದಾರೆ. 
'Let it be known to all that the star residing at the astronomically verified position of RA 22.121 and Declination - 10.14 is hereby named for June 25, 2020, as Sushant Singh Rajput. The name is permanently filed in the Registry's vault and copyrighted with The Star Register with all rights and privileges attended thereto'  ಎಂದು ಸರ್ಟಿಫಿಕೇಟ್‌ ಮೇಲೆ ಬರೆಯಲಾಗಿದೆ.

ಸುಶಾಂತ್ ವಿರುದ್ಧ #MeToo ಆರೋಪಿಸಿಲ್ಲ, ವಿಚಾರಣೆ ನಂತರ ಮುಂಬೈಗೆ ಗುಡ್‌ ಬೈ ಹೇಳಿದ ನಟಿ ಸಂಜನಾ!

ಅಷ್ಟೇ ಅಲ್ಲದೆ ಸುಶಾಂತ್ ಸಿಂಗ್‌ ಬಗ್ಗೆ ಸರ್ಟಿಫಿಕೇಟ್‌ನಲ್ಲಿ ಬರೆಯಲಾಗಿದೆ. 'ನಟ ಸುಶಾಂತ್ ಸಿಂಗ್‌ನನ್ನು ನಾನು ತುಂಬಾನೇ ಮಿಸ್‌ ಮಾಡಿಕೊಳ್ಳುತ್ತೇವೆ, ಈ ಕಾರಣಕ್ಕೆ ಆತ ಸದಾ ನಮ್ಮೊಟ್ಟಿಗೆ ಮಿಂಚುತ್ತಿರಬೇಕೆಂದು  ಆಕಾಶದಲ್ಲಿ ಆತನಂತೆ ಮಿಂಚುವ ನಕ್ಷತ್ರಕ್ಕೆ ಈತನ ಹೆಸರಿನಿಂದ ನಾಮಕರಣ ಮಾಡಲಾಗಿದೆ' ಎಂದು ಬರೆದಿದ್ದಾರೆ.

ಸುಶಾಂತ್ ಸಾವಿನ ತನಿಖೆ ಸಂಪೂರ್ಣಗೊಂಡ ನಂತರ 'ದಿಲ್ ಬೇಜಾರ್' ಸಿನಿಮಾ ರಿಲೀಸ್ ಮಾಡಲು ಅವಕಾಶ ಮಾಡಿಕೊಡಬೇಕೆಂದು ನಿರ್ದೇಶಕರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.