ಕೇಂದ್ರ ಸಚಿವ ನಾರಾಯಣ್ ರಾಣೆ ಮತ್ತು ಪುತ್ರ ಶಾಸಕ ನಿತೇಶ್ ರಾಣೆ ವಿರುದ್ಧ ದೂರು ದಾಖಲಿಸಿದ ದಿಶಾ ಪೋಷಕರು...

ಬಾಲಿವುಡ್‌ ಸಿಂಪಲ್ ನಟ ಸುಶಾಂತ್ ಸಿಂಗ್ (Sushant Singh) ಸಾವು ಮತ್ತು ಮಾಜಿ ಮ್ಯಾನೇಜರ್‌ ದಿಶಾ ಸಾಲಿಯಾನ್ (Disha Salian) ಆತ್ಮಹತ್ಯೆ ಕುರಿತು ಇನ್ನೂ ತನಿಖೆ ನಡೆಯುತ್ತಲೇ ಇದೆ. ಜೂನ್ 14,2020ರಂದು ಸುಶಾಂತ್ ಸಿಂಗ್ ಅಪಾರ್ಟೆಮೆಂಟ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು ಅವರ ಸಾವಿಗೂ 6 ದಿನಗಳ ಹಿಂದೆ ಮ್ಯಾನೇಜರ್ ದಿಶಾ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದರು. 

ದಿಶಾ ಸಾವಿಗೆ ನ್ಯಾಯ ಸಿಗಬೇಕೆಂದು ಹೋರಾಟುತ್ತಿರುವ ದಿಶಾ ಪೋಷಕರು ಇದೀಗ ಕೇಂದ್ರ ಸಚಿವ ನಾರಾಯಣ್ ರಾಣೆ (Narayan Rane) ಮತ್ತು ಪುತ್ರ ಶಾಸಕ ನಿತೇಶ್ ರಾಣೆ (Nitesh Rane) ವಿರುದ್ಧ ಎಫ್‌ಐಆರ್‌ (FIR) ದಾಖಲು ಮಾಡಿದ್ದಾರೆ. ದಿಶಾ ಅನುಮಾನಾಸ್ಪದ ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ ಆದರೆ ಈ ನಡುವೆ ದಿಶಾ ಮತ್ತು ಕುಟುಂಬದ ಬಗ್ಗೆ ಮಾನಹಾನಿ ಆಗುವಂತಹ ಹೇಳಿಕೆಗಳನ್ನು ಕ್ರೇಂದ್ರ ಸಚಿವರು ನೀಡಿದ್ದರು. 'ದಿಶಾ ಮೇಲೆ ಅತ್ಯಾಚಾರ (Rape) ಆಗಿದೆ, ಕೊಲೆ (Murder) ಮಾಡಲಾಗಿದೆ' ಎಂದು ಹೇಳಿದ್ದರು. 

ದಿಶಾ ನಿಧನದ ನಂತರ ಮಾನಹಾನಿಯಾಗುವಂತ ಹೇಳಿಕೆಯನ್ನು ಸಚಿವರು ನೀಡಿದ್ದಾರೆ ಎಂದು ದಿಶಾ ಅವರ ತಾಯಿ ಸೆಕ್ಷನ್ 500, 509 ಮತ್ತು 67ರ ಅಡಿಯಲ್ಲಿ ದೂರು ದಾಖಲು ಮಾಡಿದ್ದಾರೆ. 'ಈ ರಾಜಕೀಯ ನಾಯಕರು ನಮ್ಮ ಮಗಳ ಬಗ್ಗೆ ಮಾನಹಾನಿ ಆಗುವಂತೆ ಹೇಳಿಕೆ ನೀಡಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರಂತೆ.

ಸುಶಾಂತ್‌ ಪ್ರಕರಣಕ್ಕೆ ಟ್ವಿಸ್ಟ್, ದಿಶಾ ಪ್ರಿಯತಮನ ಮನೆಯಲ್ಲಿ ಸಿಕ್ಕ ಸಾಕ್ಷಿ!

ಮಹಾರಾಷ್ಟ್ರ ಮಹಿಳಾ ಆಯೋಗ (Maharashtra State Commission for Women) ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ದಿಶಾ ಸಾಲಿಯಾನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಹರಡುವ ಖಾತೆಗಳನ್ನು ನಿಷ್ಕ್ರಿಯಗೊಳ್ಳಿಸಬೇಕಿದೆ ಎಂದು ಪೊಲೀಸ್‌ (Police) ಇಲಾಖೆಗೆ ಸೂಚನೆ ನೀಡಿದ್ದಾರೆ. 'ದಿಶಾ ಸಾಲಿಯಾನ್ ಮರಣೋತ್ತರ ಪರೀಕ್ಷಾ ವರದಿಯನ್ನು ಮಾಲ್ವನಿ ಪೊಲೀಸರು ಆಯೋಗಕ್ಕೆ ನೀಡಿದ್ದರು. ಅದರಲ್ಲಿ ದಿಶಾ ಮೇಲೆ ಅತ್ಯಾಚಾರ ಆಗಿಲ್ಲ ಮತ್ತು ಗರ್ಭಿಣಿ (Pregnant) ಆಗಿರಲಿಲ್ಲ ಎಂದು ಹೇಳಲಾಗಿದೆ. ನಾರಾಯಣ್ ರಾಣೆ ಮತ್ತು ನಿತೇಶ್ ರಾಣಿ ಸೇರಿದಂತೆ ಅನೇಕರು ಆಕೆಯ ಸಾವಿನ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ರೀತಿ ಮಾಡುವ ಯಾರೇ ಆಗಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು' ಎಂದು ಆಯೋಗ ಅಧ್ಯಕ್ಷೆ ರೂಪಾಲಿ ಚಕಾಂಕರ್ ಟ್ಟೀಟ್ ಮಾಡಿದ್ದಾರೆ.

ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಲ್ಯಾನ್ ಕೇಸ್ ರಿಓಪನ್ ಮಾಡಿದ CBI

28 ವರ್ಷದ ದಿಶಾ ಸತ್ತ 6 ದಿನಗಳ ನಂತರ 34 ವರ್ಷದ ಸುಶಾಂತ್ ಆತ್ಮಹತ್ಯೆ ಮಾಡಿಕೊಮಡ ಹಿನ್ನೆಲೆ, ಇವರಿಬ್ಬರು ನಡುವೆ ಏನೋ ಇತ್ತು ಎಂದು ಗಾಸಿಪ್ ಹಬ್ಬಿಸಲಾಗಿತ್ತು. ಸುಶಾಂತ್ ಸಾವಿನ ತನಿಕೆ ಕೂಡ ಇನ್ನು ನಡೆಯುತ್ತಿದೆ. ಅನೇಕರು ಇದು ಕೊಲೆ ಎಂದಿದ್ದಾರೆ. ಆದರೆ ದಿಶಾ ಹೇಗೆ ಸತ್ತಿದ್ದು ಎಂದು ಮಾತ್ರ ತಿಳಿದು ಬಂದಿಲ್ಲ. ಘಟನೆ ನಡೆದು ಎರಡು ವರ್ಷಗಳು ಕಳೆಯುತ್ತದೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.

ಕೆಲವು ದಿನಗಳ ಹಿಂದೆ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ (Kishori Pednekar) ಅವರು ದಿಶಾ ಸಾಲಿಯಾನ್‌ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ದಿಶಾ ಅವರ ತಾಯಿ ಪತ್ರವೊಂದನ್ನು ಸಲ್ಲಿಸಿದ್ದರು. ಯಾವ ರಾಜಕೀಯ ವ್ಯಕ್ತಿಗಳು ನನ್ನ ಮಗಳ ಸಾವಿನ ಬಗ್ಗೆ ತಪ್ಪು ಮಾಹಿತಿ ನೀಡಬಾರದು ಹಾಗೇ ಆಕೆಗೆ ಮಾನಹಾನಿ ಆಗುವಂತೆ ಮಾತನಾಡಬಾರದು ಎಂದು ಬರೆದಿದ್ದಾರಂತೆ.