ಮುಂಬೈ (ಜು. 06) ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಅಭಿಮಾನಿಗಳನ್ನು ಅಗಲಿದ್ದರು. ಅವರ ಅಭಿನಯದ ಹಲವಾರು ಸಿನಿಮಾಗಳು ಅರ್ಧಕ್ಕೆ ನಿಂತಿದ್ದವು. ಕೆಲವು ಬಿಡಗುಡೆ ಹಂತದಲ್ಲಿ ಇದ್ದವು.

ಇದೀಗ ಸುಶಾಂತ್ ಅಭಿನಯದ ಚಿತ್ರ 'ದಿಲ್ ಬೇಚಾರಾ'ದ ಟ್ರೇಲರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಹವಾ ಸೃಷ್ಟಿಸುತ್ತಿದೆ. ಬಿಡಗುಡೆಯಾಗಿ ಅರ್ಧ ಗಂಟೆಗೆ ಎರಡೂವರೆ ಲಕ್ಷ ವೀವ್ಸ್ ಕಂಡಿದೆ.

ಸುಶಾಂತ್ ಸಾವು, ಕಪಿಲ್ ಕೆಣಕಿದವನಿಗೆ ಶರ್ಮಾ ಪಂಚ್

ಫಾಕ್ಸ್ ಸ್ಟಾರ್ ಸ್ಡುಡಿಯೋ ನಿರ್ಮಾಣದ ಚಿತ್ರವನ್ನು ಮುಖೇಶ್ ಛಾಬ್ರಾ ನಿರ್ದೇಶನ ಮಾಡಿದ್ದಾರೆ.  ನಿನ್ನ ಮೊದಲ ನಿರ್ದೇಶನದ ಚಿತ್ರದಲ್ಲಿ ನಾನಿರುತ್ತೇನೆ ಎಂದು ಸುಶಾಂತ್ ಹೇಳಿದ್ದು ಅವರಿಲ್ಲದೆ ಚಿತ್ರ ಬಿಡುಗಡೆ ಮಾಡಬೇಕಾಗಿದೆ ಎಂದು ನಿರ್ದೇಶಕ ಮುಖೇಶ್ ಹೇಳಿದ್ದರು .

ಪಕ್ಕಾ ಲವ್ ಸ್ಟೋರಿಯಂತೆ ಕಾಣುವ ಸಿನಿಮಾದ ಟ್ರೇಲರ್ ನೀವು ನೋಡಿಕೊಂಡು ಬನ್ನಿ... ಲಾಕ್ ಡೌನ್ ಕಾರಣಕ್ಕೆ ಚಿತ್ರವನ್ನು ಸದ್ಯಕ್ಕಂತೂ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹಾಟ್ ಸ್ಟಾರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬ ಮಾತುಗಳು ಇವೆ. ಏನೇ  ಇದ್ದರೂ ಸುಶಾಂತ್ ಅಭಿಮಾನಿಗಳು ನೆಚ್ಚಿನ ನಾಯಕನನ್ನು ಇನ್ನೊಮ್ಮೆ ತೆರೆಯ ಮೇಲೆ ನೋಡಬಹುದು. 

ಈ ಟ್ರೇಲರ್ ನೋಡುತ್ತಿದ್ದರೆ ನೀವು ನಮ್ಮಿಂದ ದೂರವಾಗಿದ್ದೀರಿ ಎಂದು ನಂಬಲು ಸಾಧ್ಯವೇ ಆಗುತ್ತಿಲ್ಲ, ನಿಮ್ಮ ಅಭಿನಯ ಎಂದೆಂದಿಗೂ ಮಾದರಿ, ಟ್ರೇಲರ್ ನೋಡುತ್ತಿದ್ದಂತೆ ನನ್ನ ಕಣ್ಣುಗಳು ಗೊತ್ತಿಲ್ಲದೆ ಒದ್ದೆಯಾದವು ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.