ಅತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ ನಟ ಸುಶಾಂತ್ ಸಿಂಗ್‌ ಅಭಿನಯ ನೋಡಲು ಪ್ರೇಕ್ಷಕರಿಗಿದ್ದ ಒಂದೇ ಅವಕಾಶ ಅಂದ್ರೆ 'ದಿಲ್ ಬೇಚಾರ' ಸಿನಿಮಾ. ಜುಲೈ 24ರಂದು ಸಂಜೆ 7.30ಗೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ ಆದ ಸಿನಿಮಾ ಒಂದು ದಿನದೊಳಗೆ ಅತಿ ಹೆಚ್ಚು ವೀಕ್ಷಣೆ ಮತ್ತು IMDB 10/10 ರೇಟಿಂಗ್ ಪಡೆದುಕೊಂಡಿದೆ.

ಮ್ಯಾನಿ ಪಾತ್ರದಲ್ಲಿ ಸುಶಾಂತ್ ಮತ್ತು ಕಿಜಿ ವಾಸು ಪಾತ್ರದಲ್ಲಿ ಸಂಜನಾ ಸಂಘಿ  ಅಭಿನಯಿಸಿದ್ದಾರೆ. ಈ ಹಿಂದೆ ಸುಶಾಂತ್ ಸಿನಿಮಾಗಳನ್ನು ನೋಡುತ್ತಿದ್ದ ರೀತಿ ತುಂಬಾನೇ ಡಿಫರೆಂಟ್‌ ಆಗಿತ್ತು. ಆದರೀಗ ಸುಶಾಂತ್‌ ಇಲ್ಲ ಎಂಬ ನೋವು ಎಲ್ಲರಿಗೂ ಸಿನಿಮಾ ನೋಡಲೇ ಬೇಕು ಎಂಬ ಮನಸ್ಥಿತಿಗೆ ತಂದಿದೆ.  ಚಿತ್ರದ ಮ್ಯಾನಿ ಪಾತ್ರ ಮತ್ತು ಸುಶಾಂತ್ ರಿಯಲ್‌ ಲೈಫ್‌ ಒಂದೇ ರೀತಿ ಇದ್ದ ಕಾರಣ ಸಹಜವಾಗಿಯೇ ಅಭಿನಯಿಸಿದ್ದಾರೆ. ಮ್ಯಾನಿ ಮತ್ತು ವಾಸು ಇಬ್ಬರಿಗೂ ಕ್ಯಾನ್ಸರ್‌ ಇದ್ದು, ಇಬ್ಬರು ಬದುಕುವುದು ಕೆಲವು ದಿನಗಳು ಮಾತ್ರ ಎಂದು ತಿಳಿದಿದ್ದರೂ, ಇಬ್ಬರೂ ಪ್ರೀತಿಸಲು ಆರಂಭಿಸುತ್ತಾರೆ. ಅದೂ ಗಾಢವಾಗಿ...

ಲವ್, ರೋಮ್ಯಾನ್ಸ್‌ ಮತ್ತು ಡ್ರಾಮ ಇರುವ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ರಿಲೀಸ್‌ ಆಗಿ ಒಂದು ದಿನ ಕಳೆದಿಲ್ಲ, ಆಗಲೇ 20 ಸಾವಿರಕ್ಕೂ ಹೆಚ್ಚು ಮಂದಿ ಸಿನಿಮಾಗೆ ರೇಟಿಂಗ್ ನೀಡಿದ್ದಾರೆ. ಈ ಹಿಂದೆ ಕಮಲ್ ಹಾಸನ್ ಮತ್ತು ಮಾಧವನ್ ಅಭಿನಯದ 'anbe sivam'ಗೆ ಇಂಥದ್ದೇ ರೆಸ್ಪಾನ್ಸ್ ಸಿಕ್ಕಿತ್ತು. 

ಪ್ರಧಾನಿ ಭೇಟಿ ಮಾಡಿದ ಸೆಲೆಬ್ರಿಟಿ ತಂಡದಲ್ಲಿ ಸುಶಾಂತ್‌ನನ್ನು ಬಿಟ್ಟಿದ್ದೇಕೆ? ಸಂಸದೆ ಪ್ರಶ್ನೆ 

2012ರಲ್ಲಿ ಜಾನ್‌ ಗ್ರೀನ್‌ ಬರೆದ 'The Fault in our stars'ಪುಸ್ತಕ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರಣ ಇದನ್ನು ಸಿನಿಮಾ ರೂಪದಲ್ಲಿ ತರಬೇಕೆಂದು ನಿರ್ದೇಶಕ ಮುಕೇಶ್‌ ಛಾಬ್ರಾ ನಿರ್ಧರಿಸಿ, ದಿಲ್ ಬೇಚಾರ ಸಿನಿಮಾ ಮಾಡಿದ್ದಾರೆ.  ಸುಮಾರು 1 ಗಂಟೆ 41 ನಿಮಿಷಗಳಿರುವ ಈ ಸಿನಿಮಾದಲ್ಲಿ ಸೈಫ್‌ ಅಲಿ ಖಾನ್‌ ಕೂಡ ಅಭಿನಯಿಸಿದ್ದಾರೆ. ಸುಶಾಂತ್ ಎಂಬ ಯುವ, ಪ್ರತಿಭಾನ್ವಿತನ ಅಭಿನಯನಕವನ್ನು ಸೈಫ್ ಸಹ ಮೆಚ್ಚಿಕೊಂಡಿದ್ದಾರೆ. 

IMDB ಅಂದ್ರೇನು?
ಸಿನಿಮಾ, ಟಿವಿ ಕಾರ್ಯಕ್ರಮಗಳು, ವೀಡಿಯೋಗಳು, ವೀಡಿಯೋ ಗೇಮ್ ಹಾಗೂ ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಕೆಲವು ಕಾರ್ಯಕ್ರಮಗಳಿಗೆ ನೀಡುವ ಮಾಹಿತಿಯೇ ಇಂಟರ್ನೆಟ್ ಮೂವಿ ಡೇಟಾಬೇಸ್. ಅಭಿಮಾನಿಗಳು ನೀಡುವ ರೇಟಿಂಗ್, ಕಮೆಂಟ್ಸ್ ಹಾಗೂ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ನಡೆಯುವ ಚಟುವಟಿಕೆಗಳ ಆಧಾರದ ಮೇಲೆ ಈ ರೇಟಿಂಗ್ ನೀಡಲಾಗುತ್ತದೆ. 83 ದಶಲಕ್ಷ ನೋಂದಾಯಿತರು ನೀಡುವ ಪ್ರತಿಕ್ರಿಯೆಯ ಆಧಾರದ ಮೇಲೆ ಅಮೇಜಾನ್ ಅಂಗ ಸಂಸ್ಥೆ IMDb.com ಈ ರೇಟಿಂಗ್ ನೀಡುತ್ತದೆ. 

ಚಿತ್ರಕ್ಕೆ ಸಹ ನಟರ ಪ್ರತಿಕ್ರಿಯೆ:
ಸುಶಾಂತ್ ಅವರ ಮೊದಲ ಚಿತ್ರ, ಎಂ.ಎಸ್.ಧೋನಿಯಲ್ಲಿ ತಂದೆಯ ಪಾತ್ರ ಮಾಡಿದ ಅನುಪಮ್ ಖೇರ್  ಈ ಚಿತ್ರದ ಪರ ಟ್ವೀಟ್ ಮಾಡಿ, ಎಲ್ಲರಿಗೂ ನೋಡಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಹಲವು ಬಾಲಿವುಡ್ ನಟ, ನಟಿಯರು ಈ ಚಿತ್ರದ ಪ್ರಮೋಷನ್‌ಗೆ ಸಹಕರಿಸಿದ್ದು, ಸುಶಾಂತ್ ಚಿತ್ರರಂಗವನ್ನು ಅಗಲಿ ತಿಂಗಳಾದರೂ ಈ ನಟನ ಗುಂಗಿನಲ್ಲಿಯೇ ಅಭಿಮಾನಿಗಳಿದ್ದಾರೆ. ಆದ್ದರಿಂದ ಈ ಚಿತ್ರಕ್ಕೆ ಮತ್ತಷ್ಟು ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. 

ಮತ್ತೆ ಶುರುವಾಗಲಿದೆ ಸುಶಾಂತ್ ಸಿಂಗ್ ಫೇವರೇಟ್ ಸೀರಿಯಲ್..!

ನಟಿ ಭೂಮಿ ಪಡ್ನೇಕರ್ ಸಹ ದಿಲ್ ಬೇಚಾರಾ ನೋಡಿ, ಸಿಕ್ಕಾಪಟ್ಟೆ ಭಾವುಕರಾಗಿ ತಮ್ಮ ಇನ್‌ಸ್ಟ್ರಾ ಗ್ರಾಂ ಸ್ಟೋರಿಯಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತವಾದ ಭಾವಭಿನಯ ಇರೋ ಈ ಚಿತ್ರ ನೋಡಿ ಅಳು ತಡೆಯಲು ಆಗಲಿಲ್ಲ. ಸುಶಾಂತ್ ನಟನೆಯಂತೂ ಅತ್ಯದ್ಭುತ. ಸೌಂದರ್ಯ ಹಾಗೂ ದುಃಖ ಎರಡೂ ಇರುವ ಚಿತ್ರವಿದು, ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Sonchiriya ಚಿತ್ರದಲ್ಲಿ ಸುಶಾಂತ್ ಜೊತೆ ಭೂಮಿ ತೆರೆ ಹಂಚಿಕೊಂಡಿದ್ದರು. 

ಜೂನ್ 14ರಂದು ಸುಶಾಂತ್ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಗೆಲಸದವರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದರು. ಬಿಹಾರ ಮೂಲದ ನಟ, ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಕೆಲವೇ ಸಮಯದಲ್ಲಿ ಮಾಡಿದ ಸಾಧನೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಎಂಜಿನಿಯರಿಂಗ್ ಎಂಟ್ರೆನ್ಸ್ ಪರೀಕ್ಷೆಯಲ್ಲಿ rank ಗಳಿಸಿದ ಸುಶಾಂತ್‌ಗೆ ಖಗೋಳ ವಿಜ್ಞಾನದಲ್ಲಿ ಬಹಳ ಆಸಕ್ತಿ ಇತ್ತು. ಅಲ್ಲದೇ ಚಂದ್ರನಲ್ಲಿ ಭೂಮಿಯನ್ನೂ ಖರೀದಿಸಿದ್ದರು. ವಿವಿಧ ವಿಷಯಗಳ ಮೇಲೆ ನಿರರ್ಗಳವಾಗಿ ಮಾತನಾಡುವ ಚಾಕಚಕ್ಯತೆಯೂ ಇದ್ದ ಪ್ರತಿಭಾನ್ವಿತನ ಸಾವಿಗೆ, ಬಾಲಿವುಡ್ ಕಂಬನಿ ಮಿಡಿಯುತ್ತಲೇ ಇದೆ. ಇಂಥ ನಟನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಂಥ ನಿರ್ಧಾರಕ್ಕೆ ಬರಲು ಬಾಲಿವುಡ್‌ನಲ್ಲಿರುವ ಸ್ವಜನಪತ್ರಪಾತವೇ ಕಾರಣ ಎಂದು ಹೇಳಲಾಗುತ್ತಿದ್ದು, ಇವತ್ತಿಗೂ ಈ ಬಗ್ಗೆ ವಾದ-ವಿವಾದಗಳು ನಡೆಯುತ್ತಲೇ ಇವೆ.