ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಬಂದಿದ್ದು, ಕಾರಿನಲ್ಲಿ ಬಾಂಬ್ ಸ್ಫೋಟಿಸುವ ಎಚ್ಚರಿಕೆ ನೀಡಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಸಾರಿಗೆ ಇಲಾಖೆಯ ವಾಟ್ಸಾಪ್ ನಂಬರ್‌ಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ವರ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಕೂಡ ಸಲ್ಮಾನ್ ಖಾನ್‌ಗೆ ಹಲವು ಬಾರಿ ಬೆದರಿಕೆಗಳು ಬಂದಿದ್ದು, ಮನೆಯ ಭದ್ರತೆಯನ್ನು ಹೆಚ್ಚಿಸಲಾಗಿದೆ.
Salman Khan Death Threat Car Bomb Warning : ಸಲ್ಮಾನ್ ಖಾನ್‌ಗೂ, ಕೊಲೆ ಬೆದರಿಕೆಗೂ ಒಂಥರ ನಂಟು ಎನ್ನುವ ಹಾಗೆ ಆಗಿದೆ. ಅದರಲ್ಲೂ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಗೆ ನುಗ್ಗಿ ಕೊಲೆ ಮಾಡುವ ಬೆದರಿಕೆ ಹೊಸದಾಗಿ ಬಂದಿದೆ. ಕಾರಿನಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯನ್ನೂ ಹಾಕಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಸಾರಿಗೆ ಇಲಾಖೆಯ ವಾಟ್ಸಾಪ್ ನಂಬರ್‌ಗೆ ಈ ಬೆದರಿಕೆ ಹಾಕಿದ್ದಾನೆ. ವರ್ಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾರಿನಲ್ಲಿ ಬಾಂಬ್ ಸ್ಫೋಟಿಸುವ ಎಚ್ಚರಿಕೆ
ಬಾಲಿವುಡ್‌ನ ದಬಾಂಗ್ ಖಾನ್ ಎಂದು ಕರೆಯಲ್ಪಡುವ ಈ ನಟನ ಅದೃಷ್ಟ ಸರಿ ಇಲ್ಲ ಎನಿಸುತ್ತಿದೆ. ಅವರ ಸಿಕಂದರ್ ಸಿನಿಮಾ ಕೂಡ ಸಾಧಾರಣಕ್ಕಿಂತ ಕಡಿಮೆ ಗಳಿಕೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಅವರ ಸಿನಿಮಾಗಳು ಸತತವಾಗಿ ಸೋಲುತ್ತಿವೆ. ಮತ್ತೊಂದೆಡೆ, ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಬಿಡುಗಡೆಗೊಂಡ ನಂತರ ರಾಜಸ್ಥಾನದ ಕುಖ್ಯಾತ ಲಾರೆನ್ಸ್ ಬಿಶ್ನೋಯ್ ಗ್ಯಾಂಗ್ ಅವರ ಪ್ರಾಣದ ಬೆನ್ನು ಹತ್ತಿದೆ. ಕಳೆದ ವರ್ಷ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ಆದಾಗ್ಯೂ, ಅದು ಕೇವಲ ಎಚ್ಚರಿಕೆಯಾಗಿತ್ತು. ಈಗ ಸಾರಿಗೆ ಇಲಾಖೆಯ ವಾಟ್ಸಾಪ್ ನಂಬರ್‌ಗೆ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಬಾಂಬ್ ಸ್ಫೋಟಿಸಿ ಕೊಲ್ಲುವುದಾಗಿ ಹೇಳಲಾಗಿದೆ. ಇದರ ನಂತರ ಸಲ್ಮಾನ್ ಖಾನ್ ಮನೆಯ ಭದ್ರತೆಯನ್ನು ಹೆಚ್ಚಿಸಲಾಗಿದೆ.
Sikandar Review: ʼಮುರುಗದಾಸ್ ಮೋಸ ಮಾಡಿದ್ರುʼ-ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಸಿನಿಮಾ ಬಗ್ಗೆ ಎಂಥ ಮಾತು?
ಪೊಲೀಸರಿಂದ ತನಿಖೆ
ಸಲ್ಮಾನ್‌ಗೆ ಬಂದ ಬೆದರಿಕೆಯ ಬಗ್ಗೆ ಪೊಲೀಸರು ಮೊದಲು ಈ ಎಚ್ಚರಿಕೆ ಲಾರೆನ್ಸ್ ಬಿಶ್ನೋಯ್ ಕಡೆಯಿಂದ ಬಂದಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಯಾರೂ ಇದರ ಜವಾಬ್ದಾರಿಯನ್ನು ಹೊತ್ತಿಲ್ಲ. ಇದು ತಮಾಷೆಯಾಗಿರಬಹುದು ಅಥವಾ ಜನಪ್ರಿಯತೆ ಗಳಿಸಲು ಮಾಡಿದ ಸ್ಟಂಟ್ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೂ, ಪೊಲೀಸರು ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
ಸಲ್ಮಾನ್ ಖಾನ್‌ಗೆ ನಿರಂತರ ಬೆದರಿಕೆಗಳು
2024 ರಲ್ಲಿ ಸಲ್ಮಾನ್ ಖಾನ್‌ಗೆ ಬಿಶ್ನೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಬಂದಿತ್ತು, ಅದರಲ್ಲಿ ಅವರು ಬಿಶ್ನೋಯ್ ಸಮಾಜದ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಮತ್ತು ಐದು ಕೋಟಿ ಪರಿಹಾರ ನೀಡಬೇಕು ಎಂದು ಹೇಳಲಾಗಿತ್ತು. ನಂತರ ಅಕ್ಟೋಬರ್ 30 ರಂದು ಮತ್ತೆ ಬೆದರಿಕೆ ಹಾಕಿ 2 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿತ್ತು. ಕಳೆದ ವರ್ಷ ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಗುರುತಿನ ಚೀಟಿ ಬಳಸಿ ಅವರ ಪನ್ವೇಲ್ ಫಾರ್ಮ್‌ಹೌಸ್‌ಗೆ ನುಗ್ಗಲು ವಿಫಲ ಯತ್ನ ನಡೆಸಿದ್ದರು. ಆದರೆ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಇಬ್ಬರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ದುಬಾರಿ ಬೆಲೆಯ ಅಯೋಧ್ಯೆ ರಾಮಜನ್ಮಭೂಮಿ ಸ್ಪೆಷಲ್ ಎಡಿಷನ್ ವಾಚ್ ಧರಿಸಿದ ಸಲ್ಮಾನ್ ಖಾನ್, ಫೋಟೋ ವೈರಲ್!
ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್ ಸಿನಿಮಾಕ್ಕೆ ಸೋಲು
ಸಲ್ಮಾನ್ ಖಾನ್ ಅವರು ರಶ್ಮಿಕಾ ಮಂದಣ್ಣ ಜೊತೆಗೆ ʼಸಿಕಂದರ್ʼ ಸಿನಿಮಾದಲ್ಲಿ ನಟಿಸಿದ್ದರು. ಸಲ್ಮಾನ್ ಖಾನ್ ಜೊತೆ ರಶ್ಮಿಕಾ ನಟಿಸಿರೋದು ಕನ್ನಡಿಗರಿಗೂ ಹೆಮ್ಮೆಯ ವಿಷಯ. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿತು. ಮೊದಲ ವಾರವೇ ಸೋತ ಈ ಚಿತ್ರವನ್ನು ಥಿಯೇಟರ್‌ನಿಂದ ಎತ್ತಗಂಡಿ ಮಾಡಲಾಯ್ತು. ಬಾಲಿವುಡ್‌ನಲ್ಲಿ ಈ ಹಿಂದೆ ರಣಬೀರ್ ಕಪೂರ್ ಜೊತೆ ʼಆನಿಮಲ್ʼ ಸಿನಿಮಾದಲ್ಲಿ ನಟಿಸಿದ್ದಾಗ ಹಿಟ್ ಕೊಟ್ಟಿದ್ದ ರಶ್ಮಿಕಾ ಈ ಬಾರಿ ಸೋಲುಂಡಿದ್ದಾರೆ. ಸಲ್ಮಾನ್ ಖಾನ್ ಅವರು ಕಿರುತೆರೆಯ ಬಿಗ್ ಬಾಸ್ ಶೋ ಕೂಡ ನಡೆಸಿಕೊಡುತ್ತಿದ್ದು, ಇನ್ನು ಮುಂಬರುವ ದಿನಗಳಲ್ಲಿ ಯಾವ ರೀತಿ ಸಿನಿಮಾ ಮಾಡ್ತಾರೆ ಎಂದು ಕಾದು ನೋಡಬೇಕಿದೆ.
