Asianet Suvarna News Asianet Suvarna News

Unkissed Girl: ಅನ್​ಕಿಸ್ಡ್ ಗರ್ಲ್ ಆಫ್ ಇಂಡಿಯಾ ಬಿರುದು ಪಡೆದ ಬಾಲಿವುಡ್​ ತಾರೆಯ ರೋಚಕ ಕಥೆ

50-60ರ ದಶಕದಲ್ಲಿ ಬಾಲಿವುಡ್ ಆಳಿದ ನಟಿ ನಿಮ್ಮಿ ಅವರನ್ನು ಮುತ್ತು ಇಡಲು ನಿರಾಕರಿಸಿದ ಭಾರತದ ಹುಡುಗಿ ಎಂದು ಬಿರುದು ನೀಡಲಾಯಿತು. ಇದಕ್ಕೆ ಕಾರಣವೇನು? 
 

Bollywood superstar Nimmi  called as The Unkissed Girl of India
Author
First Published Feb 19, 2023, 3:23 PM IST | Last Updated Feb 19, 2023, 3:23 PM IST

1950-60ರ ಸಮಯದಲ್ಲಿ ಸಿನಿಮಾ ಜಗತ್ತಿನಲ್ಲಿ ಹೆಣ್ಣೊಬ್ಬಳು (Lady) ಪ್ರವೇಶ ಮಾಡುತ್ತಿದ್ದಾಳೆ ಎಂದರೆ ಆಕೆಯನ್ನು ನೋಡುವ ರೀತಿಯೇ ಬೇರೆಯಾಗಿತ್ತು. ಸಂಸಾರಸ್ಥರು, ಕುಟುಂಬಸ್ಥರು ಯಾರೂ ಬೆಳ್ಳಿತೆರೆಯ ಮೇಲೆ ಬಣ್ಣಹಚ್ಚಿ ಪರ ಪುರುಷನ ಜೊತೆ ಕಾಣಿಸಿಕೊಳ್ಳುತ್ತಿದ್ದಾಳೆ ಎನ್ನುವುದನ್ನು ಊಹಿಸಿಕೊಳ್ಳುವುದೂ ಕಷ್ಟವಾಗಿತ್ತು. ಅದರ ಹೊರತಾಗಿಯೂ ಚಿತ್ರರಂಗವನ್ನು ಆಳಿದ ನಟಿಯರಿಗೇನೂ ಕೊರತೆಯಿಲ್ಲ. ಅದರಲ್ಲಿಯೂ ಮುಸ್ಲಿಂ ಹೆಣ್ಣು ಮಗಳೊಬ್ಬಳು ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಾಳೆ ಎಂದರೆ ಕನಸಿನಲ್ಲಿಯೂ ಊಹಿಸಿಕೊಳ್ಳಲು ಸಾಧ್ಯವಾಗದ ಆ ಹೊತ್ತಿನಲ್ಲಿ, ಬಾಲಿವುಡ್​ನಲ್ಲಿ ಆಳವಾಗಿ ನೆಲೆಯೂರಿ ನಿಂತು ಬಾಲಿವುಡ್​ ಕ್ವೀನ್​ (Bollywood queen) ಎಂಬ ಪಟ್ಟವನ್ನು ದಕ್ಕಿಸಿಕೊಂಡ ಬೊಗಸೆ ಕಣ್ಣುಗಳ ಚೆಲುವೆ ನವಾಬ್​ ಬಾನು. ಬಹುಶಃ ನವಾಬ್​ ಬಾನು (Nawab Banu) ಎಂದರೆ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಏಕೆಂದರೆ ಅಂದಿನ ಸೂಪರ್​ಸ್ಟಾರ್​ ರಾಜ್​ಕಪೂರ್​ ಅವರು ಈಕೆಯ ಹೆಸರನ್ನು ನಿಮ್ಮಿ ಎಂದು ಬದಲಾಯಿಸಿದರು. ಅಂದಿನಿಂದ ಸದಾ ನವಾಬ್​ ಬಾನು ನಿಮ್ಮಿಯಾಗಿಯೇ ಚಿತ್ರರಂಗಕ್ಕೆ ಪರಿಚಯದವರು.

'ಆನ್'​, 'ಬರ್ಸಾತ್' ​ಹಾಗೂ 'ದೀದಾರ್'​ ಸಿನಿಮಾಗಳಲ್ಲಿ ನಿಮ್ಮಿ ನಟಿಸಿದ್ದಾರೆ. 'ಅಂದಾಜ್'​ ಸಿನಿಮಾದ ಸೆಟ್​ನಲ್ಲಿ ನಿಮ್ಮಿಯನ್ನು ರಾಜ್​ ಕಪೂರ್​ ಮೊದಲ ಬಾರಿಗೆ ನೋಡಿದ್ದರು. ಹೆಸರಿಕೊಂಡಿದ್ದ ಯುವತಿಯನ್ನು ನೋಡಿದ್ದ ರಾಜ್​ಕಪೂರ್​ (Raj Kapoor) ಅವರು 1949ರಲ್ಲಿ ಬರ್ಸಾತ್​ ಸಿನಿಮಾದಲ್ಲಿ ಎರಡನೇ ನಾಯಕಿ ಪಾತ್ರದಲ್ಲಿ ನಟಿಸುವ ಅವಕಾಶ ನೀಡಿದ್ದರು 'ಬರ್ಸಾತ್' ಸಿನಿಮಾದ ಯಶಸ್ಸಿನ ನಂತರ ನಿಮ್ಮಿ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಆಗಿನ ಕಾಲದ ಟಾಪ್​ ನಟರಾದ ದಿಲೀಪ್​ ಕುಮಾರ್, ರಾಜ್​ ಕಪೂರ್​, ದೇವ್​ ಆನಂದ್​ ಹಾಗೂ ಅಶೋಕ್​ ಕುಮಾರ್​ ಅವರೊಂದಿಗೆ ತೆರೆ ಹಂಚಿಕೊಂಡವರು. ನಿಮ್ಮಿ ಅವರಿಗೆ ಬಹು ಯಶಸ್ಸು ತಂದುಕೊಟ್ಟ ಚಿತ್ರ 'ಸಜಾ', 'ಆನ್', 'ಭಾಯ್​ ಭಾಯ್',​' ಕುಂದನ್', 'ಮೇರೆ ಮೆಹೆಬೂಬ್'​, 'ಪೂಜಾ ಕಿ ಫೂಲ್'​, 'ಆಕಾಶ್​ದೀಪ್' ಹಾಗೂ ​' ಲವ್​ ಆ್ಯಂಡ್​ ಗಾಡ್'​ ಸಿನಿಮಾಗಳು.  'ಲವ್ ​ಆ್ಯಂಡ್​ ಗಾಡ್'​ ಅವರ ಅಭಿನಯದ ಕೊನೆಯ ಸಿನಿಮಾ. ಸಿನಿಮಾ ಬಿಟ್ಟ ನಂತರ ನಿಮ್ಮಿ ನಿರ್ದೇಶಕ ಎಸ್.​ ಅಲಿ ರಜಾ ಅವರನ್ನು ವಿವಾಹವಾಗಿದ್ದರು.  2007ರಲ್ಲಿ ಅವರ ಪತಿ ಮರಣ ಹೊಂದಿದರು.

Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್​ ಅನುಶ್ರೀ ಬಾಯಲ್ಲಿ!

1949ರಲ್ಲಿ ಬಿಡುಗಡೆಯಾಗಿದ್ದ ಬರಾಸತ್ ಸಿನಿಮಾದಲ್ಲಿ ನಿಮ್ಮಿ (Nimmi) ಹೀರೋಯಿನ್ ಆಗಿದ್ದರು. ಈ ಸಿನಿಮಾದಲ್ಲಿನ ಮೂರು ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು. ನಿಮ್ಮಿ ಅವರು ನಮ್ಮನ್ನು ಅಗಲಿ ಇನ್ನು ಕೆಲವೇ ದಿನಗಳಲ್ಲಿ ಮೂರು ವರ್ಷಗಳಾಗಲಿವೆ. ಅವರು ತಮ್ಮ 87ನೇ ವಯಸ್ಸಿನಲ್ಲಿ 2020ರ ಮಾರ್ಚ್​ ತಿಂಗಳಿನಲ್ಲಿ ಕೊನೆಯುಸಿರೆಳೆದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ  ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. 

ಅವರ ಪುಣ್ಯಸ್ಮರಣೆಯ ಹೊಸ್ತಿನಲ್ಲಿ, ಅವರ ಬಗೆಗಿನ ಕುತೂಹಲದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಅದೇನೆಂದರೆ, ನಿಮ್ಮಿ ಅವರನ್ನು  'ಅನ್​ಕಿಸ್ಡ್ ಗರ್ಲ್ ಆಫ್ ಇಂಡಿಯಾ' (ಭಾರತದ ಚುಂಚನರಹಿತ ಹುಡುಗಿ)  ಎಂದು ಕರೆಯಲಾಗುತ್ತಿತ್ತು ಎನ್ನುವುದು. ಹೌದು.  ಈಕೆ ಮುತ್ತು ನೀಡಲು ನಿರಾಕರಿಸಿದ್ದೇ ಇಂಥದ್ದೊಂದು ಬಿರುದು ಬರಲು ಕಾರಣ ಎನ್ನಲಾಗಿದೆ. ಅಷ್ಟಕ್ಕೂ ಈಕೆ ನಾಯಕನಿಗೆ ಪರದೆಯ ಮೇಲೆ ಚುಂಬಿಸಲು ನಿರಾಕಸಿದ್ದಲ್ಲ ಮತ್ತೆ. ಈಗಿನ ನಾಯಕಿಯರಿಗೆ ಚುಂಬನ, ಪ್ರಣಯ ದೃಶ್ಯಗಳು ಸಾಮಾನ್ಯ. ಕೆಲವೊಮ್ಮೆ ದಾಖಲೆ ಮಾಡುವುದಕ್ಕಾಗಿಯೇ ಜಿದ್ದಿಗೆ ಬಿದ್ದವರಂತೆ ನಾಯಕನ ತುಟಿಗೆ ಚುಂಬಿಸುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಉಂಟು. ಆದರೆ ನಿಮ್ಮಿ ವಿಷಯದಲ್ಲಿ ಹಾಗಲ್ಲ. ಆದರೂ ಈಕೆಗೆ ಅನ್​ಕಿಸ್ಡ್​ ಗರ್ಲ್​ (Unkissed Girl of India) ಎಂಬ ಬಿರುದು ಬಂದಿರುವ ಹಿಂದು ಕುತೂಹಲದ ಕಾರಣವಿದೆ. 

ಮೆಹಬೂಬ್ ಖಾನ್ 'ಆನ್' (1952) ಚಿತ್ರದಲ್ಲಿ ನಿಮ್ಮಿ ನಾಯಕಿಯಾಗಿ ನಟಿಸಿದ್ದರು. ಆಗಿನ ಕಾಲದಲ್ಲಿಯೇ ದೊಡ್ಡ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲಾಗಿದೆ.  ಆ ಸಮಯದಲ್ಲಿ ಇವರು ಉತ್ತುಂಗದಲ್ಲಿದ್ದರು. ವಿಶ್ವಾದ್ಯಂತ ಬಿಡುಗಡೆಯಾದ ಮೊದಲ ಭಾರತೀಯ ಚಲನಚಿತ್ರಗಳಲ್ಲಿ 'ಆನ್' ಕೂಡ ಒಂದು. ಲಂಡನ್‌ನಲ್ಲಿ ಚಿತ್ರವು ತನ್ನ ಅದ್ಧೂರಿ ಪ್ರಥಮ ಪ್ರದರ್ಶನವನ್ನು ಹೊಂದಿತ್ತು, ನಿಮ್ಮಿ ಇದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ  ನಿಮ್ಮಿ ವೆಸ್ಟರ್ನ್ ಹೀರೋ ಎರೋಲ್ ಫ್ಲಿನ್ ಅವರನ್ನು ಭೇಟಿಯಾದರು. ನಟ ತಮ್ಮ ಸಂಸ್ಕೃತಿಯಂತೆ ನಿಮ್ಮಿ ಕೈಗೆ ಮುತ್ತು ನೀಡಲು ಪ್ರಯತ್ನಿಸಿದ್ದರು. ಆದರೆ ನಿಮ್ಮಿ ಅದರನ್ನು ನಿರಾಕರಿಸಿದ್ದರು. ಇದು ಆಗ ಬಹಳ ಸುದ್ದಿಯಾಗಿತ್ತು. ಭಾರತೀಯ ನಟಿಯರ ಬಗ್ಗೆ ಗೌರವ ಹೆಚ್ಚಾಗಿತ್ತು. ಕೈಗೆ ಮುತ್ತಿಡುವುದಕ್ಕೂ ಒಪ್ಪದ ನಟಿಯನ್ನು ಉನ್ನತ ಸ್ಥಾನದಲ್ಲಿ ಜನ ನೋಡಲು ಶುರು ಮಾಡಿದ್ದರು. ಆಗಲೇ ಅವರಿಗೆ ಮುತ್ತುರಹಿತ ನಟಿ (Actress) ಎಂಬ ಬಿರುದು ಬಂತು. 

ನಾವಿಬ್ರೂ ಏನಾದ್ರೂ ಮಾಡ್ಕೋತೀವಿ, ನಿಮಗ್ಯಾಕೆ? ನರೇಶ್​ ಕಿಡಿ: ಪೊಲೀಸರಿಗೆ ದೂರು

Latest Videos
Follow Us:
Download App:
  • android
  • ios