Bollywood Super Star: ಒಬ್ಬ ಸೂಪರ್‌ಸ್ಟಾರ್ ನಟ 3 ವರ್ಷಗಳಲ್ಲಿ 17 ಹಿಟ್ ಚಿತ್ರಗಳನ್ನು ನೀಡಿದ್ದರು. ಮಹಿಳೆಯರು ಆ ನಟನ ಕಾರಿನ ಧೂಳನ್ನು ತಿಲಕದಂತೆ ಹಚ್ಚಿಕೊಳ್ಳುತ್ತಿದ್ದರು. 70-90ರ ದಶಕದಲ್ಲಿ ಅಭಿಮಾನಿಗಳು ಕಲಾವಿದರನ್ನು ದೇವರಂತೆ ಪೂಜಿಸುತ್ತಿದ್ದರು.

ಮುಂಬೈ: ಬಾಲಿವುಡ್‌ ಅಂಗಳದಲ್ಲಿ ಹಲವು ಸೂಪರ್ ಸ್ಟಾರ್‌ಗಳಿದ್ದಾರೆ. ಸ್ಟಾರ್‌ಡಮ್ ಏನು ಅಂತ ನೋಡಬೇಕಾದ್ರೆ ನೀವು 1970-90ರ ಕಾಲಘಟ್ಟದ ಬಗ್ಗೆ ತಿಳಿದುಕೊಳ್ಳಬೇಕು. 70-90ರ ದಶಕದಲ್ಲಿ ಕಲಾವಿದರನ್ನು ದೇವರ ರೂಪದಲ್ಲಿ ಕಾಣುತ್ತಿದ್ದರು. ತಮ್ಮೂರಿನ ಸುತ್ತಮುತ್ತ ಚಿತ್ರೀಕರಣ ನಡೆಯುವ ವಿಷಯ ತಿಳಿದ್ರೆ ಮೈಲುಗಳಷ್ಟು ದೂರ ನಡೆದುಕೊಂಡು ಬರುತ್ತಿದ್ದರು. ನಟರಿಗಾಗಿ ಏನು ಮಾಡಲು ಸಹ ಸಿದ್ಧವಿರುತ್ತಿದ್ದರು. ಇಂದು ನಾವು ಹೇಳುತ್ತಿರುವ ಸೂಪರ್ ಸ್ಟಾರ್ ನಟ 3 ವರ್ಷದಲ್ಲಿ 17 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಟನ ಕಾರ್ ಮೇಲಿನ ಧೂಳನ್ನು ಮಹಿಳೆಯರು ಹಣೆಗೆ ತಿಲಕವಾಗಿ ಹಚ್ಚಿಕೊಳ್ಳುತ್ತಿದ್ದರು. 

3 ವರ್ಷದಲ್ಲಿ 17 ಸೂಪರ್ ಹಿಟ್ ಸಿನಿಮಾ ನಟನ ಬಗ್ಗೆ ಸದ್ಯ ನಮ್ಮೆಲ್ಲರೊಂದಿಗಿರುವ ಲಿವಿಂಗ್ ಲೆಜೆಂಡ್ ಅಮಿತಾಬ್ ಬಚ್ಚನ್ ಹಲವು ಬಾರಿ ಹೇಳಿದ್ದಾರೆ. 1970ರ ಕಾಲಘಟ್ಟದ ಚಿತ್ರೀಕರಣ ಮತ್ತು ಅಭಿಮಾನಿಗಳ ಅಭಿಮಾನದ ಬಗ್ಗೆ ಹೇಳುತ್ತಿರುತ್ತಾರೆ. ನಟನ ಕಾರ್‌ ಟಯರ್ ಮೇಲಿನ ಧೂಳು ಸಂಗ್ರಹಿಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದರು. ಅಭಿಮಾನಿಗಳು ದೇವರು ಎಂದು ಕಾಣುತ್ತಿದ್ದ ನಟನ ಹೆಸರು ರಾಜೇಶ್ ಖನ್ನಾ. 

1974ರಲ್ಲಿ ರಾಜೇಶ್ ಖನ್ನಾ ಜೀವನಾಧರಿತ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗಿತ್ತು. ಈ ಸಾಕ್ಷ್ಯಚಿತ್ರಕ್ಕೆ 'ಬಾಂಬ್ ಸೂಪರ್‌ಸ್ಟಾರ್ ಎಂದು ಹೆಸರಿಡಲಾಗಿತ್ತು. 1970 ರಿಂದ 1980ರ ಕಾಲಘಟ್ಟದಲ್ಲಿ ರಾಜೇಶ್ ಖನ್ನಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. 1966ರಲ್ಲಿ ಬಿಡುಗಡೆಗೊಂಡ 'ಆಖಾರಿ ಖತ್' ಸಿನಿಮಾ ಮೂಲಕ ರಾಜೇಶ್ ಖನ್ನಾ ತಮ್ಮ ಸಿನಿ ಕೆರಿಯರ್ ಆರಂಭಿಸಿದ್ದರು. ಒಂದೇ ವರ್ಷದಲ್ಲಿ ಭಾರತದಿಂದ ಆಸ್ಕರ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದರು. ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ರಾಜೇಶ್‌ ಖನ್ನಾ ಅವರ ಸ್ಟಾರ್‌ಡಮ್ ಹೇಗಿತ್ತು ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. 

ಇದನ್ನೂ ಓದಿ: 1 ನಿಮಿಷವೂ ನಿಮಗೆ ಬೋರ್ ಆಗಲ್ಲ; 32 ಕೋಟಿಯ ಸಿನಿಮಾ ಗಳಿಸಿದ್ದು ಬರೋಬ್ಬರಿ 456 ಕೋಟಿ 

ಅಮಿತಾಬ್ ಬಚ್ಚನ್ ಹೇಳಿದ್ದೇನು?
ಜಂಜೀರ್ ಸಿನಿಮಾ ನನ್ನ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತ್ತು. ಜಂಜೀರ್ ಸಿನಿಮಾಗೆ ಮೊದಲ ಆಯ್ಕೆ ರಾಜೇಶ್ ಖನ್ನಾ ಆಗಿದ್ದರು. ಆದ್ರೆ ಸಲೀಮ್ -ಜಾವೇದ್‌ ಅವರಿಗೆ ಅಮಿತಾಬ್ ಬಚ್ಚನ್ ಅವರನ್ನು ತೆಗೆದುಕೊಳ್ಳುವಂತೆ ಹೇಳಿದ್ದರು. ಜಂಜೀರ್ ಸಿನಿಮಾ ಸೂಪರ್ ಹಿಟ್ ಆಯ್ತು. ರಾಜೇಶ್ ಖನ್ನಾ ಅಂದಿನ ಕಾಲದ ಮಹಾನಾಯಕ ಮತ್ತು ಸೂಪರ್ ಸ್ಟಾರ್ ಆಗಿದ್ದರು ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ. ರಾಜೇಶ್ ಖನ್ನಾ ಫ್ಯಾನ್ ಫಾಲೋಯಿಂಗ್ ಬಗ್ಗೆಯೂ ಅಮಿತಾಬ್ ಬಚ್ಚನ್ ಮಾತನಾಡಿದ್ದಾರೆ. ರಾಜೇಶ್ ಖನ್ನಾ ಬರುತ್ತಿದ್ದ ಕಾರ್‌ ಟಯರ್ ಮೇಲಿನ ಧೂಳನ್ನು ತೆಗೆದುಕೊಳ್ಳುತ್ತಿದ್ದ ಮಹಿಳೆಯರು ಅದನ್ನು ಆಶೀರ್ವಾದದ ರೂಪದಂತರೆ ಹಣೆಗೆ ಹಚ್ಚಿಕೊಳ್ಳುತ್ತಿದ್ದರು. 

ಇದನ್ನೂ ಓದಿ: ಒಂದಲ್ಲ, ಎರಡಲ್ಲ ಬರೋಬ್ಬರಿ 180 ಫ್ಲಾಪ್ ಸಿನಿಮಾ ಕೊಟ್ಟ ನಟ; ಇವರ ಹೆಸರಿನಲ್ಲಿದೆ ಸಿನಿ ಅಂಗಳದ ಕೆಟ್ಟ ದಾಖಲೆ

View post on Instagram