Rs 456 Crore Box Office Collection: ಕೇವಲ 32 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಒಂದು ಸಿನಿಮಾ ಬರೋಬ್ಬರಿ 456 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ತುಂಬಾ ವಿಭಿನ್ನವಾಗಿದ್ದರಿಂದ ಜನರು ಚಿತ್ರಮಂದಿರದತ್ತ ಓಡೋಡಿ ಬಂದಿದ್ದರು.
ಮುಂಬೈ: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ ಸಿನಿಮಾ ಎಲ್ಲರನ್ನು ಇಂಪ್ರೆಸ್ ಮಾಡಿತ್ತು. ದೃಶ್ಯ ಮತ್ತು ಅದರ ಮುಂದುವರಿದ ಎರಡನೇ ಭಾಗ ಕೊನೆಯವರೆಗೂ ಸಸ್ಪೆನ್ಸ್ ನೀಡುತ್ತಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಈ ಸಿನಿಮಾ ನೋಡುವಾಗ ಯಾವುದೇ ದೃಶ್ಯ, ಪಾತ್ರ ವೀಕ್ಷಕರಿಗೆ ಬೇಸರವನ್ನುಂಟು ಮಾಡಿರಲ್ಲಿಲ್ಲ.ಅಷ್ಟು ಅಚ್ಚುಕಟ್ಟಾಗಿ ಚಿತ್ರವನ್ನು ಪರದೆ ಮೇಲೆ ತರಲಾಗಿತ್ತು. ಅಂತಹುದೇ ಒಂದು ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ನಿಮಗೆ 1 ನಿಮಿಷ ಸಹ ಬೇಸರವನ್ನುಂಟು ಮಾಡಲ್ಲ. ಕೇವಲ 32 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ, ಈ ಸಿನಿಮಾ 456 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
2 ಗಂಟೆ 19 ನಿಮಿಷ ಈ ಸಿನಿಮಾದಲ್ಲಿನ ಬಾಲಿವುಡ್ ಚೆಲುವೆ ತಬು ನಟನೆ ಕಂಡು ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ತಬು ನಟಿಸಿದ ಪಾತ್ರ ಎಲ್ಲರ ಗಮನವನ್ನು ಸೆಳೆದಿತ್ತು. ತಬು ಜೊತೆಯಲ್ಲಿ ಪ್ರತಿಭಾನ್ವಿತ ನಟ ಆಯುಷ್ಮಾನ್ ಖುರಾನಾ, ನಟಿ ರಾಧಿಕಾ ಆಪ್ಟೆ ಸಹ ಕಾಣಿಸಿಕೊಂಡಿದ್ದರು. ಗಟ್ಟಿಯಾದ ಕಥೆಯೇ ಈ ಚಿತ್ರ ಜೀವಾಳವಾಗಿತ್ತು. ಇಷ್ಟೊತ್ತು ನಾವು ಹೇಳುತ್ತಿರುವ ಸಿನಿಮಾ ಹೆಸರು ಅಂಧಾಧುನ್.
ಇದನ್ನೂ ಓದಿ: ತವರಿನಿಂದ ದೂರವಾದ ಪ್ರತಿಯೊಬ್ಬ ಮಹಿಳೆಯೂ ನೋಡಬೇಕಾದ ಕಿರುಚಿತ್ರ
ಅಂಧಾಧುನ್ 2018ರಲ್ಲಿ ಬಿಡುಗಡೆಯಾದ ಉತ್ತಮ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿದೆ. ಕುರುಡನ ಪಾತ್ರದಲ್ಲಿ ನಟಿಸಿರುವ ಆಯುಷ್ಮಾನ್ ಖುರಾನಾ ನಟನೆಗೆ ಎಲ್ಲರಿಂದಲೂ ವ್ಯಾಪಕ ಪ್ರಶಂಸೆ ಸಿಕ್ಕಿತ್ತು. ಆಯುಷ್ಮಾನ್ ನಟನೆಯ ಉತ್ತಮ ಪಾತ್ರಗಳಲ್ಲಿ ಇದು ಸಹ ಒಂದಾಗಿದೆ. ಸದಾ ವಿಭಿನ್ನ ಕಥೆಗಳನ್ನೇ ಆಯ್ಕೆ ಮಾಡುವ ಮೂಲಕ ಬಾಲಿವುಡ್ ಅಂಗಳದಲ್ಲಿ ಆಯುಷ್ಮಾನ್ ಖುರಾನಾ ಭಿನ್ನವಾಗಿ ನಿಲ್ಲುತ್ತಾರೆ. ಇದೇ ಸಾಲಿನಲ್ಲಿಯೇ ನಟಿ ರಾಧಿಕಾ ಆಪ್ಟೆ ಸಹ ಬರುತ್ತಾರೆ. ಹಲವು ಸಿನಿಮಾಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ರಾಧಿಕಾ ಆಪ್ಟೆ ಸಾಬೀತು ಮಾಡಿದ್ದಾರೆ.
ಆಯುಷ್ಮಾನ್ ಖುರಾನಾ ಮತ್ತು ರಾಧಿಕಾ ಅಪ್ಟೆ ಅಂತಹ ಪ್ರತಿಭಾನ್ವಿತ ಕಲಾವಿದರು ನಟಿಸಿದ ಅಂಧಾಧುನ್ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ನೋಡುಗರಿಗೆ ಒಂದೇ ಒಂದು ನಿಮಿಷವೂ ಬೇಸರ ಅಥವಾ ನಿರಾಶೆ ಉಂಟಾಗದಂತೆ ನಿರ್ದೇಶಕ ಶ್ರೀರಾಮ್ ರಾಘವನ್ ತೆರೆಯ ಮೇಲೆ ತಂದಿದ್ದರು. ಈ ಸಿನಿಮಾದ ಕ್ಲೈಮ್ಯಾಕ್ಸ್ ತುಂಬಾ ವಿಭಿನ್ನವಾಗಿ ತೋರಿಸಿದ್ದರಿಂದಲೇ ಅಂಧಾಧುನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಅಂಧಾಧುನ್ ಯಶಸ್ಸಿನ ಮೂರು ಭಾಷೆಗಳಲ್ಲಿ ಸಿನಿಮಾ ರಿಮೇಕ್ ಆಗಿದೆ. ಪ್ರೈಮ್ ವಿಡಿಯೋದಲ್ಲಿ ಅಂಧಾಧುನ್ ಸಿನಿಮಾ ವೀಕ್ಷಿಸಬಹುದು. IMDB ಈ ಸಿನಿಮಾಗೆ 8.2 ರೇಟಿಂಗ್ ನೀಡಿದೆ.
ಇದನ್ನೂ ಓದಿ: 175 ಕೋಟಿ ಕಲೆಕ್ಷನ್, 68 ಅವಾರ್ಡ್; ಈ ಸಿನಿಮಾದಲ್ಲಿರಲಿಲ್ಲ ಹೀರೋಗೆ ಒಂದೇ ಒಂದು ಡೈಲಾಗ್, ಆದ್ರೂ ಸೂಪರ್ ಹಿಟ್

