Asianet Suvarna News Asianet Suvarna News

'3 ಈಡಿಯಟ್ಸ್'ನಲ್ಲಿ ಎಲ್ಲರನ್ನೂ ಬಿದ್ದು ಬಿದ್ದು ನಗಿಸಿದ ಅಖಿಲ್ ಮಿಶ್ರಾ ವಿಧಿವಶ

ಸೂಪರ್  ಹಿಟ್ '3 ಈಡಿಯಟ್ಸ್'  ಚಿತ್ರದಲ್ಲಿ ನಟಿಸಿದ್ದ ನಟ ಅಖಿಲ್ ಮಿಶ್ರಾ ದೇಹಾಂತ್ಯವಾಗಿದೆ. ಅವರ ದಿವ್ಯ ಆತ್ಮಕ್ಕೆ ಶಾಂತಿಯನ್ನು ಕೋರಿ ಬಹಳಷ್ಟು ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಶೋಕದ ಸುದ್ದಿಗೆ ಬಾಲಿವುಡ್ ಅಂಗಳ ಅಕ್ಷರಶಃ ನಲುಗಿದೆ.

Bollywood super hit film 3 idiots actor Akhil Mishra passed away srb
Author
First Published Sep 21, 2023, 3:38 PM IST

ಬಾಲಿವುಡ್ ಅಂಗಳದಿಂದ ದುಃಖದ ಸುದ್ದಿಯೊಂದು ಹೊರಬಂದಿದೆ. ಒಂದು ಕಾಲದ ಸೂಪರ್ ಹಿಟ್ ಚಿತ್ರ '3 ಈಡಿಯಟ್ಸ್' ನ ನಟರೊಬ್ಬರು ಇಹಲೋಕ ತ್ಯಜಿಸಿದ್ದಾರೆ. ಆ ಚಿತ್ರದಲ್ಲಿ 'ಲೈಬ್ರರೇರಿಯನ್' ಪಾತ್ರದಲ್ಲಿ ಕಾಣಿಸಿಕೊಂಡು ಸಿನಿಮಾ ಪ್ರೇಕ್ಷಕರನ್ನು ಸಖತ್ತಾಗಿ ರಂಜಿಸಿದ್ದ 'ಅಖಿಲ್ ಮಿಶ್ರಾ' ನಮ್ಮನ್ನಗಲಿದ್ದಾರೆ. ಅವರ ನಿಧನದ ಈ ವಿಷಯ ಇಂದು (ಸೆಪ್ಟೆಂಬರ್ 21, 2023) ಜಗಜ್ಜಾಹೀರಾಗಿದೆ. 

ಅಖಿಲ್ ಮಿಶ್ರಾ ತಮ್ಮ ಕಿಚನ್‌ನಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. "ಅವರನ್ನು ಕಳೆದುಕೊಂಡು ನನ್ನ ಹೃದಯ ಒಡೆದು ಹೋಗಿದೆ. ನನ್ನ ದೇಹದ ಎರಡನೇ ಒಂದು ಭಾಗ ಹೊರಟುಹೋಗಿದೆ' ಎಂದು ಅವರ ಪತ್ನಿ ಸೂಜಾನೆ ಬರ್ನರ್ಟ್ ತಮ್ಮ ಗಂಡನನ್ನು ಕಳೆದುಕೊಂಡಿರುವ ದುಃಖದ ಸಮಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಗಣೇಶ ಹಬ್ಬದಂದು ಒಳ್ಳೆಯ ಕೆಲಸ ಮಾಡಿದ 'ಕನ್ನಡತಿ' ನಟ ಕಿರಣ್ ರಾಜ್ 

ಅಖಿಲ್ ಮಿಶ್ರಾ ಅವರನ್ನು ಕಳೆದುಕೊಂಡ ಬಾಲಿವುಡ್ ಮತ್ತು ಭಾರತೀಯ ಸಿನಿಪ್ರೇಕ್ಷಕ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ಅಂದು 2009ರಲ್ಲಿ  ಅಮೀರ್ ಖಾನ್, ಆರ್ ಮಾಧವನ್ ಮತ್ತು ಶರ್ಮನ್ ಜೋಶಿ ನಟಿಸಿದ್ದ '3 ಈಡಿಯಟ್ಸ್' ಚಿತ್ರವು ಭಾರತವನ್ನು ಮೀರಿಯೂ ಬಹಳಷ್ಟು ಹೊರದೇಶಗಳಲ್ಲಿ ಸಹ ಸಕ್ಸಸ್ ಮಿಂಚು ಹರಿಸಿತ್ತು. ನಟಿ ಕರೀನಾ ಕಪೂರ್ ನಾಯಕಿಯಾಗಿದ್ದ ಈ ಚಿತ್ರವು ಅಂದು ಗಳಿಕೆ ದಾಖಲೆ ಕಂಡಿತ್ತು.

ಭಾರತ ಅಥವಾ ಇಂಡಿಯಾ ಚರ್ಚೆ ಬಗ್ಗೆ ಬಾಲಿವುಡ್ ಬೆಡಗಿ ಕಂಗನಾ ಬಾಯ್ಬಿಟ್ಟು ಹೇಳಿದ್ದೇನು? 

ಇದೀಗ, ಅಂತಹ ಸೂಪರ್  ಹಿಟ್ ಚಿತ್ರದಲ್ಲಿ ನಟಿಸಿದ್ದ ನಟ ಅಖಿಲ್ ಮಿಶ್ರಾ ದೇಹಾಂತ್ಯವಾಗಿದೆ. ಅವರ ದಿವ್ಯ ಆತ್ಮಕ್ಕೆ ಶಾಂತಿಯನ್ನು ಕೋರಿ ಬಹಳಷ್ಟು ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಶೋಕದ ಸುದ್ದಿಗೆ ಬಾಲಿವುಡ್ ಅಂಗಳ ಅಕ್ಷರಶಃ ನಲುಗಿದೆ. 3 ಈಡಿಯಟ್ಸ್ ಸಿನಿಮಾದ ಇಡೀ ಟೀಮ್ ತಮ್ಮ ಸಹನಟರಾಗಿದ್ದ ಅಖಿಲ್ ಮಿಶ್ರಾ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಒಟ್ಟಿನಲ್ಲಿ ಸೂಪರ್ ಹಿಟ್ ಚಿತ್ರದ ಕಲಾವಿದರೊಬ್ಬರು ನಮ್ಮನ್ನಗಲಿರುವುದು ನಿಜವಾಗಿಯೂ ದುಃಖಕರ ಸಂಗತಿ.

Follow Us:
Download App:
  • android
  • ios