Asianet Suvarna News Asianet Suvarna News

ಮಕ್ಕಳೊಂದಿಗೆ ವಿದೇಶಕ್ಕೆ ಹಾರಿದ ಸನ್ನಿ ಲಿಯೋನ್; ಹೇಗೆ ಸಾಧ್ಯವಾಯ್ತು?

ಕೊರೋನಾ ವೈರಸ್‌ಗೆ ಹೆದರಿ ಮಕ್ಕಳನ್ನು ರಕ್ಷಿಸಿಕೊಳ್ಳಲು ರಾತ್ರೋರಾತ್ರಿ ಭಾರತದಿಂದ ವಿದೇಶಕ್ಕೆ ಹಾರಿದ ಹಾಟ್‌ ಸುಂದರಿ ಸನ್ನಿ ಲಿಯೋನ್‌ ಆಂಡ್ ಫ್ಯಾಮಿಲಿ...
 

Bollywood sunny leone travels to US with family concerned for her kids
Author
Bangalore, First Published May 12, 2020, 2:22 PM IST

ಬಾಲಿವುಡ್‌ ಸುಂದರಿ, ನೀಲಿ ತಾರೆ ಸನ್ನಿ ಲಿಯೋನ್‌ ತಮ್ಮ ಕುಟುಂಬದವರ ಜೊತೆ ಲಾಸ್‌ ಏಂಜಲ್ಸ್‌ಗೆ ವಿಮಾನದಲ್ಲಿ ಹಾರಿದ್ದಾರೆ. ಈ ಬಗ್ಗೆ  ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬಹಿರಂಗವಾಗಿ ಬರೆದುಕೊಂಡು ಅಮ್ಮಂದಿರ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ.

ಮಹಾಮಾರಿ ಕೊರೋನಾ ವೈರಸ್‌ ಯಾವ ಜಾತಿ ಧರ್ಮ ಬೇಧ ಭಾವ ಮಾಡದೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ಸನ್ನಿ ಲಿಯೋನ್‌ ಹಾಗೂ  ಪತಿ ಡೇನಿಯಲ್ ವೆಬರ್ ತಮ್ಮ ಮೂವರು ಪುಟ್ಟ ಕಂದಮ್ಮಗಳ ಜೊತೆ ಲಾಸ್‌ ಏಂಜಲ್ಸ್‌ಗೆ ವಿಮಾನದಲ್ಲಿ ಪಯಣಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸನ್ನಿ ಮಾತು:

ಮೇ.10 ವಿಶ್ವ ಅಮ್ಮಂದಿರ ದಿನಾಚರಣೆಂದು ಸನ್ನಿ ಬರೆದುಕೊಂಡಿರುವುದು ಹೀಗೆ, 'ಎಲ್ಲಾ ಅಮ್ಮಂದಿರಿಗೂ ಹ್ಯಾಪಿ ಮದರ್ಸ್‌ ಡೇ. ನನ್ನ ಜೀವನದಲ್ಲಿ ನಮಗೆ ನಮ್ಮ ಮಕ್ಕಳೇ ಮೊದಲ ಆದ್ಯತೆ , ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ. ಯಾರಿಗೂ ಕಾಣಿಸಿಕೊಳ್ಳದೆ ತನ್ನ ಆರ್ಭಟವನ್ನು  ದಿನೇ ದಿನೆ ಹೆಚ್ಚು ಮಾಡುತ್ತಿರುವ ಕೊರೋನಾ ವೈರಸ್‌ ನಿಂದ  ನಮ್ಮ ಮಕ್ಕಳನ್ನು ಸೇಫ್‌ ಆಗಿರಿಸಲು ಡೇನಿಯಲ್‌ ಹಾಗೂ ನಾನು ನಮ್ಮ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರಲು ಅವಕಾಶವಿತ್ತು. ಲಾಸ್‌ ಏಂಜಲ್ಸ್‌ ಮನೆಯ ಗಾರ್ಡನ್‌ ಇದು.  ನನ್ನ ತಾಯಿಗೆ ನಾನು ಏನು ಮಾಡಬೇಕೆಂದು ಬಯಸುತ್ತಿದ್ದೆನೆಂದು  ತಿಳಿದಿದೆ. ಮಿಸ್‌ ಯು ಮಾಮ್‌ ' ಎಂದು ಬರೆದುಕೊಂಡಿದ್ದಾರೆ.

 

ಲಾಸ್‌ ಏಂಜಲ್ಸ್‌ ಡೈರೀಸ್‌:

ಎರಡು ದಿನಗಳ ಹಿಂದೆಯಷ್ಟೇ ಸನ್ನಿ ಲಾಸ್  ಏಂಜಲ್ಸ್‌ಗೆ ಪಯಣಿಸಿದ್ದು. ಮಕ್ಕಳ ಚಟುವಟಿಕೆಗಳ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡುತ್ತಲ್ಲೇ ಇರುತ್ತಾರೆ.  ಸನ್ನಿ ಹಾಗೂ ಡೇನಿಯಲ್‌ ಇಬ್ಬರಿಗೂ US ಪೌರತ್ವ ಇದ್ದು, 2012ರಲ್ಲಿ  ವೃತ್ತಿ ಜೀವನ ಆರಂಭಿಸಲು ಮುಂಬೈಗೆ ಬಂದು ನೆಲೆಸಿದ್ದರು. 

 

ಡೇನಿಯಲ್‌ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್‌ ಆಗಿದ್ದು ಕ್ವಾರಂಟೈನ್‌ ದಿನಗಳ  ಬಗ್ಗೆ ಪಾರ್ಟ್ಸ್‌ ರೀತಿಯಲ್ಲಿ ಅಪ್ಲೋಡ್‌ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ 'ಕ್ವಾರಂಟೈನ್‌ ಪಾರ್ಟ್‌-2. ಹೊಸ ವೈಬ್ಸ್‌ ಫೀಲ್‌ ಆಗುತ್ತಿದೆ. ಈಗ ನಾಟ್‌ ಬ್ಯಾಡ್‌' ಎಂದು ಲಾಸ್‌ ಏಂಜಲ್ಸ್‌ನ ಸ್ಟುಡಿಯೋ ಸಿಟಿ ಫೋಟೋ ಹಾಕಿದ್ದರು.

ಸನ್ನಿ ಮಕ್ಕಳಿಗೆ ಫೇಸ್‌ ಮಾಸ್ಕ್‌:

ನಟಿ ಸನ್ನಿ ಲಿಯೋನ್‌ ತನ್ನ ಮಕ್ಕಳನ್ನು ಕೊರೋನಾದಿಂದ ರಕ್ಷಿಸಲು ಈಗಾಗಲೇ  ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸುತ್ತಿದ್ದಾರೆ.  ಕುಟುಂಬ ಸಮೇತ ಮಾಸ್ಕ್‌ ಧರಿಸಿರುವ ಫೋಟೋವನ್ನು ಶೇರ್ ಮಾಡಿಕೊಂಡು ಎಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮನವಿ ಮಾಡಿಕೊಂಡಿದ್ದಾರೆ.

ಮಕ್ಕಳಿಗೆ ಮಾಸ್ಕ್ ಪಾಠ! ಕೊರೋನಾ ವಿರುದ್ಧ ಸನ್ನಿ ಲಿಯೋನ್ ಹೋರಾಟ!

Follow Us:
Download App:
  • android
  • ios