ತನ್ನ ಪ್ಯಾನ್ ಕಾರ್ಡ್‌ ಬಳಕೆ ಆಗಿರುವ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಕೊಟ್ಟ ಸನ್ನಿ. ಯಾರೀ ಅದೃಷ್ಟವಂತ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು...

ವಿಶ್ವವೇ ಮೆಚ್ಚುವಂಥ ಮಾದಕ ನಟಿ, ಬಾಲಿವುಡ್‌ (Bollywood) ಸುಂದರಿ ಹಾಗೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಪ್ಸರೆ ಸನ್ನಿ ಲಿಯೋನ್ (Sunny Leone) ಟ್ಟಿಟರ್‌ ಖಾತೆಯಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಕಾರಣ ಯಾರೋ ಪುಂಡ ತಮ್ಮ ಕ್ರೆಡಿಕ್ ಕಾರ್ಡ್‌ (Pancard) ಬಳಸಿಕೊಂಡು, ಸಾಲ ಪಡೆದುಕೊಂಡಿರುವುದಲ್ಲದೇ, ಆಕೆಯ ಖಾತೆಯಲ್ಲಿದ್ದ ಸಿಬಿಲ್ ಸ್ಕೋರ್‌ನ ಉಪಯೋಗ ಮಾಡಿಕೊಂಡಿದ್ದಾರೆ.

ಸನ್ನಿ ಟ್ವೀಟ್‌:
'ಈಗಷ್ಟೇ ನಡೆದ ಘಟನೆ. ಹುಚ್ಚ. ಯಾವನೋ ಈಡಿಯಟ್‌ (Idiot) ನನ್ನ ಕ್ರೆಡಿಟ್ ಕಾರ್ಡ್‌ ಬಳಸಿ, 2000 ರೂ. ತೆಗೆದುಕೊಂಡಿದ್ದಾನೆ' ಎಂದು ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಬ್ಯಾಂಕ್‌ ಮತ್ತು ಕಂಪನಿಗಳನ್ನು ಟ್ಯಾಗ್ ಮಾಡಿದ್ದರು. ಘಟನೆ ನಡೆದಿದ್ದು ಫೆಬ್ರವರಿ 17ರಂದು, 18 ರಷ್ಟರಲ್ಲಿ ಕಂಪನಿ ಸನ್ನಿಯನ್ನು ಸಂಪರ್ಕಿಸಿ ಸಾಲ ತೆಗೆದುಕೊಂಡಿರುವ ವ್ಯಕ್ತಿ ಮೇಲೆ ಕ್ರಮ ತೆಗೆದುಕೊಂಡಿದೆ. 

'ಧನ್ಯವಾದಗಳು ಐವಿಎಲ್‌ ಸೆಕ್ಯೂರಿಟೀಸ್‌, ಹೋಮ್‌ ಲೋನ್‌ (Home Loan), ಸಿಐಬಿಎಲ್‌. ಈ ಸಮಸ್ಯೆಯನ್ನು ಬಗೆ ಹರಿಸಿರುವುದಕ್ಕೆ ಹಾಗೂ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ಇದೇ ರೀತಿ ಕೆಲಸ ಮಾಡಿಕೊಂಡು ಹಣ ಮಾಡುತ್ತಿರುವವರ ಬಗ್ಗೆ ನೀವು ವಿಚಾರಿಸುತ್ತೀರಿ ಎಂದು ಭಾವಿಸಿರುವೆ. ಇಷ್ಟು ಕೆಟ್ಟ ಜನರ ಜೊತೆ ಯಾರಿಗೂ ಮಾತನಾಡುವುದಕ್ಕೆ ಇಷ್ಟ ಇರುವುದಿಲ್ಲ. ಬೇರೆ ಜೀವನದಲ್ಲಿ ದೊಡ್ಡ ಕಿರಿಕಿರಿ,' ಎಂದು ಸನ್ನಿ ಲಿಯೋನ್ ಬರೆದುಕೊಂಡಿದ್ದರು. 

40 ವರ್ಷದ ಸುಂದರಿ ಸನ್ನಿ ಆರಂಭದಲ್ಲಿ ಮಾಡಿದ ಟ್ವೀಟ್‌ ಅನ್ನು (Tweet) ಡಿಲೀಟ್‌ ಮಾಡಿದ್ದಾರೆ. 'ನಾನು ಹೇಳಿದ ಹಾಗೆ ಸಮಸ್ಯೆ ಸರಿ ಆಗಿದೆ. ಅದಕ್ಕೆ ಮೊದಲು ಮಾಡಿದ ಟ್ವೀಟ್‌ ಅನ್ನು ಡಿಲೀಟ್ ಮಾಡಿರುವೆ,' ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸನ್ನಿ ಈ ರೀತಿ ಅನೇಕರು ಫ್ರಾಡ್‌ಗಳಿಂದ (Fraud) ಸಮಸ್ಯೆ ಎದುರಿಸಿದ್ದಾರೆ. ಅವರೆಲ್ಲರೂ ಆಕೆಯನ್ನು ಟ್ಯಾಗ್ ಮಾಡಿ ತೊಂದರೆ ಹಂಚಿ ಕೊಂಡಿದ್ದಾರೆ. ಅವರೆಲ್ಲರ ಟ್ಟೀಟ್‌ಗೆ ಸನ್ನಿ ಸಂಬಂಧಿಸಿದ್ದವರನ್ನು ಟ್ಯಾಗ್ ಮಾಡಿದ್ದಾರೆ. 

Sunny Leone In Maldives: ದ್ವೀಪರಾಷ್ಟ್ರದಲ್ಲಿ ಬಾಲಿವುಡ್ ಸುಂದರಿ..!

ಸೆಲೆಬ್ರಿಟಿಗಳ ಜೊತೆ ಮಾತನಾಡಬೇಕು ಅಂದ್ರೆ ಎಷ್ಟೆಲ್ಲಾ ಕಷ್ಟ ಪಡಬೇಕು? ಅವರ ಮೊಬೈಲ್‌ ನಂಬರ್ (Mobile Number) ಸಿಗುವುದೇ ಕಷ್ಟ. ಅಂತಹುದ್ರಲ್ಲಿ ಈ ವ್ಯಕ್ತಿ ಆಕೆಯ ಪ್ಯಾನ್‌ ಕಾರ್ಡ್‌ ಕಂಡು ಹಿಡಿದು, ಅದನ್ನು ಬಳಸಿಕೊಂಡಿದ್ದಾರೆ. ಕೋಟಿಯಲ್ಲಿ ಹಣ ಮಾಡಿರಬಹುದು ಅಂದು ಕೊಂಡರೆ ಬರೀ ಎರಡು ಸಾವಿರ ತೆಗೆದುಕೊಂಡಿದ್ದಾನೆ. ಅದಕ್ಕೆ ಇವನು ನಿಜವಾಗ್ಲೂ ದಡ್ಡನೇ ಇರಬೇಕು, ಎಂದು ನೆಟ್ಟಿಗರು (Netizens) ಕಾಮೆಂಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಸನ್ನಿ ತಮ್ಮ ನಾಲ್ಕು ವರ್ಷದ ಟ್ವಿನ್‌ (Twins) ಮಕ್ಕಳ ಹುಟ್ಟು ಹಬ್ಬವನ್ನು ಆದ್ಧೂರಿಯಾಗಿ ಆಚರಿಸಿದ್ದಾರೆ. ಇಡೀ ಮನೆಯನ್ನು ವಿಭಿನ್ನವಾಗಿ ಅಲಂಕಾರ ಮಾಡಿದ್ದರು. ಸನ್ನಿ ಮತ್ತು ಅವರ ಅತ್ತೆ ಒಂದೇ ಡಿಸೈನ್‌ ಇರುವ ಉಡುಪು ಧರಿಸಿದ್ದು ವಿಶೇಷವಾಗಿತ್ತು. ಇಬ್ಬರು ಮಕ್ಕಳು ಕೂಡ ಮ್ಯಾಚಿಂಗ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.