ಬಾಲಿವುಡ್‌ ಹ್ಯಾಂಡ್ಸಮ್ ನಟ ಸುನೀಲ್ ಶೆಟ್ಟಿ ಈಗ ಟಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಲವರ್ ಬಾಯ್ ವಿಜಯ್ ದೇವರಕೊಂಡಗೆ 'ಪೈಟರ್' ಚಿತ್ರದಲ್ಲಿ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ವಿಜಯ್ ದೇವರಕೊಂಡಗೆ ಬಿಗ್ ಬ್ರೇಕ್ ಕೊಟ್ಟ 'ಅರ್ಜುನ್ ರೆಡ್ಡಿ'ಗೆ 3 ವರ್ಷ..!

ಕಿಚ್ಚ ಸುದೀಪ್‌ ಜೊತೆ 'ಪೈಲ್ವಾನ್' ಚಿತ್ರದಲ್ಲಿ ಕಾಣಿಸಿಕೊಂಡ ಸುನೀತ್ ಶೆಟ್ಟಿ, ನಂತರ ದಕ್ಷಿಣ ಭಾರತೀಯ ಸಿನಿ ಪ್ರೇಮಿಗಳು ಶೆಟ್ಟಿ ರಗಡ್‌ ಲುಕ್‌ ಹಾಗೂ ಅಭಿನಯಕ್ಕೆ ಫುಲ್ ಫಿದಾ ಆಗಿದ್ದರು. ಈಗ ಮತ್ತೊಮ್ಮೆ ವಿಜಯ್ ಜೊತೆ ನೋಡಲು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.

ಫೈಟರ್‌ ಒಂದು  ಆ್ಯಕ್ಷನ್ ಸಿನಿಮಾ  ಇದಾಗಿದ್ದು, ವಿಜಯ್ ಹಾಗೂ ಸುನೀಲ್ ಶೆಟ್ಟಿ ಇಬ್ಬರಿಗೂ ಹೆಚ್ಚಿನ ಆ್ಯಕ್ಷನ್‌ ದೃಶ್ಯಗಳು ಇರಲಿವೆ ಎಂದಿದ್ದಾರೆ. ಈಗಾಗಲೇ ಶೇ.40  ಚಿತ್ರೀಕರಣ ಮುಗಿದಿದೆ. ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸಬೇಕಿತ್ತು. ಆದರೆ ಕೊರೋನಾ ಕಾಟದಿಂದ ತಡವಾಗಿದೆ. ಎಲ್ಲವೂ ಅಂದುಕೊಂಡ ಪ್ಲಾನ್‌ನಲ್ಲಿ ನಡೆದರು ಚಿತ್ರೀಕರಣ ಪ್ರಾರಂಭಿಸುವುದಾಗಿ ತಂಡ ನಿರ್ಧರಿಸಿದೆ.

ದಕ್ಷಿಣ ಭಾರತೀಯ ಸೂಪರ್‌ ಸ್ಟಾರ್‌ಗಳ ಸ್ಟೈಲಿಶ್‌ ಬಿಯರ್ಡ್‌ ಲುಕ್‌ 

ಇನ್ನು ಕಳೆದ ವರ್ಷ ವಿಜಯ್ ಹಾಗೂ ಅನನ್ಯ ಚಿತ್ರೀಕರಣ ಫೋಟೋ ವೈರಲ್ ಆಗಿತ್ತು. ಬೈಕ್ ಟ್ಯಾಂಕ್‌ ಮೇಲೆ ಕುಳಿತುಕೊಂಡು ಇಬ್ಬರು ಫೋಸ್ ನೀಡುತ್ತಿದ್ದರು. ರಶ್ಮಿಕಾ ಆಯ್ತು, ವರ್ಲ್ಡ್ ಫೇಮಸ್‌ ಲವರ್‌ನಲ್ಲಿ ಮೂರು ನಟಿಯರು ಆಯ್ತು. ಈಗ ಬಾಲಿವುಡ್ ಚೆಲುವೆ ಬೇಕಾ ಎಂದು ನೆಟ್ಟಿಗರು ದೇವರಕೊಂಡ ಕಾಲೆಳೆದಿದ್ದರು.