ಪಾಪರಾಜಿಗಳ ಮೇಲೆ ಕೋಪಗೊಂಡ ರಣಬೀರ್, ರಿಯಾಕ್ಟ್ ಮಾಡದ ಆಲಿಯಾ

ರಣಬೀರ್ ಕಪೂರ್ ಕೋಪಕ್ಕೆ ಪಾಪರಾಜಿಗಳು ತುತ್ತಾಗಿದ್ದಾರೆ. ಜೋಡಿ ಕಪಲ್ ಹೊರಗೆ ಬರ್ತಿದ್ದಂತೆ ಮುತ್ತಿಕೊಂಡ ಪಾಪರಾಜಿಗಳನ್ನು ನೋಡಿ ರಣಬೀರ್ ತಾಳ್ಮೆ ಕಳೆದುಕೊಂಡಿದ್ದಾರೆ. ಅದ್ರ ವಿಡಿಯೋ ಈಗ ವೈರಲ್ ಆಗಿದೆ. 
 

Bollywood Star Ranbir Kapoor angry on paparazzi roo

ಸೆಲೆಬ್ರಿಟಿಗಳು (celebrities) ಎಲ್ಲೇ ಹೋದ್ರೂ ಪಾಪರಾಜಿಗಳು ಹಿಂದೆ ಬರ್ತಾರೆ. ಎಲ್ಲ ಟೈಂನಲ್ಲೂ ಸೆಲೆಬ್ರಿಟಿಗಳ ಮೂಡ್ ಒಂದೇ ರೀತಿ ಇರೋದಿಲ್ಲ. ಪಬ್ ನಿಂದ ಹೊರಗೆ ಬರಲಿ, ಮನೆಯಿಂದ ಹೊರಗೆ ಬರಲಿ ಇಲ್ಲ ಸಾವಿನ ಮನೆಗೆ ಹೋಗ್ತಿರಲಿ, ಕ್ಯಾಮರಾ ಕಣ್ಣು ಅವರನ್ನು ಸೆರೆಹಿಡಿದಾಗ ಕೆಲ ಬಾರಿ ಸೆಲೆಬ್ರಿಟಿಗಳು ಕಿರಿಕಿರಿಗೊಳಗಾಗ್ತಾರೆ. ಇದಕ್ಕೀಗ ಬಾಲಿವುಡ್ (Bollywood) ಸ್ಟಾರ್ ರಣಬೀರ್ ಕಪೂರ್ (Ranbir Kapoor ) ಸೇರಿದ್ದಾರೆ. ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ರಣಬೀರ್ ಕಪೂರ್, ಪಾಪರಾಜಿ (Paparazzi)ಗಳನ್ನು ತರಾಟೆಗೆ ತೆಗೆದುಕೊಂಡು, ಅವರನ್ನು ನೋಗ್ತಾ ಕಾರಿನೊಳಗೆ ಹೋಗಿದ್ದಾರೆ. ರಣಬೀರ್ ಜೊತೆ ಆಲಿಯಾ ಭಟ್ (Alia Bhatt) ಕೂಡ ಇದ್ರು. ಆಲಿಯಾ, ಯಾವುದೇ ರಿಯಾಕ್ಷನ್ ನೀಡಿಲ್ಲ. ರಣಬೀರ್ ಹಾಗೂ ಆಲಿಯಾ ನೋಡ್ತಿದ್ದಂತೆ ಕ್ಯಾಮರಾಗಳು ಅವರನ್ನು ಮುತ್ತಿಕೊಂಡಿವೆ. ಅವರಿಗೆ ಕಾರ್ ಬಳಿ ಬರೋದು ಕಷ್ಟವಾಗಿತ್ತು. ಈ ಸಮಯದಲ್ಲಿ ರಣಬೀರ್ ಕೋಪಗೊಂಡಿದ್ದಾರೆ. 

ಏನ್ ಮಾಡ್ತಿದಿರಿ ನೀವೆಲ್ಲ, ಏನ್ ಮಾಡ್ತಿದಿರಿ ನೀವೆಲ್ಲ ಎನ್ನುವ ರಣಬೀರ್ ಕಪೂರ್, ಅವರನ್ನು ಪಕ್ಕಕ್ಕೆ ತಳ್ಳಿ, ಆಲಿಯಾಗೆ ಕಾರು ಹತ್ತಲು ಅವಕಾಶ ಮಾಡಿಕೊಡ್ತಾರೆ. ನಂತ್ರ ಅವರು ಕಾರ್ ಹತ್ತುತ್ತಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪಾರ್ಟಿ ಮುಗಿಸಿ ಮನೆಗೆ ಹೋಗ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಪೂರ್ ಮತ್ತು ಭಟ್ ಕುಟುಂಬಗಳು ಆಲಿಯಾ ತಾಯಿ ಸೋನಿ ರಜ್ದಾನ್ ಹುಟ್ಟುಹಬ್ಬವನ್ನು ಆಚರಿಸಲು ಒಂದುಗೂಡಿತ್ತು. ನೀತು ಕಪೂರ್, ಮಹೇಶ್ ಭಟ್, ಪೂಜಾ ಭಟ್ ಮತ್ತು ಶಾಹೀನ್ ಭಟ್ ಸಹ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 

ಬಾಲಿವುಡ್​ ತಾರೆಯರ ಮರ್ಯಾದೆ ಹೀಗೆ ತೆಗೆಯೋದಾ ಕಂಗನಾ? ಬಿದ್ದೂ ಬಿದ್ದೂ ನಕ್ಕ ಪ್ರೇಕ್ಷಕರು

ರಣಬೀರ್ ವರ್ತನೆಯನ್ನು ಕೆಲ ಫ್ಯಾನ್ಸ್ ಸಮರ್ಥಿಸಿಕೊಂಡ್ರೆ ಮತ್ತೆ ಕೆಲವರು ಕಿಡಿಕಾರಿದ್ದಾರೆ. ಪಾಪರಾಜಿಗಳು ಎಲ್ಲಿಗೆ ಹೋದ್ರೂ ಹಿಂದೆ ಬರ್ತಾರೆ. ಸೆಲೆಬ್ರಿಟಿಗಳಿಗೂ ಪ್ರೈವಸಿ ಅಗತ್ಯವಿದೆ. ರಣಬೀರ್ ಏನ್ ಮಾಡಿದ್ದಾರೋ ಅದು ಸೂಕ್ತವಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಸೆಲೆಬ್ರಿಟಿಗಳಿಗೆ ಅನೇಕ ಬಾರಿ ಪಾಪರಾಜಿಗಳು ಹಿಂಸೆ ನೀಡ್ತಾರೆ, ಕ್ಯಾಮರಾ ಮುಂದೆ ರಣಬೀರ್ ನಾಟಕ ಮಾಡ್ತಿಲ್ಲ. ಅವರ ವ್ಯಕ್ತಿತ್ವವನ್ನು ತೋರಿಸಿದ್ದಾರೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ರಣಬೀರ್, ಫ್ಯಾನ್ಸ್ ಗೆ ಬೆಂಬಲ ನೀಡ್ತಾರೆ. ದುಬೈನಲ್ಲಿ ಅವರನ್ನು ಎರಡು ಬಾರಿ ನಾನು ಭೇಟಿಯಾಗಿದ್ದು, ಅವರು ವಿನಮ್ರ ಸ್ವಭಾವದವರು. ಈ ವಿಡಿಯೋ ನೋಡಿ ಅವರನ್ನು ತೆಗಳುವ ಅಗತ್ಯವಿಲ್ಲ ಎಂದಿದ್ದಾರೆ ಇನ್ನೊಬ್ಬ ಅಭಿಮಾನಿ. ಇನ್ನು ಕೆಲವರು ರಣಬೀರ್ ವರ್ತನೆಯನ್ನು ಖಂಡಿಸಿದ್ದಾರೆ. ಆನಿಮಲ್ ಸಿನಿಮಾ ಮಾಡಿ ಅದ್ರಂತೆ ರಣಬೀರ್ ವರ್ತಿಸುತ್ತಿದ್ದಾರೆ. ಪಾಪರಾಜಿಗಳು ಸರಿ ಅಂತ ನಾನು ಹೇಳ್ತಿಲ್ಲ. ಅದ್ರೆ ಅವರನ್ನು ಇಷ್ಟು ಕೆಟ್ಟದಾಗಿ ನೋಡ್ಬಾರದು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. 

ಈ ಮಧ್ಯೆ ಆಲಿಯಾ ಬಗ್ಗೆಯೂ ಕೆಲ ಕಮೆಂಟ್ ಬಂದಿದೆ. ಆಲಿಯಾ ಯಾಕೆ ಹೀಗಿದ್ದಾರೆ? ಅವರ ಮೂಡ್ ಆಫ್ ಆಗಿದ್ಯಾ ಇಲ್ಲ ಬೇಸರದಲ್ಲಿದ್ದಾರಾ ಎಂಬುದು ಫ್ಯಾನ್ಸ್ ಪ್ರಶ್ನೆ. ಆಲಿಯಾ ಮೇಲೆ ಕೋಪಗೊಂಡ ರಣಬೀರ್, ಪಾಪರಾಜಿಗಳ ಮೇಲೆ ಅದನ್ನು ತೋರಿಸಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರ್ತಿವೆ.

ಪವನ್ ಕಲ್ಯಾಣ್ ದಾಂಪತ್ಯ, ಮಕ್ಕಳ ಸಂಬಂಧದ ರಹಸ್ಯ ಬಿಚ್ಚಿಟ್ಟ ರೇಣು ದೇಸಾಯಿ!

ಬಾಲಿವುಡ್ ನ ಸೂಪರ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್, ತಮ್ಮ ಕೆಲಸದಲ್ಲಿ ಬ್ಯುಸಿಯಿದ್ದಾರೆ.  ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಚಿತ್ರ  ಲವ್ ಅಂಡ್ ವಾರ್ ನಲ್ಲಿ ಆಲಿಯಾ ಭಟ್, ರಣಬೀರ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಇದ್ರಲ್ಲಿ ವಿಕ್ಕಿ ಕೌಶಲ್ ಕೂಡ ನಟಿಸ್ತಿದ್ದಾರೆ.  ಚಿತ್ರ ಮಾರ್ಚ್ 20, 2026 ರಂದು ತೆರೆಗೆ ಬರಲಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಜೊತೆ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ರಾಮನ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನು ಆಲಿಯಾ ಲವ್ ಅಂಡ್ ವಾರ್ ಜೊತೆಗೆ  ಆಲ್ಫಾದಲ್ಲಿ ಕಾಣಿಸಿಕೊಂಡಿದ್ದಾರೆ.  

 
 
 
 
 
 
 
 
 
 
 
 
 
 
 

A post shared by Pinkvilla (@pinkvilla)

Latest Videos
Follow Us:
Download App:
  • android
  • ios