ಪವನ್ ಕಲ್ಯಾಣ್ ದಾಂಪತ್ಯ, ಮಕ್ಕಳ ಸಂಬಂಧದ ರಹಸ್ಯ ಬಿಚ್ಚಿಟ್ಟ ರೇಣು ದೇಸಾಯಿ!
ಆಂಧ್ರ ಪ್ರದೇಶ ರಾಜ್ಯದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬಗ್ಗೆ ಮಾಜಿ ಹೆಂಡತಿ ರೇಣು ದೇಸಾಯಿ ಅವರು ಕೆಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಪವನ್ ಕಲ್ಯಾಣ್ ಹೆಂಡತಿಯೊಂದಿಗೆ ಇಟ್ಟುಕೊಂಡಿದ್ದ ಸಂಬಂಧ ಹಾಗೂ ಮಕ್ಕಳೊಂದಿಗೆ ಈಗಲೂ ಇರುವ ಒಡನಾಟದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ, ಹೆಂಡತಿ ಮಕ್ಕಳಿಗಾಗಿ ಪವನ್ ಕಲ್ಯಾಣ ಹಲವು ಭಾಷೆಗಳನ್ನು ಕಲಿತಿದ್ದಾರೆ.
ರೇಣು ದೇಸಾಯಿಗೆ ವಿಚ್ಛೇದನ ನೀಡಿದ ಪವನ್ ಕಲ್ಯಾಣ್ ರಷ್ಯನ್ ನಟಿ ಅನ್ನಾ ಲೆಜೆನೋವಾ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ರೇಣು ದೇಸಾಯಿ ಜೊತೆ ಅಕೀರಾ ಮತ್ತು ಆದ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನದ ನಂತರ ರೇಣು ದೇಸಾಯ್ ಪುಣೆಗೆ ತೆರಳಿದರು. ಅಲ್ಲಿಯೇ ಮಕ್ಕಳಾದ ಅಕೀರಾ ಮತ್ತು ಆದ್ಯ ವಿದ್ಯಾಭ್ಯಾಸ ಮಾಡಿಸಿ ಬೆಳೆಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಈಗ ರೇಣು ದೇಸಾಯಿ ಹೈದರಾಬಾದ್‌ಗೆ ಬಂದು ನೆಲೆಸಿದ್ದಾರೆ.
ವಿಚ್ಛೇದನದ ನಂತರವೂ ರೇಣು ದೇಸಾಯಿ ಪುಣೆಯಲ್ಲಿದ್ದಾಗ ಮಕ್ಕಳನ್ನು ಭೇಟಿ ಮಾಡಲು ಪವನ್ ಕಲ್ಯಾಣ್ ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದರಂತೆ. ಪವನ್ ಕಲ್ಯಾಣ್ ಮತ್ತು ಮಕ್ಕಳು ಏನು ಮಾತನಾಡುತ್ತಾರೆ, ಯಾವ ಭಾಷೆಯಲ್ಲಿ ಮಾತನಾಡುತ್ತಾರೆ ಎಂಬುದನ್ನು ರೇಣು ದೇಸಾಯಿ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಆದ್ಯ ಜೊತೆ ಒಂದು ಭಾಷೆಯಲ್ಲಿ, ಅಕೀರಾ ಜೊತೆ ಇನ್ನೊಂದು ಭಾಷೆಯಲ್ಲಿ ಪವನ್ ಮಾತನಾಡುತ್ತಾರಂತೆ.
ಪವನ್ ಕಲ್ಯಾಣ್ ರೇಣು ದೇಸಾಯಿ ಜೊತೆ ಸ್ನೇಹ ಉಳಿಸಿಕೊಂಡಿದ್ದಾರೆ. ಮಕ್ಕಳಿಗೆ ಒಳ್ಳೆಯ ತಂದೆಯಾಗಿದ್ದಾರೆ. ಪವನ್ ಕಲ್ಯಾಣ್ ನನಗೆ ಒಂದು ರೂಪಾಯಿ ಕೊಟ್ಟಿಲ್ಲ ಎಂದು ರೇಣು ದೇಸಾಯಿ ಹಲವು ಬಾರಿ ಹೇಳಿದ್ದಾರೆ. ನಾನು ನನ್ನ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದೆ. ಆ ಹೂಡಿಕೆ ಚೆನ್ನಾಗಿ ಲಾಭ ತಂದುಕೊಟ್ಟಿದೆ. ಆ ಹಣದಿಂದ ಮಕ್ಕಳನ್ನು ಸಾಕಿದ್ದೇನೆ ಎಂದು ಅವರು ಹೇಳುತ್ತಾರೆ. ಆದರೆ, ಪವನ್ ಕಲ್ಯಾಣ್ ಆಗಾಗ್ಗೆ ರೇಣು ದೇಸಾಯಿಗೆ ಹಣ ಕೊಡುತ್ತಾರೆ ಎಂಬ ವಾದವೂ ಇದೆ.
ಪವನ್ ಕಲ್ಯಾಣ್ ಆಗಾಗ್ಗೆ ಪುಣೆಗೆ ಹೋಗಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದರು. ಮಕ್ಕಳು ಭೇಟಿ ಮಾಡಬೇಕೆಂದು ಕರೆ ಮಾಡಿದರೆ ಪವನ್ ಕಲ್ಯಾಣ್ ಪುಣೆಗೆ ಹೋಗುತ್ತಿದ್ದರು ಎಂದು ಓಪನ್ ಹಾರ್ಟ್ ವಿತ್ ಆರ್‌ಕೆ ಕಾರ್ಯಕ್ರಮದಲ್ಲಿ ರೇಣು ದೇಸಾಯಿ ಕೆಲವು ಆಸಕ್ತಿಕರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಮಗಳು ಆದ್ಯಾ ತುಂಬಾ ಹಠಮಾರಿ. ಅವಳು ತನ್ನ ತಂದೆಗೆ ಕರೆ ಮಾಡಿ, ನೀವು ಯಾವಾಗ ಭೇಟಿ ಮಾಡುತ್ತೀರಿ, ನಮ್ಮನ್ನು ನೋಡಬೇಕೆಂದು ಅನಿಸುವುದಿಲ್ಲವೇ, ನೀವು ತಕ್ಷಣ ಬರಬೇಕು ಎಂದು ಗಟ್ಟಿಯಾಗಿ ಹೇಳುತ್ತಾಳೆ. ಆದರೆ, ಮಗ ಅಕೀರಾ ಹಾಗಲ್ಲ. ಇನ್ನು ನಾನು ಮನೆಯಲ್ಲಿ ಮಗಳು ಆದ್ಯಾ ಜೊತೆ ಮರಾಠಿಯಲ್ಲಿ ಮಾತನಾಡುತ್ತೇನೆ. ಅವಳು ನನ್ನ ಜೊತೆ ಮರಾಠಿಯಲ್ಲೇ ಮಾತನಾಡಬೇಕೆಂದು ಷರತ್ತು ಹಾಕಿದ್ದಾಳೆ. ಇನ್ನು ಮಗ ಅಕೀರಾ ಜೊತೆ ನಾನು ತೆಲುಗಿನಲ್ಲಿ ಮಾತನಾಡುತ್ತೇನೆ. ಅವನು ತನ್ನ ತಂದೆಯ ಭಾಷೆ ಮರೆಯಬಾರದು ಅಲ್ವಾ..? ಅದಕ್ಕೆ ಎಂದು ರೇಣು ದೇಸಾಯಿ ಹೇಳಿಕೊಂಡಿದ್ದಾರೆ.
ಅಕೀರಾ ಮತ್ತು ಪವನ್ ತೆಲುಗಿನಲ್ಲಿ ಮಾತನಾಡುತ್ತಾರೆ. ಅವರು ಜೀವನ, ತತ್ವಶಾಸ್ತ್ರದ ಬಗ್ಗೆ ಮಾತನಾಡುತ್ತಾರೆ. ಅವರ ನಡುವೆ ಸಿನಿಮಾ ಬಗ್ಗೆ ಮಾತನಾಡುವುದನ್ನು ನಾನು ಒಮ್ಮೆಯೂ ನೋಡಿಲ್ಲ. ನಾನೂ ಅವರ ಜೊತೆ ಮಾತನಾಡುತ್ತೇನೆ. ವಿಚ್ಛೇದನದ ನಂತರ ನಾವು ಸ್ನೇಹಿತರಾಗಿ ಉಳಿದಿದ್ದೇವೆ ಎಂದು ನಾನು ಈ ಹಿಂದೆಯೂ ಹೇಳಿದ್ದೇನೆ.
ಆದ್ಯ ತನ್ನ ತಂದೆಯ ಜೊತೆ ಮರಾಠಿಯಲ್ಲಿ ಮಾತನಾಡುತ್ತಾಳೆ. ನನಗಾಗಿ ಅವರು ಭಾಷೆ ಕಲಿಯಲಿಲ್ಲ. ಮಗಳು ಆದ್ಯಗಾಗಿ ಮರಾಠಿ ಕಲಿತರು. ಆದ್ಯ ಮತ್ತು ಪವನ್ ಮರಾಠಿಯಲ್ಲಿ ಮಾತನಾಡುತ್ತಾರೆ ಎಂದು ರೇಣು ದೇಸಾಯಿ ಹೇಳಿದ್ದಾರೆ. ರೇಣು ದೇಸಾಯಿ ನೀಡಿರುವ ಈ ಹೇಳಿಕೆಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಪವನ್ ಕಲ್ಯಾಣ್ ಮತ್ತು ಅಕೀರಾ ನಂದನ್
ಇನ್ನು ಅನ್ನಾ ಲೆಜಿನೋವಾ ರಷ್ಯನ್ ಮೂಲದವರಾಗಿರುವುದರಿಂದ ಪವನ್ ಕಲ್ಯಾಣ್ ಆ ಭಾಷೆಯನ್ನೂ ಕಲಿತಿದ್ದಾರೆ ಎನ್ನಲಾಗಿದೆ. ಅವರು ರಷ್ಯನ್ ಭಾಷೆ ಮಾತನಾಡುತ್ತಾರಂತೆ. ಚೆನ್ನೈನಲ್ಲಿ ಬೆಳೆದಿರುವುದರಿಂದ ಅವರಿಗೆ ತಮಿಳು ಬರುತ್ತದೆ. ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪವನ್ ಕಲ್ಯಾಣ್ ಕನ್ನಡದಲ್ಲಿ ಮಾತನಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಪವನ್ ಕಲ್ಯಾಣ್ ಒಟ್ಟಾರೆ ಪಂಚ ಭಾಷೆಗಳ ನಿಪುಣ ಎಂದೇ ಹೇಳಬಹುದು.
ಅಕೀರಾ ಈಗ ಹದಿಹರೆಯ ದಾಟಿ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಪವನ್ ಕಲ್ಯಾಣ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಅವರ ನಟನಾ ವಾರಸುದಾರರಾಗಿ ಅಕೀರಾ ಬೆಳ್ಳಿತೆರೆಗೆ ಪರಿಚಯವಾಗಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ.
ಪವನ್ ಕಲ್ಯಾಣ್ ನಟಿಸುತ್ತಿರುವ ಮೂರು ಚಿತ್ರಗಳು ಸೆಟ್‌ನಲ್ಲಿವೆ. ಹರಿ ಹರ ವೀರಮಲ್ಲು ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಸಮಯ ಸಿಕ್ಕಾಗಲೆಲ್ಲಾ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರಂತೆ. ಸುಜಿತ್ ನಿರ್ದೇಶನದ 'ಓಜಿ' ಮತ್ತು ಹರೀಶ್ ಶಂಕರ್ ಜೊತೆ 'ಉಸ್ತಾದ್ ಭಗತ್ ಸಿಂಗ್' ಚಿತ್ರಗಳಿಗೆ ಪವನ್ ಕಲ್ಯಾಣ್ ಒಪ್ಪಿಕೊಂಡಿದ್ದಾರೆ. ಇವುಗಳನ್ನೂ ಪೂರ್ಣಗೊಳಿಸಬೇಕಿದೆ.