ನವದೆಹಲಿ(ಜೂ.05)  ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಸೆಲೆಬ್ರಿಟಿಗಳನ್ನೊಳಗೊಂಡ ಪೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ಭಾರತದ ಓರ್ವ ಸೆಲೆಬ್ರಿಟಿ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮಾತ್ರ ಸ್ಥಾನ ಪಡೆದುಕೊಂಡಿದ್ದು ಮತ್ಯಾರ ಹೆಸರು ಇಲ್ಲ. ಕಳೆದ ವರ್ಷ 65 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ 33 ಸ್ಥಾನದಲ್ಲಿದ್ದ ಅಕ್ಷಯ್ ಕುಮಾರ್ ಈ ಬಾರಿ ಅಂದಾಜು 48.5 ಮಿಲಿಯನ್ ಡಾಲರ್ ನೊಂದಿಗೆ 52ನೇ ಸ್ಥಾನಕ್ಕೆ ಇಳಿದಿದ್ದಾರೆ. 

ಪೊಲೀಸ್ ಫೌಂಡೇಶನ್ ಗೆ ಎರಡು ಕೋಟಿ ನೀಡಿದ ಕುಮಾರ್

ಹಾಲಿವುಡ್ ದಿಗ್ಗಜ ವಿಲ್ ಸ್ಮಿತ್ ಅವರಂತಹ  ನಟರನ್ನು 52 ವರ್ಷದ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹಿಂದಿಕ್ಕಿದ್ದಾರೆ.   44.5 ಮಿಲಿಯನ್ ಡಾಲರ್  ಸಂಪಾದನೆಯೊಂದಿಗೆ ವಿಲ್ ಸ್ಮಿತ್  69ನೇ ಸ್ಥಾನದಲ್ಲಿದ್ದಾರೆ

ಅಕ್ಷಯ್ ಕುಮಾರ್ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರೆಂದು ಪೋರ್ಬ್ಸ್ ಬಣ್ಣಿಸಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಅಕ್ಷಯ್ ಕುಮಾರ್25  ಕೋಟಿ ರೂ. ಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದರು.

ಅಮೆರಿಕದ ಮಾಡೆಲ್ ಕೈಲೆ ಜೆನ್ನರ್  ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಸಂಭಾವನೆ ವರ್ಷಕ್ಕೆ 590 ಮಿಲಿಯನ್ ಡಾಲರ್!

ಕೈಲೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೆಮಸ್. ಇಸ್ಟಾ ಗ್ರ್ಯಾಮ್ ನಲ್ಲಿ 179  ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.  ಎರಡನೇ ಸ್ಥಾನವನ್ನು ಅಂತಾರಾಷ್ಟ್ರೀಯ ಗಾಯಕ ಕಾನ್ಯೆ ವೆಸ್ಟ್ ಪಡೆದುಕೊಂಡಿದ್ದಾರೆ.   ಟೆನಿಸ್ ಸ್ಟಾರ್ ರೋಜರ್ ಫೆಡರರ್, ಪುಟ್ಬಾಲ್ ತಾರೆ ರೋನಾಲ್ಡೋ, ಲಿಯೋನೆಲ್ ಮೆಸ್ಸಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.